ದೇಶದಲ್ಲಿ ಈಗ ಕ್ರಿಕೆಟ್ ಜ್ವರ ಹೆಚ್ಚಾಗುತ್ತಿದೆ. ಒಂದು ಕಡೆಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯ ಅಭಿಮಾನಿಗಳನ್ನು ಸೆಳೆಯುತ್ತಿದ್ದರೆ, ಇನ್ನೊಂದೆಡೆ ರಣಜಿ ಟೂರ್ನಿಯ ಪಂದ್ಯಗಳತ್ತ ಸಹ ಫ್ಯಾನ್ಸ್ ಚಿತ್ತ ನೆಟ್ಟಿದ್ದಾರೆ. ಈ ಸರಣಿ ಮುಗಿಯುತ್ತಿದ್ದಂತೆ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆರಂಭವಾಗಲಿದೆ.
2023-24ನೇ ಸಾಲಿನ ರಣಜಿ ಟೂರ್ನಿಯ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಒಟ್ಟು 32 ತಂಡಗಳು 138 ಪಂದ್ಯಗಳಲ್ಲಿ ಕಾದಾಟ ನಡೆಸಲಿವೆ. 32 ತಂಡಗಳನ್ನು ಒಟ್ಟು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅಲ್ಲದೆ ಎಲೈಟ್ ಗುಂಪಿನಲ್ಲಿ ಪ್ರತಿ ತಂಡ ಏಳು ಪಂದ್ಯಗಳನ್ನು ಆಡಿದೆ. ಅಂಕ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದಿವೆ. ಈಗಾಗಲೇ ಕ್ವಾರ್ಟರ್ ಫೈನಲ್ ಪಂದ್ಯಗಳ ಫಲಿತಾಂಶ ಸಹ ಬಂದಿದೆ. ಕರ್ನಾಟಕ ಈ ಟೂರ್ನಿಯಿಂದ ಹಿರ ಬಿದ್ದಿದೆ.

ಹಾಗಿದ್ದರೆ, ದೇಶೀಯ ಟೂರ್ನಿಯಲ್ಲಿ ಆಡಿದ ಆಟಗಾರರಿಗೆ ಸಿಗುವ ಸಂಭವಾನೆ ಎಷ್ಟು? ವಿಜೇತರಿಗೆ ಲಭಿಸುವ ಹಣವೆಷ್ಟು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.
ರನ್ನರ್‌ಅಪ್ ತಂಡಕ್ಕೆ ಸಿಗುವ ಹಣವೆಷ್ಟು?
ಪ್ರಸಕ್ತ ಸಾಲಿನಲ್ಲಿ ರಣಜಿ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ತಂಡಕ್ಕೆ ಸುಮಾರು 5 ಕೋಟಿ ಲಭಿಸಲಿದೆ. ಇನ್ನು ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ತಂಡಕ್ಕೆ ಸುಮಾರು 3 ಕೋಟಿ ರೂಪಾಯಿ ಸಿಗಲಿದೆ. ಸೆಮಿಫೈನಲ್‌ನಲ್ಲಿ ಸೋಲು ಕಂಡ ತಂಡಗಳು ಸಹ ಒಂದು ಕೋಟಿ ರೂಪಾಯಿ ಪಡೆಯಲಿವೆ.

ಆಟಗಾರರಿಗೆ ಸಿಗುವ ಹಣವೆಷ್ಟು?
ರಣಜಿ ತಂಡದಲ್ಲಿ ಆಡುವ ಆಟಗಾರರಿಗೆ ಬಿಸಿಸಿಐ ಕೈ ತುಂಬ ಹಣವನ್ನು ನೀಡುತ್ತದೆ. ಬಿಸಿಸಿಐ ಮೂಲಗಳ ಪ್ರಕಾರ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಲ್ಲಿ ದಿನಕ್ಕೆ 35 ಸಾವಿರ ರೂ. ಆಟಗಾರ ಪಡೆಯುತ್ತಾನೆ. ಬೆಂಚ್ ಕಾಯುವ ಆಟಗಾರ 17,500 ರೂಪಾಯಿ ಪಡೆಯುತ್ತಾನೆ. ಅಂದರೆ ಆಡುವ ಆಟಗಾರ ಸುಮಾರು 1.75 ಲಕ್ಷ ಒಂದು ಪಂದ್ಯದಿಂದ ದುಡಿಯುತ್ತಾನೆ. ಇನ್ನು ಕಾಯ್ದಿರಿಸಿದ ಆಟಗಾರ 87,500 ಪಡೆಯುತ್ತಾನೆ.
ಆಟಗಾರ ಪಂದ್ಯಗಳನ್ನು ಆಡಿದ ಅನುಭವದ ಮೇಲೆ ಸಂಭಾವನೆ ಮತ್ತೆ ಹೆಚ್ಚಾಗುತ್ತದೆ. 10-20 ರಣಜಿ ಪಂದ್ಯ ಆಡಿದ ಆಟಗಾರ 40 ಸಾವಿರ, 21-40 ಪಂದ್ಯ ಆಡಿದ ಆಟಗಾರ ಸುಮಾರಯ 50 ಸಾವಿರ, 41 ರಿಂದ 60 ಪಂದ್ಯಗಳನ್ನು ಆಡಿದ ಆಟಗಾರ ಪ್ರತಿ ದಿನ 60 ಸಾವಿರ ರೂ. ಪಡೆಯುತ್ತಾನೆ.


Click it and Unblock the Notifications