ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಕಳೆದ ಭಾನುವಾರ 35 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿವೆ. ಆದರೆ ಸೋಮವಾರ (ಆಗಸ್ಟ್ 23) ತೈಲ ದರದಲ್ಲಿ ಯಾವುದೇ ಬದಲಾವಣೆ ಮಾಡಿದೆ ಯಥಾಸ್ಥಿತಿ ಕಾಯ್ದುಕೊಂಡಿವೆ.
ಅಂತಾರಾಷ್ಟ್ರೀಯವಾಗಿಯೂ ಕಚ್ಚಾ ಬೆಲೆ ಇಂದು ಸುದೀರ್ಘವಾದ ನಷ್ಟದ ಹಾದಿಯನ್ನು ಸಾಗಿದ ನಂತರ ನಿನ್ನೆ ತೈಲ ದರ ಇಳಿಕೆಗೊಂಡಿತ್ತು. ಪ್ರಪಂಚದಾದ್ಯಂತದ ಡೆಲ್ಟಾ ರೂಪಾಂತರ ಪ್ರಕರಣಗಳ ತೀವ್ರತೆಯ ಕಾರಣದಿಂದಾಗಿ ಬೇಡಿಕೆಯ ಕಾಳಜಿ ಹೆಚ್ಚಾಗಿದ್ದು, ತೈಲ ಉತ್ಪಾದನಾ ಸಂಸ್ಥೆಗಳು ಕಚ್ಚಾ ತೈಲ ಬೆಲೆ ಇಳಿಕೆಯತ್ತ ಮನಸ್ಸು ಮಾಡಿವೆ.
ಲಂಡನ್‌ನಲ್ಲಿ ಬ್ರೆಂಟ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 65 ಡಾಲರ್ ಸಮೀಪವಿದ್ದು, ಡಾಲರ್ ಬೆಲೆಯಲ್ಲಿ ಸರಕುಗಳು ಒತ್ತಡದಲ್ಲಿವೆ. ಕ್ಯಾಲೆಂಡರ್ ವರ್ಷದ ಮೊದಲಾರ್ಧದಲ್ಲಿ ಅದ್ಭುತವಾದ ಲಾಭವನ್ನು ಕಂಡ ತೈಲ ಕಂಪನಿಗಳು ಹೊಸ ಯೋಜನೆಯತ್ತ ಆಲೋಚಿಸಿವೆ.
ಪೆಟ್ರೋಲ್ ದರಗಳು ಜುಲೈ 17 ರಂದು ಪ್ರತಿ ಲೀಟರ್‌ಗೆ 30 ಪೈಸೆ ಹೆಚ್ಚಾದ ಬಳಿಕ ಆಗಸ್ಟ್ 22ರಂದು ಲೀಟರ್‌ಗೆ 15 ರಿಂದ 20 ಪೈಸೆ ಇಳಿಸಲಾಗಿದೆ. ಸೋಮವಾರ (ಆಗಸ್ಟ್ 23) ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 101.64 ರೂಪಾಯಿ ನಷ್ಟಿದ್ದು, ಡೀಸೆಲ್ ದರವು ಪ್ರತಿ ಲೀಟರ್‌ಗೆ 89.07 ರೂಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 23: 105.13
ಆಗಸ್ಟ್ 22: 105.13
ಆಗಸ್ಟ್ 21: 105.25
ಆಗಸ್ಟ್ 20: 105.25
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 23: 94.49
ಆಗಸ್ಟ್ 22: 94.49
ಆಗಸ್ಟ್ 21: 94.65
ಆಗಸ್ಟ್ 20: 94.65
ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 23: 101.64
ಆಗಸ್ಟ್ 22: 101.64
ಆಗಸ್ಟ್ 21: 101.84
ಆಗಸ್ಟ್ 20: 101.84
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 23: 89.07
ಆಗಸ್ಟ್ 22: 89.07
ಆಗಸ್ಟ್ 21: 89.27
ಆಗಸ್ಟ್ 20: 89.27
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 23: 107.66
ಆಗಸ್ಟ್ 22: 107.66
ಆಗಸ್ಟ್ 21: 107.83
ಆಗಸ್ಟ್ 20: 107.83
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 23: 96.64
ಆಗಸ್ಟ್ 22: 96.64
ಆಗಸ್ಟ್ 21: 96.84
ಆಗಸ್ಟ್ 20: 96.84
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 23: 99.32
ಆಗಸ್ಟ್ 22: 99.32
ಆಗಸ್ಟ್ 21: 99.47
ಆಗಸ್ಟ್ 20: 99.47
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 23: 93.66
ಆಗಸ್ಟ್ 22: 93.66
ಆಗಸ್ಟ್ 21: 93.84
ಆಗಸ್ಟ್ 20: 93.84
ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 23: 105.69
ಆಗಸ್ಟ್ 22: 105.69
ಆಗಸ್ಟ್ 21: 105.83
ಆಗಸ್ಟ್ 20: 105.83
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 23: 97.15
ಆಗಸ್ಟ್ 22: 97.15
ಆಗಸ್ಟ್ 21: 97.33
ಆಗಸ್ಟ್ 20: 97.33
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.


Click it and Unblock the Notifications