ಅರ್ಥಶಾಸ್ತ್ರ ಅರ್ಥವಾಗದ, ಓದದ ಪ್ರಧಾನಿಯಿಂದ ಬರೀ ಭಾಷಣ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಥಶಾಸ್ತ್ರ ಅರ್ಥವಾಗಲ್ಲ, ಅವರು ಅದನ್ನು ಓದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಸ್ಥಾನದ ಜೈಪುರ್ ನಲ್ಲಿ ನಡೆದ ಯುವ ಆಕ್ರೋಶ್ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸಮಾವೇಶದಲ್ಲಿ ಅವರ ಭಾಷಣದ ಪ್ರಮುಖಾಂಶಗಳು ಹೀಗಿವೆ,

* ಒಂದು ಕೋಟಿಯಷ್ಟು ಯುವಜನರು ದೇಶದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಪ್ರಧಾನಿ ಆ ಬಗ್ಗೆ ಮೌನವಾಗಿದ್ದಾರೆ. ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿಆರ್ ಬಗ್ಗೆ ಇಷ್ಟುದ್ದ ಭಾಷಣ ಬಿಗಿಯುತ್ತಾರೆ. ನಿರುದ್ಯೋಗದ ಬಗ್ಗೆ ತುಟಿ ಬಿಚ್ಚುವುದಿಲ್ಲ.

* ಯುಪಿಎ ಅವಧಿಯಲ್ಲಿ ಬೆಳವಣಿಗೆ ದರ ಒಂಬತ್ತು ಪರ್ಸೆಂಟ್ ಇತ್ತು. ಅದೀಗ ಐದು ಪರ್ಸೆಂಟ್ ಗೆ ಬಂದಿದೆ. ಅದು ಕೂಡ ಜಿಡಿಪಿಯನ್ನು ಅಳೆಯುವ ಲೆಕ್ಕಾಚಾರವನ್ನು ಬದಲಿಸಿದ ನಂತರ. ಈ ಹಿಂದಿನ ಮಾನದಂಡಗಳನ್ನೇ ಅನ್ವಯಿಸಿ ಲೆಕ್ಕ ಹಾಕುವುದಾದರೆ ಜಿಡಿಪಿ ಎರಡೂವರೆ ಪರ್ಸೆಂಟ್ ಇರುತ್ತದೆ.

ಅರ್ಥಶಾಸ್ತ್ರ ಅರ್ಥವಾಗದ, ಓದದ ಪ್ರಧಾನಿಯಿಂದ ಬರೀ ಭಾಷಣ: ರಾಹುಲ್ ಗಾಂಧಿ

* ಭಾರತದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಯುವ ಜನರಿದ್ದಾರೆ. ಅವರೇ ಇಲ್ಲಿನ ಸಂಪನ್ಮೂಲ. ಈ ಜಗತ್ತನ್ನು ಭಾರತೀಯ ಯುವ ಜನರು ಬದಲಿಸಬಲ್ಲರು. ಈ ಹಿಂದೆ ಜಗತ್ತಿನ ನಾನಾ ಕಡೆಯಿಂದ ಹೂಡಿಕೆ ಮಾಡಲು ಭಾರತಕ್ಕೆ ಬರುತ್ತಿದ್ದರು. ಏಕೆಂದರೆ ಅವರು ಭಾರತದ ಯುವ ಜನರನ್ನು ನಂಬುತ್ತಿದ್ದರು. ಆದರೆ ಈಗ ಇಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಕಾರಣಕ್ಕೆ ಭಾರತದಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ.

* ಹಿಂದೊಮ್ಮೆ, ಚೀನಾದೊಂದಿಗೆ ಅಮೆರಿಕ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಒಬಾಮ ಹೇಳಿದ್ದರು. ಆದರೆ ಇಡೀ ಜಗತ್ತಿಗೆ ಗೊತ್ತು: ಭಾರತ ಮಾತ್ರ ಚೀನಾದ ಜತೆ ಸ್ಪರ್ಧಿಸಲು ಸಾಧ್ಯ.

* ಎಲ್ಲ ಯುರೋಪಿಯನ್ ರಾಷ್ಟ್ರಗಳು- ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮತ್ತು ಇತರ ದೇಶಗಳು ಚೀನಾ ವೇಗವಾಗಿ ಬೆಳೆಯುತ್ತಿರುವುದನ್ನು ನೋಡುತ್ತಿವೆ. ಭಾರತದ ಯುವಜನರು ಮಾತ್ರ ಚೀನಾದೊಂದಿಗೆ ಸ್ಪರ್ಧಿಸಲು ಸಾಧ್ಯ ಎಂಬುದು ಅವರಿಗೆ ಗೊತ್ತಿದೆ.

* ಒಂದು ಕಾಲಕ್ಕೆ ಭಾರತವು ಶಾಂತಿಯುತ ದೇಶ. ಆದರೆ ಈಗ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ: ದೇಶದಲ್ಲಿ ಹಿಂಸಾಚಾರ ನಡೆಯುತ್ತಿದೆ. ಒಂದೇ ದೇಶದ ಜನರು ಬಡಿದಾಡುತ್ತಿದ್ದಾರೆ. ಸರ್ಕಾರವು ಹಿಂಸಾಚಾರವನ್ನು ಹಬ್ಬುತ್ತಿದೆ.

* ಮೋದಿ ಅವರು ಮೊದಲನೆಯದಾಗಿ, ಜನರ ಜೇಬಿನಿಂದ ಮೂರೂವರೆ ಲಕ್ಷ ಕೋಟಿ ತೆಗೆದು, ಹದಿನೈದು- ಇಪ್ಪತ್ತು ಜನರಿಗೆ ಕೊಟ್ಟರು.

* ಭ್ರಾತೃತ್ವ ಮತ್ತು ಏಕತೆಗೆ ಇಡೀ ಜಗತ್ತಿಗೆ ಹೆಸರಾಗಿದ್ದ ಭಾರತಕ್ಕೆ ಇಡೀ ವಿಶ್ವದ ಎದುರು ಅವಮಾನ ಆಗುವಂತೆ ಮಾಡಿದರು. ಈಗ, ಭಾರತವನ್ನು ಅತ್ಯಾಚಾರದ ರಾಜಧಾನಿ ಎಂದು ಇಡೀ ವಿಶ್ವ ನೋಡುತ್ತದೆ. ಆ ಬಗ್ಗೆ ಅವರು ಮಾತನಾಡುವುದಿಲ್ಲ.

* ಭಾರತದ ಹೆಸರು ಏಕೆ ಹಾಳಾಗಿದೆ, ನಿರುದ್ಯೋಗ ಪ್ರಮಾಣ ಏಕೆ ಜಾಸ್ತಿಯಾಗುತ್ತಿದೆ ಮತ್ತು ಕಳೆದ ಐದು ವರ್ಷದಲ್ಲಿ ನೀವು ಏನು ಮಾಡಿದಿರಿ ಎಂದು ಯುವ ಜನರು ಪ್ರಶ್ನೆ ಮಾಡಿದರೆ ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ.

* ನಿರುದ್ಯೋಗ ಮತ್ತು ಆರ್ಥಿಕ ಹಿಂಜರಿತದ ಬಗ್ಗೆ ಪ್ರಧಾನಿ ಮೋದಿ ಅವರು ಯಾವುದಾದರೂ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಿ, ನೋಡೋಣ. ಮೋದಿ ಅವರು ಖಂಡಿತಾ ಉತ್ತರ ನೀಡಲು ಆಗಲ್ಲ. ಎರಡು ಕೋಟಿ ಉದ್ಯೋಗ ನೀಡುವ ಸುಳ್ಳು ಕನಸು ತೋರಿಸಬಲ್ಲರು ಅಷ್ಟೇ.

* ಕಾಂಗ್ರೆಸ್ ಮಾತ್ರ ಆಲ್ಲ, ಇಡೀ ವಿಶ್ವ ನಿಮ್ಮತ್ತ ನೋಡುತ್ತಿದೆ. ನಿಮ್ಮಿಂದ ಈ ದೇಶದ ಹಣೆಬರಹ ಬದಲಿಸಲು ಸಾಧ್ಯ.

* ಮೇಡ್ ಇನ್ ಇಂಡಿಯಾ, ಮೇಡ್ ಇನ್ ಜೈಪುರ್, ಮೇಡ್ ಇನ್ ರಾಜಸ್ಥಾನ್ ನಿಂದ ಮೇಡ್ ಇನ್ ಚೀನಾ ಜತೆ ಸ್ಪರ್ಧಿಸಲು ಸಾಧ್ಯ.

* ನಮ್ಮ ಸಂಸ್ಕೃತಿ ಮತ್ತು ಇತಿಹಾಸ, ಮಹಾತ್ಮ ಗಾಂಧಿ ಅವರ ಸಿದ್ಧಾಂತವೇ ನಮ್ಮ ಸಿದ್ಧಾಂತ. ವಿಶ್ವವು ನಮ್ಮನ್ನು ನೋಡುವಾಗ, ಈ ದೇಶಕ್ಕೆ ವಿಶ್ವವನ್ನು ಮುನ್ನಡೆಸುವ ಶಕ್ತಿ ಇದೆ ಎಂದು ಗೊತ್ತಾಗಲಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+