ಹಣ ಪೋಲು: ರಾಜ್ಯಸಭಾ ಸದಸ್ಯರಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಿಸಿ

ನವದೆಹಲಿ, ಮೇ 15: ಸಾರ್ವಜನಿಕ ಹಣವನ್ನು ಬೇಕಾಬಿಟ್ಟಿಯಾಗಿ ಬಳಸುವ ರಾಜ್ಯಸಭಾ ಸದಸ್ಯರಿಗೆ ರಾಜ್ಯಸಭೆಯ ಅಧ್ಯಕ್ಷರೂ ಆಗಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಿಸಿ ಮುಟ್ಟಿಸಿದ್ದಾರೆ.

ಇನ್ನುಂದೆ ರಾಜ್ಯಸಭಾ ಸದಸ್ಯರು ರೈಲ್ವೆ ಟಿಕೆಟ್ ಬುಕ್ ಮಾಡಿ, ಒಂದು ವೇಳೆ ಪ್ರಯಾಣಿಸದಿದ್ದರೇ ಆ ಟಿಕೆಟ್ ವೆಚ್ಚವನ್ನು ರಾಜ್ಯಸಭಾ ಸದಸ್ಯರು ತಮ್ಮ ಸ್ವಂತ ಹಣದಿಂದ ಪಾವತಿಸಬೇಕು ಎಂದು ವೆಂಕಯ್ಯ ನಾಯ್ಡು ಆದೇಶ ಮಾಡಿದ್ದಾರೆ.

ಇತ್ತೀಚೆಗೆ ಶೇ 87 ರಷ್ಟು ಪ್ರಯಾಣ ರದ್ದಾದರೂ ರೈಲ್ವೆ ಟಿಕೆಟ್ ವೆಚ್ಚವನ್ನು ರಾಜ್ಯಸಭೆ ಭರಿಸಿದೆ. ಹೀಗಾಗಿ ಇದು ರಾಜ್ಯಸಭೆಗೆ ಹಣಕಾಸಿನ ಅಶಿಸ್ತು ಎಂದು ತಿಳಿದು ವೆಂಕಯ್ಯ ನಾಯ್ಡು ಅವರು ಈ ಆದೇಶ ಮಾಡಿದ್ದಾರೆ.

ಹಣ ಪೋಲು: ರಾಜ್ಯಸಭಾ ಸದಸ್ಯರಿಗೆ ವೆಂಕಯ್ಯ ನಾಯ್ಡು ಬಿಸಿ

ರಾಜ್ಯಸಭಾ ಸದಸ್ಯರ ರೈಲು ಪ್ರಯಾಣದ ಕುರಿತು ವೆಂಕಯ್ಯ ನಾಯ್ಡು ಅವರು ತನಿಖೆಗೆ ಆದೇಶಿಸಿದ್ದರು. ಶೇ 87 ರಷ್ಟು ಪ್ರಯಾಣ ರದ್ದಾದರೂ ರಾಜ್ಯಸಭೆಯಿಂದ ರೈಲ್ವೆ ಇಲಾಖೆಗೆ ಹಣ ಪಾವತಿಸಲಾಗಿದೆ ಎಂದು ಅಧಿಕಾರಿಗಳು ನಾಯ್ಡು ಅವರಿಗೆ ವರದಿ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+