ಮೈಸೂರು, ಏಪ್ರಿಲ್ 2: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮೈಸೂರು ಅರಮನೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧೆ ಮಾಡುತ್ತಿದ್ದಾರೆ. ಚುನಾವಣೆಗೆ ನಿಂತಿರುವ ಅವರು ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಅವರು ಚುನಾವನಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಅವರು, ತಮ್ಮ ಬಳಿ ಸ್ವಂತ ಮನೆ ಹಾಗೂ ಕಾರು ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹಿಂದಿನ ಮೈಸೂರು ರಾಜಮನೆತನದ ವಂಶಸ್ಥರು ತಮ್ಮ ಚುನಾವಣಾ ಅಫಿಡವಿಟ್ ಪ್ರಕಾರ ಸ್ವಂತ ಮನೆ, ಜಮೀನು ಅಥವಾ ವಾಹನವನ್ನು ಹೊಂದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸೋಮವಾರ ನಾಮಪತ್ರ ಸಲ್ಲಿಸುವಾಗ ಒಡೆಯರ್ ಅವರು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಘೋಷಿಸಿ ಅಫಿಡವಿಟ್ ಸಲ್ಲಿಸಿದ್ದಾರೆ. ನಾಮಪತ್ರದ ಪ್ರಕಾರ ಅವರ ಒಟ್ಟು ಆಸ್ತಿ ಸುಮಾರು ಐದು ಕೋಟಿ ರೂ.ಯಷ್ಟಿದ್ದು, ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಮತ್ತು ಅವಲಂಬಿತ ವ್ಯಕ್ತಿ ಕ್ರಮವಾಗಿ 1.04 ಕೋಟಿ ಮತ್ತು 3.64 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಯುದುವೀರ್ ಒಡೆಯರ್ ಅವರು 3.39 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಹೊಂದಿದ್ದಾರೆ ಮತ್ತು ಅವರ ಪತ್ನಿ 1.02 ಕೋಟಿ ರೂಪಾಯಿ ಮೌಲ್ಯದ ಅಮೂಲ್ಯ ವಸ್ತುಗಳನ್ನು ಹೊಂದಿದ್ದಾರೆ. ಹಿಂದಿನ ಮೈಸೂರು ರಾಜಮನೆತನದ 32 ವರ್ಷದ ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ ಅವರೊಂದಿಗೆ ನೇರ ಹಣಾಹಣಿಗೆ ಮುಂದಾಗಿದ್ದಾರೆ.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡೂ ಬಾರಿಯೂ ಬಿಜೆಪಿಯಿಂದ ಪ್ರತಾಪ್ ಸಿಂಹ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿ ಅವರಿಗೆ ಹೈಕಮಾಂಡ್‌ನಿಂದ ಟಿಕೆಟ್ ನೀಡದೇ ಇದ್ದು, ಬೆಂಬಲಿಗರಿಂದ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ಪಕ್ಷ ಯದುವೀರ್ ಅವರಿಗೆ ಮಣೆ ಹಾಕಿತ್ತು. ಈ ಬಾರಿ ಪ್ರತಾಪ್ ಸಿಂಹ ಯದುವೀರ್ ಪರ ಪ್ರಚಾರಕ್ಕೆ ಹೋದರೂ ಅವರ ಬೆಂಬಲಿಗರು ಕೊನೆ ಕ್ಷಣದಲ್ಲಿ ಒಳೇಟು ಕೊಡುವ ಸಾಧ್ಯತೆ ಇದೆ.


Click it and Unblock the Notifications