For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್, ಡೀಸೆಲ್ ದರ ಇಳಿಕೆ: ಆಗಸ್ಟ್ 24ರ ದರ ಹೀಗಿದೆ

|

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಒಂದು ದಿನದ ವಿರಾಮದ ಬಳಿಕ ಮಂಗಳವಾರ (ಆಗಸ್ಟ್‌ 24) ಪೆಟ್ರೋಲ್, ಡೀಸೆಲ್ ದರವನ್ನು ಇಳಿಕೆ ಮಾಡಿವೆ. 35 ದಿನಗಳ ಬಳಿಕ ಕಳೆದ ಭಾನುವಾರ ಪೆಟ್ರೋಲ್ ದರ ಇಳಿಕೆಯಾಗಿತ್ತು. ಅದಾದ ಬಳಿಕ ಇಂದು ಪೆಟ್ರೋಲ್ ದರ ಲೀಟರ್‌ಗೆ 15 ಪೈಸೆ ಮತ್ತು ಡೀಸೆಲ್ ದರವೂ ಲೀಟರ್‌ಗೆ 15 ಪೈಸೆ ಕಡಿತಗೊಂಡಿದೆ.

ತೈಲ ದರ ಪರಿಷ್ಕರಣೆಯಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 101.49 ರೂಪಾಯಿ ಮತ್ತು ಡೀಸೆಲ್ ದರ ಲೀಟರ್‌ಗೆ 88.92 ರೂಪಾಯಿಗೆ ತಲುಪಿದೆ.

ಅಂತಾರಾಷ್ಟ್ರೀಯವಾಗಿ, ಕಚ್ಚಾ ತೈಲ ಡಬ್ಲ್ಯೂಟಿಐ ಫ್ಯೂಚರ್ಸ್ ಅಕ್ಟೋಬರ್ ವಿತರಣೆಗೆ 0.29% ರಷ್ಟು ಹೆಚ್ಚಾಗಿದ್ದು, ಪ್ರತಿ ಬ್ಯಾರೆಲ್‌ಗೆ 65.84 ಡಾಲರ್ ಆಗಿದೆ. ಕಚ್ಚಾ ತೈಲ ಬೆಲೆಯಲ್ಲಿನ ಲಾಭದ ಮೇಲೆ, 10 ವರ್ಷಗಳ ಬೆಂಚ್ ಮಾರ್ಕ್ ಬಾಂಡ್ ಇಳುವರಿಯಲ್ಲಿ ಏರಿಕೆ ಕಂಡುಬಂದಿದೆ. ಕೊನೆಯ ಬೆಂಚ್‌ಮಾರ್ಕ್ ಇಳುವರಿ 0.4% ಲಾಭದೊಂದಿಗೆ $ 1.262 ಕ್ಕೆ ವಹಿವಾಟು ನಡೆಸಿತು.

ಪ್ರಪಂಚದಾದ್ಯಂತದ ಡೆಲ್ಟಾ ರೂಪಾಂತರ ಪ್ರಕರಣಗಳ ತೀವ್ರತೆಯ ಕಾರಣದಿಂದಾಗಿ ಬೇಡಿಕೆಯ ಕಾಳಜಿ ಹೆಚ್ಚಾಗಿದ್ದು, ತೈಲ ಉತ್ಪಾದನಾ ಸಂಸ್ಥೆಗಳು ಕಚ್ಚಾ ತೈಲ ಬೆಲೆ ಇಳಿಕೆಯತ್ತ ಮನಸ್ಸು ಮಾಡಿವೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 24: 104.98
ಆಗಸ್ಟ್‌ 23: 105.13
ಆಗಸ್ಟ್‌ 22: 105.13
ಆಗಸ್ಟ್‌ 21: 105.25


ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 24: 94.34
ಆಗಸ್ಟ್‌ 23: 94.49
ಆಗಸ್ಟ್‌ 22: 94.49
ಆಗಸ್ಟ್‌ 21: 94.65

ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಆಗಸ್ಟ್‌ 23ರ ಮಾರುಕಟ್ಟೆ ಬೆಲೆ ಇಲ್ಲಿದೆಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಆಗಸ್ಟ್‌ 23ರ ಮಾರುಕಟ್ಟೆ ಬೆಲೆ ಇಲ್ಲಿದೆ

ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 24: 101.49
ಆಗಸ್ಟ್‌ 23: 101.64
ಆಗಸ್ಟ್‌ 22: 101.64
ಆಗಸ್ಟ್‌ 21: 101.84


ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 24: 88.92
ಆಗಸ್ಟ್‌ 23: 89.07
ಆಗಸ್ಟ್‌ 22: 89.07
ಆಗಸ್ಟ್‌ 21: 89.27

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 24: 107.52
ಆಗಸ್ಟ್‌ 23: 107.66
ಆಗಸ್ಟ್‌ 22: 107.66
ಆಗಸ್ಟ್‌ 21: 107.83


ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 24: 96.48
ಆಗಸ್ಟ್‌ 23: 96.64
ಆಗಸ್ಟ್‌ 22: 96.64
ಆಗಸ್ಟ್‌ 21: 96.84

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 24: 99.20
ಆಗಸ್ಟ್‌ 23: 99.32
ಆಗಸ್ಟ್‌ 22: 99.32
ಆಗಸ್ಟ್‌ 21: 99.47


ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 24: 93.52
ಆಗಸ್ಟ್‌ 23: 93.66
ಆಗಸ್ಟ್‌ 22: 93.66
ಆಗಸ್ಟ್‌ 21: 93.84

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 24: 105.54
ಆಗಸ್ಟ್‌ 23: 105.69
ಆಗಸ್ಟ್‌ 22: 105.69
ಆಗಸ್ಟ್‌ 21: 105.83


ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 24: 96.99
ಆಗಸ್ಟ್‌ 23: 97.15
ಆಗಸ್ಟ್‌ 22: 97.15
ಆಗಸ್ಟ್‌ 21: 97.33

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary

Petrol Diesel Prices On 24 August 2021: Check Rates In Your City

Domestic petrol and Diesel Price Down on Tuesday in Many cities. Latest Rates Here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X