ಸರ್ಕಾರಿ ಕೆಲಸಕ್ಕೆ ಸೇರಬೇಕು ಆಸೆ ಇದ್ಯಾ..? ಅದರಲ್ಲೂ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು ಅಂತಾ ಕನಸು ಇದ್ದರೇ ಈ ಕೂಡಲೇ ಅರ್ಜಿ ಹಾಕಿ.ಹೌದು, ಭಾರತೀಯ ಅಂಚೆ ಇಲಾಖೆ ವತಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.ಹಾಗಿದ್ರೆ ಯಾವ ಹುದ್ದೆಗಳಿಗೆ ನೇಮಕಾತಿಯನ್ನು ಕರೆಯಲಾಗಿದೆ? ಅರ್ಜಿ ಸಲ್ಲಿಕೆ ಹೇಗೆ ಏನೆಲ್ಲಾ ಮಾನದಂಡಗಳನ್ನು ಹೊಂದಿರಬೇಕು ಆಯ್ಕೆ ಪ್ರಕ್ರಿಯೆ ಹೇಗಿರಲಿದೆ ಮಾಸಿಕ ವೇತನ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಅಂಚೆ ಕಚೇರಿಯಲ್ಲಿ ಬೃಹತ್ ಉದ್ಯೋಗ ನೇಮಕಾತಿ ಪ್ರಕ್ರಿಯೆ ಆರಂಭವಾದ್ದು,ಉದ್ಯೋಗಾಕಾಂಕ್ಷಿಗಳು ಕೂಡಲೇ ಅರ್ಜಿ ಸಲ್ಲಿಸಬೇಕು ಎಂದು ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

ಎಷ್ಟು ಹುದ್ದೆಗಳಿಗೆ ಅರ್ಜಿ ಅಹ್ವಾನ?
ಭಾರತೀಯ ಅಂಚೆ ಕಚೇರಿಗಳಲ್ಲಿ ಬಹುಕಾರ್ಯ ಸಿಬ್ಬಂದಿ (MTS) ಕೆಲಸಕ್ಕೆ ಅರ್ಜಿ ಅಹ್ವಾನ ಮಾಡಲಾಗಿದೆ. 18200 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ವಿಭಾಗಗಳಲ್ಲಿ ಈ ಹುದ್ದೆಗಳು ಖಾಲಿ ಇವೆ.ಆದ್ದರಿಂದ ಈ ಕೂಡಲೇ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಕೆ ಮಾಡಿ.
ಶೈಕ್ಷಣಿಕ ಅರ್ಹತೆ ಏನಿರಬೇಕು?
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳನ್ನು ಹೊಂದಿರ ಬೇಕಾಗುತ್ತದೆ ಅವು ಈ ಕೆಳಗಿನಂತೆ ಇವೆ
ಎಸ್‌ಎಸ್‌ಎಲ್‌ಸಿಯನ್ನು ಓದಿರಬೇಕು
ಸ್ಥಳೀಯ ಭಾಷೆ ಸ್ವಷ್ಟವಾಗಿ ಬರಬೇಕು
ಕಂಪ್ಯೂಟರ್ ಜ್ಞಾನ ತಿಳಿದಿರುವುದು ಮುಖ್ಯ
ನೇಮಕಾತಿಯ ಸಂಪೂರ್ಣ ಮಾಹಿತಿ ಬಗ್ಗೆ ಇಲ್ಲಿದೆ ವಿವರ
ನೇಮಕಾತಿ ಸಂಸ್ಥೆ: ಭಾರತೀಯ ಅಂಚೆ ಇಲಾಖೆ
ಹುದ್ದೆ ಹೆಸರು: ಬಹುಕಾರ್ಯ ಸಿಬ್ಬಂದಿ (MTS)
ಒಟ್ಟು ಹುದ್ದೆಗಳು: 18,200 ಹುದ್ದೆಗಳು
ಪೋಸ್ಟಿಂಗ್: ಭಾರತ
ಕೊನೆ ದಿನಾಂಕ: ಜನವರಿ 28
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು?
ಅಭ್ಯರ್ಥಿಗಳ SSLC ಅಂಕಪಟ್ಟಿ, ಪ್ರವೇಶ ಪತ್ರ
ಪಾಸಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ
ಆಧಾರ್ ಗುರುತಿನ ಚೀಟಿ
ಜಾತಿ ಪ್ರಮಾಣ ಪತ್ರ
ಜನ್ಮ ಪ್ರಮಾಣ ಪತ್ರಗಳ ದಾಖಲೆಯನ್ನು ಹೊಂದಿರುವುದು ಮುಖ್ಯವಾಗುತ್ತದೆ.
ವಯಸ್ಸಿನ ಮಿತಿ ಎಷ್ಟು ಇರಬೇಕು?
ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯನ್ನು ನೀಡಲಾಗಿದೆ. ನೇಮಕಾತಿ ಅಧಿಸೂಚನೆಯಲ್ಲಿ ನೀಡಲಾದ ಮಾಹಿತಿ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 18 ಹಾಗೂ ಗರಿಷ್ಠ 25 ವರ್ಷಗಳಾಗಿರಬೇಕು. ಜಾತಿ ಆಧಾರದಲ್ಲಿ ವಯೋಮಿತಿಯಲ್ಲಿ ಸಡಿಲಿಕೆಯ ಅವಕಾಶ ಕೂಡ ಇರುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸು ಅಭ್ಯರ್ಥಿಗಳನ್ನು ಅಂಚೆ ಕಚೇರಿ ಇಲಾಖೆ ನಿಯಮಾನುಸಾರವಾಗಿ ಆಯ್ಕೆ ಮಾಡಿಕೊಳ್ಳುತ್ತಾದೆ.
ಮಾಸಿಕ ವೇತನ ಎಷ್ಟು?
ಈ ಹುದ್ಧೆಗೆ ಆಯ್ಕೆಯಾದವರಿಗೆ ತಿಂಗಳಿಗೆ 15000 ರೂಪಾಯಿಂದ 29380 ರೂಪಾಯಿ ವೇತನ ನೀಡಲಾಗುತ್ತದೆ ಎಂದು ಅಂಚೆ ಕಚೇರಿ ಅಧಿಸೂಚನೆಯಲ್ಲಿ ಮಾಹಿತಿ ತಿಳಿಸಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅಂಚೆ ಕಚೇರಿಯ ಈ ಹುದ್ಧೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಂಚೆ ಇಲಾಖೆ ಅಧಿಕೃತ ವೆಬ್‌ಸೈಟ್ https://www.indiapost.gov.in/ ಗೆ ಭೇಟಿ ನೀಡಬೇಕು. ಇಲ್ಲಿ ನೋಂದಾಯಿಸಿಕೊಂಡು ಅಗತ್ಯ ದಾಖಲೆಗಳ ಸಮೇತವಾಗಿ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 28 ಆಗಿರುವುದರಿಂದ ಈ ಬಳಗೆ ಅರ್ಜಿಗಳನ್ನು ಸಲ್ಲಿಸಲು ಅಂಚೆ ಕಚೇರಿ ಮಾಹಿತಿ ನೀಡಿದೆ.
ನಿಮ್ಮಗೆ ಇನ್ನೂ ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್‌ಸೈಟ್ ಗೆ ಹೋಗಿ ಅಧಿಸೂಚನೆ ಓದಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೊನೆಯ ದಿನಾಂಕವರೆಗೆ ಕಾಯದೇ ಈ ಕೂಡಲೇ ಅರ್ಹ ದಾಖಲೆಗಳ ಸಮೇತ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಕಾಲ ಕಾಲಕ್ಕೆ ಅಂಚೆ ಇಲಾಖೆ ನೀಡುವ ಸುತ್ತೋಲೆ, ಪ್ರಕಟಣೆಗಳ ಕಡೆ ಹೆಚ್ಚಿನ ಗಮನವನ್ನು ಕೊಡಬೇಕಾಗುತ್ತದೆ.
ಈ ಮೇಲಿನ ಕ್ರಮಗಳನ್ನು ಅನುಸರಿಸಿಕೊಂಡು ನೀವು ಅಂಚೆ ಕಚೇರಿಯ ಹುದ್ದೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications