ಪೆಟ್ರೋಲ್, ಡೀಸೆಲ್ ದರವನ್ನು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಭಾನುವಾರ (ಆಗಸ್ಟ್ 01) ಯಾವುದೇ ಬದಲಾವಣೆ ಮಾಡಿಲ್ಲ. ಈ ಮೂಲಕ ಪೆಟ್ರೋಲ್ ದರ, ಡೀಸೆಲ್ ದರವು ಸತತ 15 ದಿನ ಬದಲಾಗದೆ ಉಳಿದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಿರುವುದು ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಬ್ರೇಕ್ ಹಾಕಿದೆ. ಆದರೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 100 ರೂಪಾಯಿ ಗಡಿ ಹೋಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಂಡು 75.41ಯುಎಸ್ ಡಾಲರ್(1 USD=74.38ರೂ) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರು
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 1: 105.25 ರು
ಜುಲೈ 31: 105.25 ರು
ಜುಲೈ 30: 105.25 ರು
ಜುಲೈ 29: 105.25 ರು
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 1: 95.26 ರು
ಜುಲೈ 31: 95.26 ರು
ಜುಲೈ 30: 95.26 ರು
ಜುಲೈ 29: 95.26 ರು
ನವದೆಹಲಿ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 1: 101.84 ರು
ಜುಲೈ 31: 101.84 ರು
ಜುಲೈ 30: 101.84 ರು
ಜುಲೈ 29: 101.84 ರು
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 1: 89.87 ರು
ಜುಲೈ 31: 89.87 ರು
ಜುಲೈ 30: 89.87 ರು
ಜುಲೈ 29: 89.87 ರು
ಮುಂಬೈ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 1: 107.83 ರು
ಜುಲೈ 31: 107.83 ರು
ಜುಲೈ 30: 107.83 ರು
ಜುಲೈ 29: 107.83 ರು
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 1: 97.45 ರು
ಜುಲೈ 31: 97.45 ರು
ಜುಲೈ 30: 97.45 ರು
ಜುಲೈ 29: 97.45 ರು
ಚೆನ್ನೈ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 1: 102. 49 ರು (-10ಪೈಸೆ)
ಜುಲೈ 31: 102. 49 ರು (+10ಪೈಸೆ)
ಜುಲೈ 30: 102. 49 ರು (-18 ಪೈಸೆ)
ಜುಲೈ 29: 102. 67 ರು (+18 ಪೈಸೆ)
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 1: 94.39 ರು(-0.09 ಪೈಸೆ)
ಜುಲೈ 31: 94.48 ರು(+0.09 ಪೈಸೆ)
ಜುಲೈ 30: 94.39 ರು (-0.16 ಪೈಸೆ)
ಜುಲೈ 29: 94.55 ರು (+0.16 ಪೈಸೆ)
ಕೆಲ ರಾಜ್ಯಗಳು ಹೆಚ್ಚು ವ್ಯಾಟ್, ಸೆಸ್ ವಿಧಿಸುತ್ತಿವೆ
ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ ಹಾಗೂ ಒಡಿಶಾ ಹೆಚ್ಚು ವ್ಯಾಟ್, ಸೆಸ್ ವಿಧಿಸುತ್ತಿವೆ. ದೇಶದಲ್ಲಿ ಈ ರಾಜ್ಯಗಳಲ್ಲಿ ಇಂಧನ ದರ ದುಬಾರಿಯಾಗಿದೆ. ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಇಂಧನ ದರದ ಮೇಲೆ ತೆರಿಗೆ ಅತ್ಯಂತ ಕಡಿಮೆ ಇದೆ. ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ ಹಾಗೂ ಒಡಿಶಾ ಹೆಚ್ಚು ವ್ಯಾಟ್, ಸೆಸ್ ವಿಧಿಸುತ್ತಿವೆ. ದೇಶದಲ್ಲಿ ಈ ರಾಜ್ಯಗಳಲ್ಲಿ ಇಂಧನ ದರ ದುಬಾರಿಯಾಗಿದೆ. ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಇಂಧನ ದರದ ಮೇಲೆ ತೆರಿಗೆ ಅತ್ಯಂತ ಕಡಿಮೆ ಇದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 113ರೂ ನಷ್ಟಿದೆ, ಡೀಸೆಲ್ ಬೆಲೆ 102.95 ರೂ ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 100 ರೂ ಗಡಿ ದಾಟಿದೆ.


Click it and Unblock the Notifications