ವೆಚ್ಚ ತಗ್ಗಿಸಲು ಏನೆಲ್ಲ ಮಾಡುತ್ತಿದೆ ಗೊತ್ತೆ ರೇಮಂಡ್?

ಮುಂಬೈ ಮೂಲದ ಹೆಸರಾಂತ ಕಂಪೆನಿ ಹಾಗೂ ವಿಶ್ವದ ಅತಿದೊಡ್ಡ ಬಟ್ಟೆ ತಯಾರಿಕೆ ಕಂಪೆನಿಗಳಲ್ಲಿ ಒಂದಾದ ರೇಮಂಡ್ ಲಿಮಿಟೆಡ್ ಉದ್ಯೋಗ, ಬಾಡಿಗೆ, ಮಾರ್ಕೆಟಿಂಗ್ ವೆಚ್ಚ ಕಡಿತಕ್ಕೆ ಮುಂದಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವೆಚ್ಚವನ್ನು 35% ಕಡಿಮೆ ಮಾಡಲು ತೀರ್ಮಾನ ಮಾಡಿದೆ. ಅಧ್ಯಕ್ಷ ಗೌತಮ್ ಹರಿ ಸಿಂಘಾನಿಯಾ ಕಳೆದ ವಾರ ವರ್ಚುವಲ್ ಸಂದರ್ಶನದಲ್ಲಿ ಈ ಬಗ್ಗೆ ಹೇಳಿದ್ದಾರೆ.

ಕೇಂದ್ರ ಬ್ಯಾಂಕ್ ನೀಡುತ್ತಿರುವ ಒನ್ ಟೈಮ್ ಸಾಲ ಮರುಪಾವತಿ ಮುಂದೂಡಿಕೆಯನ್ನು ಕೇಳಲಿದೆ. "ಮತ್ತೆ ಸರಿಪಡಿಸಲು ಈ ಸಂದರ್ಭವನ್ನು ರೇಮಂಡ್ ಅವಕಾಶವಾಗಿ ಬಳಸುತ್ತದೆ" ಎಂದು ಸಿಂಘಾನಿಯಾ ಹೇಳಿದ್ದಾರೆ. ಇದು ಬಿಕ್ಕಟ್ಟು ಎಂದು ನಮಗೆ ಗೊತ್ತಾಗಿದೆ ಹಾಗೂ ನಾವು ಗಟ್ಟಿಯಾಗಿ ನಿಲ್ಲುತ್ತೇವೆ ಎಂದಿದ್ದಾರೆ.

ವಿಶ್ವದಾದ್ಯಂತ ವಾಣಿಜ್ಯ- ವ್ಯವಹಾರದ ಬಟ್ಟೆ ವ್ಯವಹಾರಕ್ಕೆ ಪೆಟ್ಟು ಬಿದ್ದಿದೆ. ಈ ತಿಂಗಳು ಹೆಸರಾಂತ ಬಟ್ಟೆ ಕಂಪೆನಿ- ಎರಡು ಶತಮಾನದಷ್ಟು ಹಳೆದ ಬ್ರೂಕ್ಸ್ ಬ್ರದರ್ಸ್ ಗ್ರೂಪ್ ಕಂಪೆನಿ ದಿವಾಳಿ ಘೋಷಿಸಿದೆ. ಇನ್ನು ರೇಮಂಡ್ಸ್ 1925ರಲ್ಲಿ ಆರಂಭವಾಗಿದ್ದು, ಇನ್ನು ಐದು ವರ್ಷಕ್ಕೆ ಶತಮಾನವನ್ನು ತಲುಪಲಿದೆ. ಕೊರೊನಾ ಬಿಕ್ಕಟ್ಟಿನಿಂದ ಜಾಗತಿಕ ಮಟ್ಟದ ಇತರ ಬಟ್ಟೆ ಕಂಪೆನಿಗಳಿಗಿಂತ ಹೆಚ್ಚಿನ ನಷ್ಟ ಅನುಭವಿಸಿದೆ ರೇಮಂಡ್ಸ್.

ವೆಚ್ಚ ತಗ್ಗಿಸಲು ಏನೆಲ್ಲ ಮಾಡುತ್ತಿದೆ ಗೊತ್ತೆ ರೇಮಂಡ್?

ಏಪ್ರಿಲ್ ಹಾಗೂ ಮಾರ್ಚ್ ನಲ್ಲಿ ರೇಮಂಡ್ಸ್ ಮಾರಾಟ 29% ಕುಸಿತವಾಗಿದೆ. ಇನ್ನು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಆದಾಯ 1% ಕುಸಿತವಾಗಿದೆ. ಜುಲೈ 2ರ ಹೊತ್ತಿಗೆ ಒಟ್ಟು 1638 ಮಳಿಗೆಗಳಲ್ಲಿ 1332 ಪುನರಾರಂಭವಾಗಿದೆ. ಕೊರೊನಾಗೆ ಮುಂಚೆ ಇದ್ದ ಮಾರಾಟದ 45%ನಷ್ಟು ಸದ್ಯಕ್ಕೆ ಮಾರಾಟ ಆಗುತ್ತಿದೆ.

"ನೀವು ಪ್ರಬಲ ಬ್ರ್ಯಾಂಡ್ ಆಗಿ ಆರ್ಥಿಕ ಹಿಂಜರಿತವನ್ನು ನಿಮ್ಮ ಪರವಾಗಿ ಯೋಚಿಸಬೇಕು" ಎಂದಿರುವ ಸಿಂಘಾನಿಯಾ, ಬ್ರೂಕ್ಸ್ ಬ್ರದರ್ಸ್ ನಿರ್ದಿಷ್ಟವಾದ ಹಾಗೂ ಫಾರ್ಮಲ್ ದಿರಿಸುಗಳನ್ನು ಒದಗಿಸುತ್ತಿದ್ದರು. ಅವರು ನಮ್ಮ ರೀತಿಯಲ್ಲಿ ಅಲ್ಲ. ಆದ್ದರಿಂದ ನಮಗೆ ಹೆಚ್ಚಿನ ಚಿಂತೆ ಇಲ್ಲ. ಸದ್ಯಕ್ಕೆ ರೇಮಂಡ್ ನ ಬೆಂಗಳೂರು ಕಾರ್ಖಾನೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಪಿಪಿಇ ತಯಾರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ರೇಮಂಡ್ ನಿಂದ ನಾನಾ ರೇಂಜ್ ನ ದಿರಿಸುಗಳನ್ನು ಒದಗಿಸಲಾಗುತ್ತಿದೆ. ವಿಶ್ವದ ಇತರ ಕಂಪೆನಿಗಳು ಕೇವಲ ಸೂಟ್ ಮಾತ್ರ ಮಾರಾಟ ಮಾಡುತ್ತವೆ ಎಂದು ಸಿಂಘಾನಿಯಾ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+