SBI vs Post Office : 5 ವರ್ಷಗಳ FD ಮೇಲೆ ಹೆಚ್ಚಿನ ಲಾಭ ಸಿಗೋದು ಎಲ್ಲಿ? ಬಡ್ಡಿ ಸಮೇತ ಸಂಪೂರ್ಣ ವಿವರ ಇಲ್ಲಿದೆ

ನೀವು ಸುರಕ್ಷಿತ ಹೂಡಿಕೆಯನ್ನು (fixed deposit) ಬಯಸುತ್ತೀರಾ? ಇದಕ್ಕಾಗಿ ಉತ್ತಮವಾದ ಆಯ್ಕೆಯನ್ನು ಹುಡುಕುತ್ತಿದ್ದೀರಾ ಬ್ಯಾಂಕ್‌ನಲ್ಲಿ (SBI) ಹೊಡಿಕೆ ಮಾಡಬೇಕೋ ಅಥವಾ ಪೋಸ್ಟ್ ಆಫೀಸ್‌ನಲ್ಲಿ (Post Office) ಹೊಡಿಕೆ ಮಾಡಬೇಕೇ? ಎಂಬ ಗೊಂದಲ ನಿಮ್ಮಲ್ಲಿದ್ಯಾ? ಈ ಬಗ್ಗೆ ಹೆಚ್ಚು ಚಿಂತಿಸಬೇಡಿ.ಯಾಕಂದ್ರೆ, ನಿಮ್ಮೆಲ್ಲ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ.

ಹೌದು,ಹೂಡಿಕೆದಾರರು FDಗಳನ್ನು ಮಾಡಲು ದೇಶದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಿದ್ರೆ ಎಷ್ಟು ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತದೆ ಎಂಬ ಮಾಹಿತಿಯನ್ನು ತೀಳಿದುಕೊಳ್ಳಲು ಮುಂದೆ ಓದಿ..

ಕೇವಲ 5 ವರ್ಷ! FD ಮೇಲೆ ಇಷ್ಟೊಂದು ಲಾಭ.. ಎಲ್ಲಿ, ಬಡ್ಡಿ ಎಷ್ಟು?

ಈ ಎರಡೂ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರಿಗೆ FD ಗಳ ಮೇಲಿನ ಬಡ್ಡಿದರದ ವಿವರ ಈ ಕೆಳಗಿನಂತೆ ನೀಡಲಾಗಿದೆ.

ಆರ್‌ಬಿಐ ರೆಪೊ ದರ

ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದ ನಂತರ, ಎಫ್‌ಡಿ ಮೇಲಿನ ಬಡ್ಡಿ ವೇಗವಾಗಿ ಜಾಸ್ತಿಯಾಗಿದೆ. ಇದರಿಂದಾಗಿ, ಕೆಲವು ಸಮಯದಿಂದ ಎಫ್‌ಡಿ ಮೇಲೆ ಆಕರ್ಷಕ ಬಡ್ಡಿ ಸಿಗುತ್ತದೆ.ಯಾವುದೇ ಅಪಾಯವನ್ನು ತೆಗೆದುಕೊಳ್ಳದೆ ಸುರಕ್ಷಿತ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರಿಗೆ, ಬ್ಯಾಂಕ್ ಎಫ್‌ಡಿ ಉತ್ತಮ ಆಯ್ಕೆಯಾಗಿ ಎಂದೇ ಹೇಳಬಹುದು.

SBI FD

ಖಾಸಗಿ ವಲಯದ ಬ್ಯಾಂಕ್‌ ಆದ ಎಸ್‌ಬಿಐ ಬ್ಯಾಂಕ್ ಎಫ್‌ಡಿ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯ ಎಫ್‌ಡಿಗಳಿಗೆ ಶೇ. 3.00 ರಿಂದ ಶೇ. 7.1 ರವರೆಗೆ ಬಡ್ಡಿಯನ್ನು ತನ್ನ ಗ್ರಾಹಕರಿಗೆ ನೀಡುತ್ತದೆ.

ಹಿರಿಯ ನಾಗರಿಕರಿಗೆ ಶೇಕಡಾ 0.50 ರಷ್ಟು ಹೆಚ್ಚುವರಿ ಬಡ್ಡಿಯನ್ನು ನೀಡಲಾಗಿದೆ. ಎಸ್‌ಬಿಐ ಒಂದು ವರ್ಷದಿಂದ ಎರಡು ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ ಶೇ 6.8 ರಷ್ಟು ಬಡ್ಡಿ ಸಿಗುತ್ತದೆ.ಎರಡು ವರ್ಷದಿಂದ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ ಶೇ.7 ರಷ್ಟು ಬಡ್ಡಿದರವನ್ನು ತನ್ನ ಗ್ರಾಹಕರು ನೀಡುತ್ತಿದೆ.

7 ದಿನಗಳಿಂದ 45 ದಿನಗಳ ಎಫ್‌ಡಿ ಮೇಲಿನ ಬಡ್ಡಿ ದರ: ಶೇ.3
46 ದಿನಗಳಿಂದ 179 ದಿನಗಳ ಎಫ್‌ಡಿ: ಶೇ. 4.5
180 ದಿನಗಳಿಂದ 210 ದಿನಗಳ ಎಫ್‌ಡಿ: 5.25
211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ: ಶೇ.5.75 ರಷ್ಟು ಇದೆ.

1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ದರ ಶೇ. 6.80
2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ದರ: ಶೇ.7.00
3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ದರ: ಶೇ. 6.50
5 ವರ್ಷದಿಂದ 10 ವರ್ಷಗಳ ಅವಧಿಯ ಎಫ್‌ಡಿ ದರ ಶೇ. 6.50
400 ದಿನಗಳ ವಿಶೇಷ ಎಫ್‌ಡಿ ದರ ಶೇ.7.10ರಷ್ಟು ಇದೆ.

ಅಂಚೆ ಕಚೇರಿಯ ಇತ್ತೀಚಿನ ಬಡ್ಡಿ ದರದ ವಿವರ

ಅಂಚೆ ಕಚೇರಿಯು ಒಂದು ವರ್ಷದ ಅವಧಿಯ ಸ್ಥಿರ ಠೇವಣಿಯ ಮೇಲೆ ಶೇ. 6.9 ರಷ್ಟು ಇದೆ. ಎರಡು ವರ್ಷಗಳ ಅವಧಿಯ ಠೇವಣಿಯ ಮೇಲೆ ಶೇ. 7 ರಷ್ಟು ಮತ್ತು ಮೂರು ವರ್ಷಗಳ ಅವಧಿಯ ಠೇವಣಿಯ ಮೇಲೆ ಶೇ. 7 ರಷ್ಟು ಇದೆ. ಐದು ವರ್ಷಗಳ ಅವಧಿಯ ಠೇವಣಿಯ ಮೇಲಿನ ಬಡ್ಡಿ ದರ ಶೇ. 7.5ರಷ್ಟು ಇದೆ.

ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ಹೂಡಿಕೆದಾರರು ಐದು ವರ್ಷಗಳವರೆಗಿನ ಅವಧಿಯೊಂದಿಗೆ ಎಫ್‌ ಡಿಗಳ ಮೇಲೆ 1.5 ಲಕ್ಷ ರೂ.ಗಳವರೆಗೆ ರಿಯಾಯಿತಿಯನ್ನು ಸಹ ನೀಡುತ್ತದೆ.

ಹಣವನ್ನು ಹೊಡಿಕೆ ಮಾಡುವಾಗ ನೀವು ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು.ಇನ್ನೂ ಪೋಸ್ಟ್‌ ಆಫೀಸ್‌ನಲ್ಲಿಟ್ಟ ಹಣ ಸೇಫ್‌ ಅನ್ನೋದನ್ನು ನೀವು ಗಮನದಲಿಟ್ಟುಕೊಂಡು ಸುರಕ್ಷಿತವಾಗಿ ಒಂದು ಕಡೆ ಹೊಡಿಕೆ ಮಾಡಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+