ಮುಂಬೈ, ಮಾರ್ಚ್ 2: ಖ್ಯಾತ ಪಾಪ್ ತಾರೆ, ಆರ್&ಬಿ ಗಾಯಕಿ ಭಾರತದಲ್ಲಿದ್ದಾರೆ. ಹೌದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ವಿವಾಹಪೂರ್ವ ಸಮಾರಂಭ ಗುಜರಾತ್ ಜಾಮ್ ನಗರದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ರಿಹಾನ್ನಾ ತನ್ನ ಫೇಮಸ್ ಟ್ರ್ಯಾಕ್‌ಗಳನ್ನು ಹಾಡಿ ಬಂದಿದ್ದ ಅತಿಥಿಗಳನ್ನು ರಂಜಿಸಲಿದ್ದಾರೆ.
ಡೈಲಿಮೇಲ್ ಪ್ರಕಾರ, ಅವರು ಈ ಸ್ಟಾರ್-ಸ್ಟಡ್ ಈವೆಂಟ್‌ನಲ್ಲಿ ಪ್ರದರ್ಶನ ನೀಡಲು ಭಾರಿ ಮೊತ್ತವನ್ನು ಪಡೆಯುತ್ತಿದ್ದು, ಅವರ ಸಂಭಾವನೆ ಕೇಳಿದ್ರೆ ಹುಬ್ಬೇರುವುದು ಖಚಿತ.! ರಿಹಾನ್ನಾ ಅವರು 2015 ರಲ್ಲಿ 'ಬೆಟರ್ ಹ್ಯಾವ್ ಮೈ ಮನಿ' ಹಾಡಿದಾಗ ತಮಾಷೆ ಮಾಡುತ್ತಿರಲಿಲ್ಲ ಎನ್ನುವುದು ಅವರು ಇಂದು ಚಾರ್ಜ್ ಮಾಡುತ್ತಿರುವ ಸಂಭಾವನೆ ಮೊತ್ತ ಕೇಳಿದ್ರೆ ಅನಿಸೋದು ಸಹಜ.!

ಕೋಟಿ ಕೋಟಿ ಸಂಭಾವನೆ ಪಡೆಯುವ ರಿಹಾನ್ನಾ!
ಪ್ರಿ ವೆಂಡ್ಡಿಂಗ್ ಈವೆಂಟ್ ನಲ್ಲಿ ಪ್ರದರ್ಶನ ನೀಡಲು ರಿಹಾನ್ನಾಗೆ £5 ಮಿಲಿಯನ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಅಂದಾಜು 52 ಕೋಟಿ ರೂ.ಯನ್ನು ನೀಡಲಾಗುತ್ತಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಇವರಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಗಾಯಕಿ ಬಿಯಾನ್ಸ್ ಅವರಿಗೂ ಪರ್ಫಮ್ ಮಾಡಲು ಆಹ್ವಾನಿಸಲಾಗಿದ್ದು ಇವರ ಸಂಭಾವನೆ 33 ಕೋಟಿ ರೂ. ಎಂದು ವರದಿಯಾಗಿದೆ.
ಇದಲ್ಲದೇ ಇನ್ನು ಕೆಲವು ಗಾಯಕ -ಗಾಯಕಿಯರಿಗೂ ಕೆಲ ಕೋಟಿಗಳಷ್ಟು ಸಂಭಾವನೆ ನೀಡಿ ಕರೆಸಿಕೊಳ್ಳಲಾಗುತ್ತಿದೆ. ಈ ವಿವಾಹಪೂರ್ವ ಸಂಭ್ರಮಾಚರಣೆಗಳಿಗೆಂದೇ ಅಂಬಾನಿ ಕುಟುಂಬವು 120 ಮಿಲಿಯನ್ ಪೌಂಡ್‌ಗಳನ್ನು ಖರ್ಚು ಮಾಡುತ್ತಿವೆ ಎಂದು ಡೈಲಿಮೇಲ್ ವೆಬ್‌ಸೈಟ್ ವರದಿ ಮಾಡಿದ್ದು, ಕೇವಲ ಅಡುಗೆಗೆ £ 20 ಮಿಲಿಯನ್ ವೆಚ್ಚ ಮಾಡುತ್ತಿದೆ.
ರಿಹಾನ್ನಾ ತನ್ನ ಪಾರ್ಟನರ್ ರಾಕಿಯೊಂದಿಗೆ ಜಾಮ್‌ನಗರಕ್ಕೆ ಪೋಟೋ ಈಗಾಗಲೇ ವೈರಲ್ ಆಗಿದ್ದು, ಇದರೊಂದಿಗೆ ಗಾಯಕಿ ತನ್ನೊಂದಿಗೆ ತಂದಿರುವ ನಾಲ್ಕೈದು ಟ್ರಕ್ ಗಳಲ್ಲಿ ತುಂಬಬಹುದಾದ 'ಲಗೇಜ್' ಗಳನ್ನು ತಂದಿದ್ದು, ಇದು ನಿಜಕ್ಕೂ ಆಶ್ಚರ್ಯವನ್ನುಂಟುಮಾಡುತ್ತಿದೆ. 2018 ರಲ್ಲಿ ಇಶಾ ಅವರ ಮದುವೆಯಲ್ಲಿ ಅಂಬಾನಿ ಕುಟುಂಬ ಕ್ವೀನ್ ಬೇ ಎಂದೇ ಖ್ಯಾತಿಗಳಿಸಿರುವ ಗಾಯಕಿ ಬೆಯೋನ್ಸ್ ಅವರು ಪ್ರದರ್ಶನ ನೀಡಿದ್ದು, ಅವರಿಗೂ ಭಾರಿ ಮೊತ್ತವನ್ನು ವೆಚ್ಚ ಮಾಡಿತ್ತು.
ರಿಹಾನ್ನಾ ವಿಶ್ವದ ಶ್ರೀಮಂತ ಮಹಿಳಾ ಸಂಗೀತಗಾರ್ತಿಯಾಗಿದ್ದು, ಐಷಾರಾಮಿ ಉತ್ಪನ್ನಗಳ ತಯಾರಕ ಕಂಪನಿ LVMH ಪಾಲುದಾರಿಕೆಯನ್ನು ಹೊಂದಿದ್ದು, ಉದ್ಯಮಿಯೂ ಆಗಿದ್ದಾರೆ. ತಮ್ಮ ವೃತ್ತಿಜೀವನದ ಅವಧಿಯಲ್ಲಿ, ರಿಹಾನ್ನಾ 9 ಗ್ರ್ಯಾಮಿ ಪ್ರಶಸ್ತಿಗಳು, 12 ಬಿಲ್ಬೋರ್ಡ್ ಸಂಗೀತ ಪ್ರಶಸ್ತಿಗಳು, 13 ಅಮೇರಿಕನ್ ಸಂಗೀತ ಪ್ರಶಸ್ತಿಗಳು ಮತ್ತು 8 ಪೀಪಲ್ಸ್ ಚಾಯ್ಸ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು ಆರು ಗಿನ್ನೆಸ್ ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ.
ಲೋಕೋಪಕಾರಿ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿರುವ ರಿಹಾನ್ನಾರ ನೆಟ್ ವರ್ತ್ $1.7 ಬಿಲಿಯನ್(140,875,696,900ರೂ) ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications