ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಭಾನುವಾರ (ಆಗಸ್ಟ್ 29) ಪೆಟ್ರೋಲ್, ಡೀಸೆಲ್ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿವೆ. ಕಳೆದ ಮಂಗಳವಾರ ಪೆಟ್ರೋಲ್, ಡೀಸೆಲ್ ದರ 15 ರಿಂದ 20 ಪೈಸೆ ಕಡಿತಗೊಂಡ ಬಳಿಕ ತೈಲ ದರ ಯಾವುದೇ ವ್ಯತ್ಯಾಸಗೊಂಡಿಲ್ಲ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 101.49 ರೂಪಾಯಿ ಮತ್ತು ಡೀಸೆಲ್ ದರ ಲೀಟರ್‌ಗೆ 88.92 ರೂಪಾಯಿನಷ್ಟಿದೆ. ಪ್ರಪಂಚದಾದ್ಯಂತದ ಡೆಲ್ಟಾ ರೂಪಾಂತರ ಪ್ರಕರಣಗಳ ತೀವ್ರತೆಯ ಕಾರಣದಿಂದಾಗಿ ಬೇಡಿಕೆಯ ಕಾಳಜಿ ಹೆಚ್ಚಾಗಿದ್ದು, ತೈಲ ಉತ್ಪಾದನಾ ಸಂಸ್ಥೆಗಳು ಕಚ್ಚಾ ತೈಲ ಬೆಲೆ ಇಳಿಕೆಯತ್ತ ಮನಸ್ಸು ಮಾಡಿವೆ.
ಅಂತಾರಾಷ್ಟ್ರೀಯ ತೈಲ ಬೆಲೆಗಳು ಮೇ 24 ರಿಂದ ಅತಿ ಕಡಿಮೆ ಮಟ್ಟಕ್ಕೆ ಕುಸಿಯಿತು. ಏಕೆಂದರೆ ಯುಎಸ್ ಫೆಡರಲ್ ರಿಸರ್ವ್ ಮುಂಬರುವ ತಿಂಗಳುಗಳಲ್ಲಿ ಆಸ್ತಿ ಖರೀದಿಗಳನ್ನು ಕಡಿತಗೊಳಿಸಲಿದೆ, ಸರಕುಗಳನ್ನು ಇಳಿಸುವುದು ಮತ್ತು ಕರೆನ್ಸಿಯನ್ನು ಹೆಚ್ಚಿಸುವುದು ಆಗಿದೆ. ಇದರ ನಡುವೆ ಅಂತಾರಾಷ್ಟ್ರೀಯ ತೈಲ ಬೆಲೆಗಳು ಮೇ ನಂತರ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದವು, ಸರಕುಗಳ ಎದುರು ಕರೆನ್ಸಿಯನ್ನು ಹೆಚ್ಚಿಸಿತು.
ಇದರ ನಡುವೆ ಪುದುಚೇರಿಯ ಸರ್ಕಾರ ಆಗಸ್ಟ್ 25 ರಂದು ಪ್ರಾದೇಶಿಕ ಆಡಳಿತವು ಗ್ಯಾಸೋಲಿನ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) 3% ಕಡಿಮೆ ಮಾಡಿದೆ ಎಂದು ಹೇಳಿತು.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 29: 104.98
ಆಗಸ್ಟ್ 28: 104.98
ಆಗಸ್ಟ್ 27: 104.98
ಆಗಸ್ಟ್ 26: 104.98
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 29: 94.34
ಆಗಸ್ಟ್ 28: 94.34
ಆಗಸ್ಟ್ 27: 94.34
ಆಗಸ್ಟ್ 26: 94.34
ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 29: 101.49
ಆಗಸ್ಟ್ 28: 101.49
ಆಗಸ್ಟ್ 27: 101.49
ಆಗಸ್ಟ್ 26: 101.49
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 29: 88.92
ಆಗಸ್ಟ್ 28: 88.92
ಆಗಸ್ಟ್ 27: 88.92
ಆಗಸ್ಟ್ 26: 88.92
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 29: 107.52
ಆಗಸ್ಟ್ 28: 107.52
ಆಗಸ್ಟ್ 27: 107.52
ಆಗಸ್ಟ್ 26: 107.52
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 29: 96.48
ಆಗಸ್ಟ್ 28: 96.48
ಆಗಸ್ಟ್ 27: 96.48
ಆಗಸ್ಟ್ 26: 96.48
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 29: 99.20
ಆಗಸ್ಟ್ 28: 99.20
ಆಗಸ್ಟ್ 27: 99.20
ಆಗಸ್ಟ್ 26: 99.20
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 29: 93.52
ಆಗಸ್ಟ್ 28: 93.52
ಆಗಸ್ಟ್ 27: 93.52
ಆಗಸ್ಟ್ 26: 93.52
ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 29: 105.54
ಆಗಸ್ಟ್ 28: 105.54
ಆಗಸ್ಟ್ 27: 105.54
ಆಗಸ್ಟ್ 26: 105.54
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 29: 96.99
ಆಗಸ್ಟ್ 28: 96.99
ಆಗಸ್ಟ್ 27: 96.99
ಆಗಸ್ಟ್ 26: 96.99
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.


Click it and Unblock the Notifications