ಭಾರತದಲ್ಲಿ ಗುರುವಾರ (ಫೆಬ್ರವರಿ 11, 2021) ಸತತ ಮೂರನೇ ದಿನ ತೈಲ ಬೆಲೆಯಲ್ಲಿ ಏರಿಕೆ ಆಗಿದೆ. ಪೆಟ್ರೋಲ್ ದರ ಲೀಟರ್ ಗೆ 24ರಿಂದ 25 ಪೈಸೆ ಹೆಚ್ಚಳವಾಗಿ ದೆಹಲಿಯಲ್ಲಿ ರು. 87.85 ಮುಟ್ಟಿದೆ. ಬೆಂಗಳೂರಿನಲ್ಲಿ ರು. 90.78. ಕೋಲ್ಕತ್ತಾದಲ್ಲಿ ರು. 89.16, ಮುಂಬೈನಲ್ಲಿ ರು. 94.36 ಮತ್ತು ಚೆನ್ನೈನಲ್ಲಿ ರು. 90.18 ಆಗಿದೆ.
ಇನ್ನು ಡೀಸೆಲ್ ದರ ಲೀಟರ್ ಗೆ 30 ಪೈಸೆ ಹೆಚ್ಚಳ ಆಗಿ, ದೆಹಲಿಯಲ್ಲಿ ರು. 78.03 ಮುಟ್ಟಿದೆ. ಬೆಂಗಳೂರಿನಲ್ಲಿ ರು. 82.72, ಕೋಲ್ಕತ್ತಾದಲ್ಲಿ ರು. 81.61, ಮುಂಬೈನಲ್ಲಿ ರು. 84.94 ಮತ್ತು ಚೆನ್ನೈನಲ್ಲಿ ರು. 83.18 ಆಗಿದೆ. ತೈಲ ಬೆಲೆಗಳ ಪರಿಷ್ಕರಣೆ ಪ್ರತಿ ನಿತ್ಯ ಆಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಹಾಗೂ ಡಾಲರ್ ವಿರುದ್ಧ ರುಪಾಯಿ ಮೌಲ್ಯದ ಆಧಾರದಲ್ಲಿ ಬೆಲೆ ಪರಿಷ್ಕರಣೆ ಆಗುತ್ತದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ಫ್ಯೂಚರ್ಸ್, ಗ್ಲೋಬಲ್ ಬೆಂಚ್ ಮಾರ್ಕ್ ತೈಲ ದರವು ಗುರುವಾರ ಬ್ಯಾರೆಲ್ ಗೆ $ 61.08ಕ್ಕೆ ಕುಸಿದಿತ್ತು. ಕಳೆದ ಒಂಬತ್ತು ಸೆಷನ್ ನಲ್ಲಿ ಬ್ರೆಂಟ್ ಏರಿಕೆ ಆಗಿದೆ. 2019ರ ಜನವರಿ ನಂತರ ಅತಿ ದೀರ್ಘ ಕಾಲ ಸತತವಾಗಿ ಬೆಲೆ ಏರಿಕೆ ಕಂಡದ್ದು ಈಗಲೇ.

ಈ ಮಧ್ಯೆ, ಅಬಕಾರಿ ಸುಂಕವನ್ನು ಇಳಿಸುವುದಕ್ಕೆ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಕುಸಿತ ಕಂಡಾಗ, ಲಾಕ್ ಡೌನ್ ಅವಧಿಯಲ್ಲಿ ಏರಿಕೆ ಮಾಡಿದ್ದ ಅಬಕಾರಿ ಸುಂಕ ಅದೇ ಮಟ್ಟದಲ್ಲಿ ಇದೆ.


Click it and Unblock the Notifications