ಕೊರೊನಾ ವ್ಯಾಪಿಸುತ್ತಿರುವಂತೆ ಫೇಸ್ ಮಾಸ್ಕ್ ಹಾಕಲೇಬೇಕು ಅನ್ನೋದು ಕಡ್ಡಾಯ ಆಗಿದೆ. ಅದೇ ರೀತಿ ಆಯಾ ಕಾಲಕ್ಕೆ ಏನು ಟ್ರೆಂಡ್ ಇರುತ್ತದೋ ಆ ಬಗ್ಗೆ ವಿಡಿಯೋಗಳು, ಫೋಟೋಗಳು ಕೂಡ ಹರಿದಾಡುತ್ತವೆ. ಈ ವರದಿಯಲ್ಲಿ ಪ್ರಸ್ತಾವ ಮಾಡಲಿರುವ ವ್ಯಕ್ತಿ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಪುಣೆ ಜಿಲ್ಲೆಯ ಪಿಂಪ್ರಿ- ಛಿಂಚ್ವಾಡ್ ನವರಾದ ಶಂಕರ್ ಕುರಡೆ ಈಗ ಬಹಳ ಫೇಮಸ್.
ಅದಕ್ಕೆ ಕಾರಣ ಆಗಿರುವುದು ಅವರು ಧರಿಸುವುದು ವಿಶಿಷ್ಟ ಮಾಸ್ಕ್. ವಿಶಿಷ್ಟ ಅಷ್ಟೇ ಮಾತ್ರ ಅಲ್ಲ. ವಿಪರೀತ ದುಬಾರಿ ಕೂಡ ಹೌದು. ತಮಗೊಂದು ಮಾಸ್ಕ್ ಮಾಡಿಸಿಕೊಂಡಿದ್ದಾರೆ ಶಂಕರ್ ಕುರಡೆ. ಪೂರ್ತಿ ಚಿನ್ನದ್ದು. ಅದರ ಬೆಲೆ 2.89 ಲಕ್ಷ ರುಪಾಯಿ. ಕುರಡೆ ಅವರ ಮಾಸ್ಕ್ ಚಿತ್ರಗಳು ಶೇರ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಸದ್ದು ಮಾಡಿವೆ.

"ಇದು ತೆಳುವಾದ ಮಾಸ್ಕ್. ಸಣ್ಣ ರಂಧ್ರಗಳಿರುವುದರಿಂದ ಉಸಿರಾಡುವುದು ಕಷ್ಟವಲ್ಲ. ಈ ಮಾಸ್ಕ್ ಪರಿಣಾಮಕಾರಿ ಹೌದೋ ಅಲ್ಲವೋ ಎಂಬುದರ ಬಗ್ಗೆ ನನಗೆ ಖಾತ್ರಿ ಇಲ್ಲ" ಎನ್ನುತ್ತಾರೆ ಶಂಕರ್ ಕುರಡೆ. ಟ್ವಿಟ್ಟರ್ ನಲ್ಲಿ ಈ ಮಾಸ್ಕ್ ಫೋಟೋಗಳನ್ನು ಶೇರ್ ಮಾಡಿದ ಮೇಲೆ 1300 ಲೈಕ್ಸ್ ಬಂದಿವೆ. ರಾಶಿ ರಾಶಿ ಕಾಮೆಂಟ್ ಗಳು ಬಂದಿವೆ.

ಈ ಪೈಕಿ ಕೆಲವರು ಶಂಕರ್ ಕುರಡೆ ಅವರ ಕಾಲೆಳೆದಿದ್ದಾರೆ. ತೆಳುವಾದ ರಂಧ್ರಗಳು ಇಲ್ಲದಿದ್ದಲ್ಲಿ ಇದು ಪರಿಣಾಮಕಾರಿ ಆಗಿರುತ್ತಿತ್ತು ಎಂದಿದ್ದಾರೆ. ಈ ಬಗ್ಗೆ ಮೀಮ್ಸ್ ಗಳನ್ನು ಸಹ ಹಂಚಿಕೊಂಡಿದ್ದಾರೆ. ಮತ್ತೆ ಕೆಲವರು ಈ ರೀತಿ ಮೀಮ್ಸ್ ಮಾಡಿರುವುದಕ್ಕೆ ಆಕ್ಷೇಪ ಕೂಡ ವ್ಯಕ್ತಪಡಿಸಿದ್ದಾರೆ.

2.89 ಲಕ್ಷ ಖರ್ಚು ಮಾಡಿದ ಮೇಲೂ ಪರಿಣಾಮಕಾರಿಯಾ ಎಂಬ ಖಾತ್ರಿ ಇಲ್ಲ ಎನ್ನುತ್ತಾರೆ ಎಂದೊಬ್ಬರು ಕಾಮೆಂಟ್ ಮಾಡಿದ್ದರೆ, ಈ ಮನುಷ್ಯ ನಿಜವಾ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.
More From GoodReturns

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ



Click it and Unblock the Notifications