For Quick Alerts
ALLOW NOTIFICATIONS  
For Daily Alerts

ಫೆಬ್ರವರಿ 8ರಂದು Rapido ಸ್ಕೂಟರ್‌ ರೈಡ್ 100% ಫ್ರೀ

|

ಬೈಕ್ ಟ್ಯಾಕ್ಸಿ ಬುಕಿಂಗ್ ಆ್ಯಪ್ ರ್ಯಾಪಿಡೊ ಫೆಬ್ರವರಿ 8 (ಶನಿವಾರ)ರಂದು ದೆಹಲಿಯ ಎಲ್ಲಾ ಮತದಾರರಿಗೆ ಉಚಿತ ರೈಡ್ ನೀಡುವುದಾಗಿ ಹೇಳಿದೆ.

 

ಫೆಬ್ರವರಿ 8 ರಂದು ದೆಹಲಿಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮತದಾರರು ದೆಹಲಿಯಲ್ಲಿ ಎಲ್ಲಿಯಾದಾರೂ ಚುನಾವಣಾ ಬೂತ್‌ಗೆ ಮೂರೂ ಕಿ.ಮೀ.ವರೆಗೆ ಎಲ್ಲಾ ರೈಡ್‌ಗೆ ನೂರಕ್ಕೆ ನೂರರಷ್ಟು ರೈಡ್ ಫ್ರೀ ಎಂದು ಕಂಪನಿ ಹೇಳಿದೆ.

 
ಫೆಬ್ರವರಿ 8ರಂದು Rapido ಸ್ಕೂಟರ್‌ ರೈಡ್ 100% ಫ್ರೀ

"ನಾವು ಚುನಾವಣೆಗಳನ್ನು ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಒಂದು ಪ್ರಮುಖ ಭಾಗವಾಗಿ ನೋಡುತ್ತೇವೆ ಮತ್ತು ಸಮಾಜಕ್ಕಾಗಿ ನಮ್ಮ ಕೈಲಾದಷ್ಟು ಮಾಡಲು ಬಯಸುತ್ತೇವೆ. ಮತ ಚಲಾಯಿಸಲು, ಸಾರಿಗೆ ಅಡೆತಡೆಗಳನ್ನು ನಿವಾರಿಸಲು, ದೆಹಲಿಯ ಮತದಾರರಿಗೆ ನಾವು 100 ಪರ್ಸೆಂಟ್ರಷ್ಟು ಉಚಿತವಾಗಿ ರೈಡ್‌ ಅನ್ನು ರಾಪಿಡೋ ಆ್ಯಪ್‌ನಲ್ಲಿ ನೀಡುತ್ತಿದ್ದೇವೆ. "ಎಂದು ರ್ಯಾಪಿಡೊ ಸಹ ಸಂಸ್ಥಾಪಕ ಅರವಿಂದ್ ಶಂಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ರ್ಯಾಪಿಡೊ ಪ್ರಧಾನ ಕಚೇರಿಯ ಪ್ರಕಾರ, ದೆಹಲಿಯ ಎಲ್ಲ ಬಳಕೆದಾರರಿಗೆ ಪುಶ್ ಅಧಿಸೂಚನೆಯನ್ನು (ನೋಟಿಫಿಕೇಶನ್) ಕಳುಹಿಸಲಾಗುವುದು. ರ್ಯಾಪಿಡೊ ಆ್ಯಪ್ ಮೂಲಕ ಹೋಗ ಬಯಸುವ ಮತದಾರರು 'IVOTE' ಎಂಬ ಕೋಡ್ ಅನ್ನು ಬಳಸುವ ಮೂಲಕ ಫೆಬ್ರವರಿ 8ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ದೆಹಲಿಯಲ್ಲಿ ಮೂರು ಕಿ.ಮೀ ವರೆಗೆ ಹೋಗಬಹುದು.

ಈಗ ಸುಮಾರು 100 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರ್ಯಾಪಿಡೊ 2019 ರ ನವೆಂಬರ್‌ನಲ್ಲಿ ದೆಹಲಿಯಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸಿತು. ಮತ್ತು ಅಂದಿನಿಂದ ಆ್ಯಪ್ ಮೂಲಕ ಒಂದು ಲಕ್ಷ ರೈಡ್‌ಗಳನ್ನು ದಾಖಲಿಸಿದೆ.

English summary

Rapido Offer Free Rides To Delhi Voter On Feb 8

Bike taxi booking app Rapido on Saturday claimed it would offer free rides to all the voters here on February 8
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X