ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2000 ರೂಪಾಯಿ ನೋಟಿನ ಬಗ್ಗೆ ಮೇ 19ರಂದು ಪ್ರಮುಖವಾದ ನಿರ್ಧಾರವನ್ನು ಘೋಷಣೆ ಮಾಡಿದೆ. ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಸ್ಥಗಿತಗೊಳಿಸಿ, ಅದನ್ನು ವಾಪಾಸ್ ಪಡೆಯುವುದಾಗಿ ಆರ್‌ಬಿಐ ಮೇ 19ರಂದು ತಿಳಿಸಿದೆ.
ಇದಾದ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ರೂಪಾಯಿ ನೋಟನ್ನು ಎಲ್ಲ ಕಡೆಗಳಲ್ಲು ತೆಗೆದುಕೊಳ್ಳಬೇಕು. ಎಲ್ಲಿಯೂ ಈ ನೋಟನ್ನು ನಿರಾಕರಿಸುವಂತಿಲ್ಲ ಎಂದು ಈಗಾಗಲೇ ಆರ್‌ಬಿಐ ತಿಳಿಸಿದೆ. ಈ ನಡುವೆ ದೆಹಲಿಯ ಪೆಟ್ರೋಲ್ ಪಂಪ್ ಒಂದರಲ್ಲಿ ಸಿಬ್ಬಂದಿಯೋರ್ವ 2,000 ರೂಪಾಯಿ ನೋಟು ಸ್ವೀಕರಿಸಲು ನಿರಾಕರಿಸಿದ್ದಕ್ಕೆ ದೂರು ದಾಖಲು ಮಾಡಲಾಗಿದೆ.

2,000 ರೂಪಾಯಿ ನೋಟು ಸ್ವೀಕರಿಸಲು ನಿರಾಕರಿಸಿದ್ದಕ್ಕೆ ದೆಹಲಿಯ ಸೌತ್ ಎಕ್ಸ್‌ಟೆನ್ಶನ್ ಪಾರ್ಟ್-1ರ ಪೆಟ್ರೋಲ್ ಪಂಪ್‌ನ ನೌಕರನ ವಿರುದ್ಧ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ಸಂಬಂಧ ಶುಕ್ರವಾರ ಕೋಟ್ಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರಿನಲ್ಲಿ ಏನು ತಿಳಿಸಲಾಗಿದೆ?
ತನ್ನ ಸ್ಕೂಟರ್‌ಗೆ ಪೆಟ್ರೋಲ್ ಹಾಕಲು ಸೌತ್ ಎಕ್ಸ್‌ಟೆನ್ಶನ್ ಭಾಗ-1ರ ಪೆಟ್ರೋಲ್ ಪಂಪ್‌ಗೆ ಹೋಗಿದ್ದಾಗಿ ಹೇಳಿದ್ದಾರೆ. 400 ರೂಪಾಯಿಯ ಬಿಲ್ ಆಗಿದ್ದು 2000 ರೂಪಾಯಿಯ ನೋಟನ್ನು ನೀಡಿದ್ದೇನೆ. ಆದರೆ ಪೆಟ್ರೋಲ್ ಪಂಪ್ ಸಿಬ್ಬಂದಿ ನೋಟು ಪಡೆಯಲು ನಿರಾಕರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಲಾವಣೆಯಲ್ಲಿರುವ 2,000 ರೂಪಾಯಿ ನೋಟುಗಳನ್ನು ವಾಪಾಸ್ ಪಡೆದಿದೆ. ಆದರೆ ನೋಟು ಕಾನೂನಾತ್ಮಕವಾಗಿ ಮುಂದುವರಿಯಲಿದೆ ಎಂದು ಹೇಳಿದೆ. ಹಾಗೆಯೇ ನೋಟು ಬದಲಾವಣೆ ಮಾಡಲು ಸೆಪ್ಟೆಂಬರ್ 30ರವರೆಗೆ ಸಮಯವಕಾಶವನ್ನು ನೀಡಿದೆ.
ಪೆಟ್ರೋಲ್ ಪಂಪ್‌ಗಳಲ್ಲೇ ಅಧಿಕ 2000 ರೂಪಾಯಿ ನೋಟು
ಪೆಟ್ರೋಲ್ ಪಂಪ್‌ಗಳಲ್ಲಿ 2000 ರೂಪಾಯಿ ನೋಟುಗಳದ್ದೇ ದರ್ಬಾರು ಕಂಡು ಬರುತ್ತಿದೆ. ಅಷ್ಟು ಮಾತ್ರವಲ್ಲದೆ ಒಟ್ಟಾರೆಯಾಗಿ ದೈನಂದಿನವಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ನಗದು ಬಳಕೆ ಪ್ರಮಾಣವು ಸುಮಾರು ಶೇಕಡ 90ರಷ್ಟು ಏರಿಕೆಯಾಗಿದೆ. ಈ ಹಿಂದೆ ಆನ್‌ಲೈನ್ ವಹಿವಾಟು ನಡೆಸುತ್ತಿದ್ದವರೂ ಕೂಡಾ ಈಗ ನಗದು ಬಳಕೆ ಮಾಡುತ್ತಿದ್ದಾರೆ.
2000 ರೂಪಾಯಿಯ ನೋಟನ್ನು ಕಳೆದ ಶುಕ್ರವಾರ ಆರ್‌ಬಿಐ ವಾಪಾಸ್ ಪಡೆದಾಗ ಜನರು ಹೆಚ್ಚಾಗಿ ನಗದನ್ನು ಪೆಟ್ರೋಲ್ ಪಂಪ್‌ಗಳಲ್ಲಿ ಬಳಕೆ ಮಾಡುತ್ತಿರಲಿಲ್ಲ. ಆದರೆ ನಗದು ಬಳಕೆ ಪ್ರಮಾಣ ನೋಟು ಚಲಾವಣೆಯಿಂದ ಹಿಂಪಡೆದ ಬಳಿಕ ಹೆಚ್ಚಳವಾಗಿದೆ. ಈಗ ಜನರು 100 ಅಥವಾ 200 ರೂಪಾಯಿಯ ಪೆಟ್ರೋಲ್ ಖರೀದಿಗೂ 2000 ರೂಪಾಯಿ ನೋಟನ್ನು ನೀಡುತ್ತಿದ್ದಾರೆ ಎಂದು ಪೆಟ್ರೋಲ್ ಪಂಪ್ ಡೀಲರ್‌ಗಳು ಹೇಳುತ್ತಿದ್ದಾರೆ.
ವಹಿವಾಟುಗಳು ಸರಿಯಾದ ರೀತಿಯಲ್ಲಿ ನಡೆಯಬೇಕಾದರೆ ಆರ್‌ಬಿಐನ ಸಹಾಯ ಮುಖ್ಯವಾಗಿದೆ. ಬ್ಯಾಂಕ್‌ಗಳು ಅಧಿಕ ಪ್ರಮಾಣದಲ್ಲಿ ನೋಟುಗಳ ಬದಲಾವಣೆ ಮಾಡುವಂತೆ ಸೂಚನೆ ನೀಡಿಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಆರ್‌ಬಿಐ) ಪೆಟ್ರೋಲ್ ಪಂಪ್ ಮಾಲೀಕರು ಮನವಿ ಮಾಡಿದ್ದಾರೆ.
"100- 200 ರೂಪಾಯಿಯ ಪೆಟ್ರೋಲ್, ಡಿಸೇಲ್ ಖರೀದಿಗೂ ಕೂಡಾ 2000 ರೂಪಾಯಿಯ ನೋಟುಗಳನ್ನು ಗ್ರಾಹಕರು ನೀಡುತ್ತಿದ್ದಾರೆ. ಈ ಮೂಲಕ ನೋಟು ಬದಲಾವಣೆ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ಚಿಲ್ಲರೆಯ ಅಭಾವ ಉಂಟಾಗಿದೆ," ಎಂದು ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷ ಅಜಯ್ ಬನ್ಸಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Click it and Unblock the Notifications