For Quick Alerts
ALLOW NOTIFICATIONS  
For Daily Alerts

ವಿಶ್ವದ 100 ಶ್ರೀಮಂತರಲ್ಲಿ ಒಬ್ಬರಾದ ರಾಧಾಕಿಶನ್ ದಮಾನಿ

|

ಅವೆನ್ಯೂ ಸೂಪರ್‌ಮಾರ್ಟ್ಸ್‌ನ ಸಂಸ್ಥಾಪಕ, ಡಿ-ಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ ವಿಶ್ವದ 100 ಶ್ರೀಮಂತರಾಗಿ ಹೊರಹೊಮ್ಮುವ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇತ್ತೀಚಿನ ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ನಲ್ಲಿ 98 ನೇ ಸ್ಥಾನದಲ್ಲಿರುವ ದಮಾನಿ 19.2 ಬಿಲಿಯನ್ ಡಾಲರ್ ಮೌಲ್ಯದ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕವು ವಿಶ್ವದ ಶ್ರೀಮಂತ ಜನರ ದೈನಂದಿನ ಶ್ರೇಯಾಂಕವಾಗಿದೆ.

ಅಮೆಜಾನ್‌ನಲ್ಲಿ EMI ಮೂಲಕ ಮೊಬೈಲ್ ಖರೀದಿಸಬೇಕಾದ್ರೆ ಏನು ಮಾಡಬೇಕು? ಅಮೆಜಾನ್‌ನಲ್ಲಿ EMI ಮೂಲಕ ಮೊಬೈಲ್ ಖರೀದಿಸಬೇಕಾದ್ರೆ ಏನು ಮಾಡಬೇಕು?

ಭಾರತದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ಅಜೀಂ ಪ್ರೇಮ್‌ಜಿ, ಪಲ್ಲೊಂಜಿ ಮಿಸ್ತ್ರಿ, ಶಿವ್ ನಾಡರ್, ಲಕ್ಷ್ಮಿ ಮಿತ್ತಲ್ ಈ ಮೊದಲು ವಿಶ್ವದ 100 ರಲ್ಲಿರುವ ಇತರ ಭಾರತೀಯರಾಗಿದ್ದಾರೆ.

ದಮಾನಿಯು ಮುಂಬೈನ ಒಂದೇ ಕೊಠಡಿಯ ಅಪಾರ್ಟ್‌ಮೆಂಟ್‌ನಲ್ಲಿ ಮಾರ್ವಾಡಿ ಕುಟುಂಬದಲ್ಲಿ ಬೆಳೆದವರು. ಮುಂಬೈ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯವನ್ನು ಅಧ್ಯಯನ ಮಾಡಿ ಒಂದು ವರ್ಷದಲ್ಲಿ ಡ್ರಾಪ್‌ಔಟ್ ಆದರು. ಮುಂಬೈ ಷೇರುಪೇಟೆಯಲ್ಲಿ ಕೆಲಸ ಮಾಡುತ್ತಿದ್ದ ಅವರ ತಂದೆ ಮರಣದ ನಂತರ ದಮಾನಿ ತನ್ನ ಬಾಲ್ ಬೇರಿಂಗ್ ವ್ಯಾಪಾರವನ್ನು ತೊರೆದು ಸ್ಟಾಕ್ ಮಾರ್ಕೆಟ್ ಬ್ರೋಕರ್ ಮತ್ತು ಹೂಡಿಕೆದಾರರಾದರು.

ವಿಶ್ವದ 100 ಶ್ರೀಮಂತರಲ್ಲಿ ಒಬ್ಬರಾದ ರಾಧಾಕಿಶನ್ ದಮಾನಿ

1992 ರಲ್ಲಿ, ಹರ್ಷದ್ ಮೆಹ್ತಾ ಹಗರಣವು ಬೆಳಕಿಗೆ ಬಂದ ನಂತರ, ಆ ಸಮಯದಲ್ಲಿ ಅಲ್ಪ-ಮಾರಾಟದ ಲಾಭದಿಂದಾಗಿ ಅವರು ತನ್ನ ಆದಾಯದಲ್ಲಿ ದೊಡ್ಡ ಏರಿಕೆಯನ್ನು ಕಂಡರು. ನಂತರ ಅವರು 2000 ರಲ್ಲಿ ಸ್ಟಾಕ್ ಮಾರುಕಟ್ಟೆಯನ್ನು ತೊರೆದು ತಮ್ಮದೇ ಹೈಪರ್ ಮಾರ್ಕೆಟ್ ಚೈನ್, ಡಿ-ಮಾರ್ಟ್ ಅನ್ನು ಆರಂಭಿಸಿದರು.

ಹೀಗೆ ಒಂದೊಂದೇ ಹೆಜ್ಜೆಯನ್ನೇರಿದ ದಮಾನಿ 2002 ರಲ್ಲಿ ಪೊವಾಯಿಯಲ್ಲಿ ಮೊದಲ ಮಳಿಗೆಯನ್ನು ಸ್ಥಾಪಿಸಿದರು. 2010 ರಲ್ಲಿ ಈ ಸರಪಳಿಯು 25 ಮಳಿಗೆಗಳನ್ನು ಹೊಂದಿತ್ತು, ಅದರ ನಂತರ ಕಂಪನಿಯು ವೇಗವಾಗಿ ಬೆಳೆಯಿತು ಮತ್ತು 2017 ರಲ್ಲಿ ಸಾರ್ವಜನಿಕವಾಯಿತು.

ಅಟಲ್‌ ಪಿಂಚಣಿ ಯೋಜನೆ: ದಿನಕ್ಕೆ 7 ರೂ. ಹೂಡಿಕೆ, ತಿಂಗಳಿಗೆ 5000 ರೂಪಾಯಿ ಪಿಂಚಣಿ!ಅಟಲ್‌ ಪಿಂಚಣಿ ಯೋಜನೆ: ದಿನಕ್ಕೆ 7 ರೂ. ಹೂಡಿಕೆ, ತಿಂಗಳಿಗೆ 5000 ರೂಪಾಯಿ ಪಿಂಚಣಿ!

ದಮಾನಿ ಕಡಿಮೆ ಪ್ರೊಫೈಲ್ ಅನ್ನು ಇಟ್ಟುಕೊಳ್ಳುತ್ತಾನೆ ಮತ್ತು ವಿರಳವಾಗಿ ಯಾವುದೇ ಸಂದರ್ಶನಗಳನ್ನು ನೀಡುವುದಿಲ್ಲ. ಅವರು ಭಾರತೀಯ ಬಿಲಿಯನೇರ್ ರಾಕೇಶ್ ಜುಂಜುನ್‌ವಾಲಾ ಅವರಿಗೆ ತಮ್ಮ ಸ್ಟಾಕ್ ಟ್ರೇಡಿಂಗ್ ತಂತ್ರಗಳನ್ನು ಕಲಿಸಿದ್ದಾರೆ. 2020 ರಲ್ಲಿ, ಅವರು $ 16.5 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಶ್ರೀಮಂತ ಭಾರತೀಯರಾದರು. ಅವರು ಬಿಲಿಯನೇರ್‌ಗಳ ಜಾಗತಿಕ ಪಟ್ಟಿಯಲ್ಲಿ 117 ನೇ ಸ್ಥಾನದಲ್ಲಿದ್ದರು.

ಅವೆನ್ಯೂ ಸೂಪರ್‌ಮಾರ್ಟ್ಸ್ ಷೇರುಗಳಲ್ಲಿ ಲಾಭ
ಭಾರತದ ಅತ್ಯಂತ ಪ್ರಸಿದ್ಧ ಷೇರು ಹೂಡಿಕೆದಾರರಲ್ಲಿ ಒಬ್ಬರಾದ ದಮಾನಿ ಅತ್ಯಂತ ಚಾಣಾಕ್ಯ ಹೂಡಿಕೆದಾರ. ಕೋವಿಡ್ ಸಾಂಕ್ರಾಂಮಿಕದಲ್ಲಿ ಅತಿ ಹೆಚ್ಚು ಲಾಭಗಳಿಸಿದ ಹೂಡಿಕೆದಾರರು ಇವರು. ಈ ವರ್ಷ ಅವೆನ್ಯೂ ಸೂಪರ್‌ಮಾರ್ಟ್ಸ್ ಷೇರುಗಳು ಏರುತ್ತಲೇ ಸಾಗಿದ್ದು ದಮಾನಿಯವರ ನಿವ್ವಳ ಮೌಲ್ಯದಲ್ಲೂ ಏರಿಕೆಯಾಗಿದೆ. ಹೀಗಾಗಿಯೇ ಅವರು ಭಾರತದ ಎರಡನೇ ಶ್ರೀಮಂತ ಹಾಗೂ ಜಗತ್ತಿನ 100 ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ.

Closing Bell: ಸೆನ್ಸೆಕ್ಸ್ 300 ಪಾಯಿಂಟ್ಸ್ ಇಳಿಕೆ, ಆದ್ರೂ 7 ತಿಂಗಳಲ್ಲಿ 6,000 ಪಾಯಿಂಟ್ಸ್ ಏರಿಕೆClosing Bell: ಸೆನ್ಸೆಕ್ಸ್ 300 ಪಾಯಿಂಟ್ಸ್ ಇಳಿಕೆ, ಆದ್ರೂ 7 ತಿಂಗಳಲ್ಲಿ 6,000 ಪಾಯಿಂಟ್ಸ್ ಏರಿಕೆ

ಮುಕೇಶ್ ಅಂಬಾನಿ ಬಳಿಕ ಈತನೇ ಭಾರತದ ಬಹುದೊಡ್ಡ ಶ್ರೀಮಂತ
ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ರಾಧಾಕಿಶನ್ ದಮಾನಿ ಎರಡನೇ ಸ್ಥಾನದಲ್ಲಿದ್ದರೆ , ಮುಖೇಶ್ ಅಂಬಾನಿ ಭಾರತಕ್ಕಷ್ಟೇ ಅಲ್ಲದೆ ಏಷ್ಯಾಕ್ಕೆ ನಂಬರ್ 1 ಶ್ರೀಮಂತ ವ್ಯಕ್ತಿಯಾಗಿದ್ದಾರೆ. 62 ವಯಸ್ಸಿನ ಮುಕೇಶ್ ಅಂಬಾನಿ ಒಟ್ಟು ಆಸ್ತಿ ಮೌಲ್ಯ 56.6 ಬಿಲಿಯನ್ ಅಮೆರಿಕನ್ ಡಾಲರ್‌ ನಷ್ಟಿದೆ. ವಿಶ್ವದಲ್ಲಿ ಟಾಪ್ 10 ಶ್ರೀಮಂತರಲ್ಲಿ ಒಬ್ಬರಾಗಿದ್ದು, ಇತ್ತೀಚಿಗ 10ಸ್ಥಾನಗಳಿಂದ ಹೊರಗುಳಿದಿದ್ದಾರೆ.

English summary

DMart's Radhakishan Damani Is Now Among World's Top 100 Richest People

Avenue Supermarts’ founder Radhakishan Damani is now among the 100 richest people in the world.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X