ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳು ಸತತ ಆರನೇ ದಿನ, ಮಂಗಳವಾರ (ಆಗಸ್ಟ್ 25, 2020) ಕೂಡ ಎಲ್ಲ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ ಏರಿಕೆ ಮಾಡಿವೆ. ದೆಹಲಿ, ಕೋಲ್ಕತ್ತಾ, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 11 ಪೈಸೆ ಏರಿಕೆ ಮಾಡಲಾಗಿದೆ. ಆಗಸ್ಟ್ 16ನೇ ತಾರೀಕಿನಿಂದ ತೈಲ ಮಾರ್ಕೆಟಿಂಗ್ ಕಂಪೆನಿಗಳು ಪೆಟ್ರೋಲ್ ದರವನ್ನು ಏರಿಸುತ್ತಾ ಬಂದಿವೆ. ಅದರಲ್ಲಿ 19ನೇ ತಾರೀಕು ಬಿಟ್ಟು ಉಳಿದೆಲ್ಲ ದಿನ ಏರಿಕೆ ಆಗಿದೆ.
ಈ ಹತ್ತು ದಿನದಲ್ಲಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 1.3 ರುಪಾಯಿ ಹಾಗೂ ಮುಂಬೈನಲ್ಲಿ 1.2 ರುಪಾಯಿ ಹೆಚ್ಚಳ ಆಗಿದೆ. ಸದ್ಯಕ್ಕೆ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 81.73 ರುಪಾಯಿ ಹಾಗೂ ಮುಂಬೈನಲ್ಲಿ 88.39 ರುಪಾಯಿ ಇದೆ. ಹತ್ತಿರಹತ್ತಿರ ಒಂದು ತಿಂಗಳಿಂದ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ದೆಹಲಿಯಲ್ಲಿ ಡೀಸೆಲ್ ದರ ಲೀಟರ್ ಗೆ 73.56 ರುಪಾಯಿ ಹಾಗೂ ಮುಂಬೈನಲ್ಲಿ 80.11 ರುಪಾಯಿ ಇದೆ. ಪ್ರಮುಖ ನಗರಗಳಲ್ಲಿ ಮಂಗಳವಾರ ಪೆಟ್ರೋಲ್- ಡೀಸೆಲ್/ಲೀಟರ್ ದರ ಹೀಗಿದೆ.
* ದೆಹಲಿ: ಪೆಟ್ರೋಲ್- 81.73, ಡೀಸೆಲ್- 73.56
* ಮುಂಬೈ: ಪೆಟ್ರೋಲ್- 88.39, ಡೀಸೆಲ್- 80.11
* ಚೆನ್ನೈ: ಪೆಟ್ರೋಲ್- 84.73, ಡೀಸೆಲ್- 78.86
* ಕೋಲ್ಕತ್ತಾ: ಪೆಟ್ರೋಲ್- 83.24, ಡೀಸೆಲ್- 77.06
* ಹೈದರಾಬಾದ್: ಪೆಟ್ರೋಲ್- 84.94, ಡೀಸೆಲ್- 80.17
* ಬೆಂಗಳೂರು: ಪೆಟ್ರೋಲ್- 84.39, ಡೀಸೆಲ್- 77.88
* ಗುರ್ ಗಾಂವ್: ಪೆಟ್ರೋಲ್- 79.89, ಡೀಸೆಲ್- 74.03
* ನೋಯ್ಡಾ: ಪೆಟ್ರೋಲ್- 82.09, ಡೀಸೆಲ್- 73.87


Click it and Unblock the Notifications