ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ

ದೇಶದಲ್ಲಿ ಪೆಟ್ರೋಲ್ ಬೆಲೆಯು ಒಂದು ತಿಂಗಳಲ್ಲಿ ಮೊದಲ ಬಾರಿಗೆ ಇಳಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು(ರಿಟೈಲರ್) ನಾಲ್ಕು ದಿನಗಳ ನಿಶ್ಚಲತೆಯ ಬಳಿಕ ಶುಕ್ರವಾರ 5 ಪೈಸೆ ಬೆಲೆ ಇಳಿಕೆ ಮಾಡಿದ್ದಾರೆ.

ಪೆಟ್ರೋಲ್ ದರವು ಈ ಕೆಳ ಕಂಡ ನಗರಗಳಲ್ಲಿ ಹೀಗಿವೆ
ನವದೆಹಲಿಯಲ್ಲಿ ರು. 74.86
ಕೋಲ್ಕತ್ತಾದಲ್ಲಿ ರು. 77.54
ಮುಂಬೈನಲ್ಲಿ ರು. 80.51
ಚೆನ್ನೈನಲ್ಲಿ ರು. 77.83
ಬೆಂಗಳೂರಿನಲ್ಲಿ ರು. 77.42

ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ

ಡೀಸಲ್ ದರ ಈ ಕೆಳಕಂಡ ನಗರಗಳಲ್ಲಿ ಹೀಗಿವೆ.
ನವದೆಹಲಿಯಲ್ಲಿ ರು. 65.84
ಕೋಲ್ಕತ್ತಾದಲ್ಲಿ ರು.. 68.25
ಮುಂಬೈನಲ್ಲಿ ರು. 69.06
ಚೆನ್ನೈ ನಲ್ಲಿ ರು. 69.59
ಬೆಂಗಳೂರಿನಲ್ಲಿ ರು. 68.08

ಏಷ್ಯಾದ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲಗಳ ಬೆಲೆ ಕುಸಿದುದರ ಪರಿಣಾಮ, ಅಲ್ಲದೆ ಅಂತರರಾಷ್ಟ್ರೀಯ ಮಾನದಂಡ ಬ್ರೆಂಟ್ ಫ್ಯೂಚರ್ ಗಳು 21 ಸೆಂಟ್ಸ್ ಅಥವಾ 0.3 ಶೇಕಡಾ ಇಳಿಕೆಯಾಗಿ ಬ್ಯಾರೆಲ್‌ ದರ 63 ಡಾಲರ್‌ಗೆ ತಲುಪಿದೆ. ಭಾರತದಲ್ಲಿ ಇಂಧನದ ಚಿಲ್ಲರೆ(ರಿಟೈಲ್) ದರವನ್ನು ನಿಗದಿಪಡಿಸಲು ಅಂತರರಾಷ್ಟ್ರೀಯ ಕಚ್ಚಾ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ವಿಯೆನ್ನಾದಲ್ಲಿ ನಡೆದ ದ್ವಿ-ವಾರ್ಷಿಕ ಸಭೆಯಲ್ಲಿ ಶುಕ್ರವಾರ ಔಪಚಾರಿಕವಾಗಿ ಒಪ್ಪಂದವನ್ನು ಅಂಗೀಕರಿಸಲಾಗಿದ್ದು ಈ ಒಪ್ಪಂದದ ಪ್ರಕಾರ ದಿನಕ್ಕೆ 5 ಲಕ್ಷ ಬ್ಯಾರಲ್ ಗಳ ಹೆಚ್ಚುವರಿ (ಬಿಪಿಡಿ) ಉತ್ಪಾದನೆಯನ್ನು ಕಡಿತಗೊಳಿಸಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+