ಹಬ್ಬಕ್ಕೆ ಊರಿಗೆ ಹೋಗಬೇಕು ಅಂತ ಹೊರಟವರಿಗೆ ಬಿಗ್ ಶಾಕ್..! ಹೌದು, ಹಬ್ಬಗಳ ಸೀಸನ್ (Festival Season) ಬಂತು ಅಂದರೆ ಸಾಕು, ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇರುತ್ತದೆ. ಈ ವಾರದಲ್ಲಿ ಯುಗಾದಿ, ರಂಜಾನ್ ಇರುವುದರಿಂದ ಸಾಲು ಸಾಲು ರಜೆಗಳು ಇವೆ. ಇತ್ತ ಖಾಸಗಿ ಬಸ್ (Private Bus) ಮಾಲೀಕರಿಗೆ ಭರ್ಜರಿ ಲಾಟರಿ ಹೊಡೆದಿದೆ. ಸಿಕ್ಕಿದ್ದೇ ಚಾನ್ಸ್ ಅಂತ ಜನರಿಂದ ಡಬಲ್ ಹಣ ಪೀಕಲು ನಿಂತಿದ್ದಾರೆ. ಈ ಮೂಲಕ ರಜೆ ಅಂತ ಮನೆ ಕಡೆ ಹೊರಟವರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.

ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮೂರು ದಿನಗಳ ರಜೆ ಇದೆ ಎಂದು ಊರಿನ ಕಡೆ ಹೋಗಲು ಹೋಗಲು ಸಿದ್ದತೆ ಮಾಡಿಕೊಂಡಿದ್ದರಿಗೆ ಖಾಸಗಿ ಬಸ್ ದರ ಸಂಕಷ್ಟ ತಂದಿದೆ.ಮಾರ್ಚ್ 28 ರ ಶುಕ್ರವಾರ ರಾತ್ರಿ ಊರಿಗೆ ತೆರಳಲು ಜನರು ಯೋಜನೆ ಮಾಡಿದ್ದರೆ ಖಾಸಗಿ ಬಸ್ಗಳಲ್ಲಿ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ.ಇದನ್ನು ಸಾರ್ವಜನಿಕರು ವಿರೋಧ ಮಾಡಿದ್ದಾರೆ.
ಮಾರ್ಚ್ 29ರಂದು ಯುಗಾದಿ ಹಬ್ಬದ ಅಮಾವಾಸ್ಯೆ ಭಾನುವಾರ ಚಾಂದ್ರಮಾನ ಯುಗಾದಿ, ಸೋಮವಾರ ರಂಜಾನ್, ಹೀಗೆ ಒಟ್ಟು ಮೂರು ದಿನಗಳ ಕಾಲ ರಜೆ ಸಿಗುತ್ತದೆ.
ಬೆಂಗಳೂರಿನಿಂದ ನಿಮ್ಮಊರಿಗೆ ಬಸ್ ಟಿಕೆಟ್ ದರ ಎಷ್ಟು?
(ಎಸಿ ಮತ್ತು ನಾರ್ಮಲ್ ಬಸ್ ದರ ವಿವರ )
ದಾವಣಗೆರೆ
ಪ್ರಸ್ತುತ ದರ: 450 ರಿಂದ 1300ರೂ
ಹಬ್ಬದ ದರ: 750 ರಿಂದ 5500ರೂ
ಬೆಂಗಳೂರು ಟು ಧಾರವಾಡ
ಪ್ರಸ್ತುತ ದರ: 600 ರಿಂದ 1100ರೂ
ಹಬ್ಬದ ದರ: 1069 ರಿಂದ 5500ರೂ
ಹುಬ್ಬಳ್ಳಿ
ಪ್ರಸ್ತುತ ದರ: 475 ನಿಂದ1100ರೂ
ಹಬ್ಬದ ದರ: 1200 ನಿಂದ 4200ರೂ
ಬೆಂಗಳೂರು ನಿಂದ ಬೆಳಗಾವಿ
ಪ್ರಸ್ತುತ ದರ: 389 ನಿಂದ 1200ರೂ
ಹಬ್ಬದ ದರ: 1129 ನಿಂದ 5500ರೂ
ಬೆಂಗಳೂರು ಟು ಮಂಗಳೂರು
ಪ್ರಸ್ತುತ ದರ: 650 ನಿಂದ 1300ರೂ
ಹಬ್ಬದ ದರ: 1200 ನಿಂದ 4500ರೂ
ಬೆಂಗಳೂರು ಟು ಕಲ್ಬುರ್ಗಿ
ಪ್ರಸ್ತುತ ದರ: 750 ನಿಂದ 1000ರೂ
ಹಬ್ಬದ ದರ: 1200 ನಿಂದ 2200ರೂ
ಬೆಂಗಳೂರು ಟು ರಾಯಚೂರು
ಪ್ರಸ್ತುತ ದರ: 650 ನಿಂದ 990ರೂ
ಹಬ್ಬದ ದರ: 1100 ನಿಂದ 2990ರೂ
ಬೆಂಗಳೂರು ಟು ಹಾಸನ
ಪ್ರಸ್ತುತ ದರ: 463 ನಿಂದ 1000ರೂ
ಹಬ್ಬದ ದರ: 750 ನಿಂದ 1600ರೂ
ಬೆಂಗಳೂರು ಟು ಯಾದಗಿರಿ
ಪ್ರಸ್ತುತ ದರ: 699 ನಿಂದ 900ರೂ
ಹಬ್ಬದ ದರ: 1300 ನಿಂದ 2200ರೂ
ಬೆಂಗಳೂರು ಟು ಶಿವಮೊಗ್ಗ
ಪ್ರಸ್ತುತ ದರ: 500ನಿಂದ 990ರೂ
ಹಬ್ಬದ ದರ: 1199 ನಿಂದ 1800ರೂ
ದರ ಏರಿಕೆಯ ಕುರಿತು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಅವರು ಮಾತನಾಡಿ ನಾವು ದುಪ್ಪಟ್ಟು ದರ ಏರಿಕೆ ಮಾಡಿಲ್ಲ. ಶೇ 50 ರಿಂದ 60 ರಷ್ಟು ಮಾತ್ರ ದರ ಏರಿಕೆ ಮಾಡಿದ್ದೇವೆ.ಖಾಸಗಿ ಬಸ್‌ಗಳಿಗೆ ಸರ್ಕಾರ ಈ ಬಾರಿಯ ಬಜೆಟ್ ಬಗ್ಗೆ ಒಂದು ರೂಪಾಯಿ ಕೂಡ ಮೀಸಲಿಡಲಿಲ್ಲ ಎಮದು ಅಗ್ರಹ ಮಾಡಿದ್ದರು.
ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ದೊಡ್ಡ ಮಟ್ಟದಲ್ಲಿ ಹೊಡೆತವಾಗಿದೆ. ಬಸ್ ಮಾಲೀಕರು ಹಬ್ಬ ಮಾಡಬೇಕಲ್ಲವೇ?' ಎಂಬುದನ್ನು ಪ್ರಶ್ನಿಸಿದರು. ಬಸ್ ಕಾರ್ಯಾಚರಣೆಯೊಂದಿಗೆ ವಿವಿಧ ವೆಚ್ಚಗಳಾದ ರಸ್ತೆ ತೆರಿಗೆ, ಆರೋಗ್ಯ ವಿಮೆ, ಹೊಸ ಬಸ್ ಗಳ ಬೆಲೆ, ಸ್ಪೇರ್ ಪಾರ್ಟ್ಸ್ ಎಲ್ಲವೂ ಹೆಚ್ಚಾಗಿವೆ. ಈ ಕಾರಣದಿಂದಾಗಿ ಹಬ್ಬಗಳ ಸಂದರ್ಭ ದರ ಏರಿಕೆ ಮಾಡಿದ್ದೇವೆ ಎಮದು ಹೇಳಿದ್ದಾರೆ.


Click it and Unblock the Notifications