For Quick Alerts
ALLOW NOTIFICATIONS  
For Daily Alerts

ಪ್ಲೀಸ್, ಪ್ಲೀಸ್ ಹಣ ವಾಪಸ್ ತಗೊಳ್ಳಿ : ವಿಜಯ್ ಮಲ್ಯ

|

ಭಾರತೀಯ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಕೈಕೊಟ್ಟು ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ, ದಯವಿಟ್ಟು ನಿಮ್ಮ ಹಣವನ್ನು ತಗೊಳ್ಳಿ ಎಂದು ಬ್ಯಾಂಕುಗಳಿಗೆ ದುಂಬಾಲು ಬಿದ್ದಿದ್ದಾರೆ.

 

ಭಾರತಕ್ಕೆ ಹಸ್ತಾಂತರಿಸುವ ಆದೇಶದ ವಿರುದ್ಧ ಗುರುವಾರ ಮೂರು ದಿನಗಳ ಬ್ರಿಟಿಷ್ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮದ್ಯ ಉದ್ಯಮಿ ವಿಜಯ್ ಮಲ್ಯ ಮತ್ತೊಮ್ಮೆ ಭಾರತೀಯ ಬ್ಯಾಂಕುಗಳಿಗೆ ನೀಡಬೇಕಿದ್ದ ಮೂಲ ಮೊತ್ತದ 100 ಪರ್ಸೆಂಟ್ ವಾಪಸ್ ತೆಗೆದುಕೊಳ್ಳುವಂತೆ ಕೇಳಿಕೊಂಡರು.

 
ಪ್ಲೀಸ್, ಪ್ಲೀಸ್ ಹಣ ವಾಪಸ್ ತಗೊಳ್ಳಿ : ವಿಜಯ್ ಮಲ್ಯ

'' ನಾನು ಕೈ ಮುಗಿದು ಬ್ಯಾಂಕುಗಳನ್ನು ವಿನಂತಿಸುತ್ತೇನೆ. ನಿಮ್ಮ 100 ಪರ್ಸೆಂಟ್ ಹಣವನ್ನು ಹಿಂದಕ್ಕೆ ತೆಗೆದುಕೊಳ್ಳಿ, ತಕ್ಷಣ'' ಎಂದು ಲಂಡನ್‌ನ ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್ ಹೊರಗೆ ಹೇಳಿದರು.

ವಿಚಾರಣೆಗಿಂತ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಕ್ರಮ ಹಣ ವರ್ಗಾವಣೆ ಕಾಯ್ದೆಗೆ (ಪಿಎಂಎಲ್‌ಎ) ಸಂಬಂಧಿಸಿದಂತೆ ನಾನು ಯಾವುದೇ ಅಪರಾಧ ಎಸಗಿಲ್ಲ ಎಂದರು. ಎಲ್ಲಾ ಭಾರತೀಯ ಬ್ಯಾಂಕುಗಳಿಂದ ತಾವು ಪಡೆದ ಸಾಲದಲ್ಲಿನ ಅಸಲನ್ನು ಪೂರ್ಣ ನೀಡುವುದಾಗಿ ತಿಳಿಸಿದರು.

64 ವರ್ಷದ ಮಾಜಿ ಕಿಂಗ್‌ಫಿಶರ್ ಏರ್‌ಲೈನ್ಸ್ ಮುಖ್ಯಸ್ಥ, ಭಾರತದಲ್ಲಿ 9,000 ಕೋಟಿ ಕೋಟಿ ರುಪಾಯಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ಭಾರತಕ್ಕೆ ಹಸ್ತಾಂತರಿಸುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.

English summary

Please Banks Take All Your Money Back Requests Vijay Malya

Liquor tycoon Vijay Mallya once again asked the Indian banks to take back 100 per cent of the principal amount owed to them
Story first published: Saturday, February 15, 2020, 11:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X