ಪೆಟ್ರೋಲ್ ದರ ಲೀಟರ್ ಗೆ 28 ಪೈಸೆ ಹಾಗೂ ಡೀಸೆಲ್ ಲೀಟರ್ ಗೆ 29 ಪೈಸೆಯಂತೆ ಭಾನುವಾರ (ಡಿಸೆಂಬರ್ 6, 20200) ಬೆಲೆ ಏರಿಕೆ ಆಗಿದೆ. ಸತತವಾಗಿ ಐದನೇ ದಿನ ಮತ್ತು ನವೆಂಬರ್ 20ರ ನಂತರ 14ನೇ ಬಾರಿಗೆ ಹೀಗೆ ಪೆಟ್ರೋಲ್- ಡೀಸೆಲ್ ದರದಲ್ಲಿ ಹೆಚ್ಚಳವಾಗಿದೆ.
ಮುಂಬೈನಲ್ಲಿ ಪೆಟ್ರೋಲ್ ದರವು 90 ರುಪಾಯಿ ಮತ್ತು ಡೀಸೆಲ್ 80 ರುಪಾಯಿ ದಾಟಿವೆ. ಪ್ರಮುಖ ನಗರಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ದರ ಎಷ್ಟಿದೆ ಎಂಬ ವಿವರ ಹೀಗಿದೆ:
ಬೆಂಗಳೂರು: ಪೆಟ್ರೋಲ್- 86.20 ರುಪಾಯಿ, ಡೀಸೆಲ್- 78.03 ರುಪಾಯಿ
ಚೆನ್ನೈ: ಪೆಟ್ರೋಲ್- 86.25 ರುಪಾಯಿ, ಡೀಸೆಲ್- 79.06 ರುಪಾಯಿ
ಹೈದರಬಾದ್: ಪೆಟ್ರೋಲ್- 86.75 ರುಪಾಯಿ, ಡೀಸೆಲ್- 80.32 ರುಪಾಯಿ
ಮುಂಬೈ: ಪೆಟ್ರೋಲ್- 90.05 ರುಪಾಯಿ, ಡೀಸೆಲ್- 80.23 ರುಪಾಯಿ
ದೆಹಲಿ: ಪೆಟ್ರೋಲ್- 83.41 ರುಪಾಯಿ, ಡೀಸೆಲ್- 73.61 ರುಪಾಯಿ
ಕೋಲ್ಕತ್ತಾ: ಪೆಟ್ರೋಲ್- 84.90 ರುಪಾಯಿ, ಡೀಸೆಲ್- 77.18 ರುಪಾಯಿ

ಸ್ಥಳೀಯ ತೆರಿಗೆ ಅಥವಾ ವ್ಯಾಟ್ ಆಧಾರದಲ್ಲಿ ಒಂದು ರಾಜ್ಯದಿಂದ ಮತ್ತೊಂದಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಬದಲಾವಣೆ ಆಗುತ್ತದೆ. 2018ರ ಸೆಪ್ಟೆಂಬರ್ ನಂತರ ಡೀಸೆಲ್ ದರ ಗರಿಷ್ಠ ಮಟ್ಟದಲ್ಲಿದೆ. ನವೆಂಬರ್ 20ನೇ ತಾರೀಕಿಗೂ ಮುಂಚೆ ಸೆಪ್ಟೆಂಬರ್ 22ನೇ ತಾರೀಕಿನಿಂದ ಪೆಟ್ರೋಲ್ ದರದಲ್ಲಿ ಬದಲಾವಣೆ ಆಗಿರಲಿಲ್ಲ. ಅದೇ ರೀತಿ ಅಕ್ಟೋಬರ್ 2ನೇ ತಾರೀಕಿನಿಂದ ಡೀಸೆಲ್ ದರದಲ್ಲಿ ಬದಲಾಗಿರಲಿಲ್ಲ.
ಅಂತರರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾ ತೈಲ ದರ ಹಾಗೂ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ತೈಲ ಮಾರ್ಕೆಟಿಂಗ್ ಕಂಪೆನಿಗಳು ಪ್ರತಿ ನಿತ್ಯ ಪೆಟ್ರೋಲ್- ಡೀಸೆಲ್ ದರ ಪರಿಷ್ಕರಣೆ ಮಾಡುತ್ತವೆ.


Click it and Unblock the Notifications