ಆರ್‌ಬಿಐ (RBI) ನಿಯಮಗಳ ಪಾಲಿಸದ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳ ವಿರುದ್ಧ 'ಭಾರತೀಯ ರಿಸರ್ವ್ ಬ್ಯಾಂಕ್' ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಹಾಗಿದ್ರೆ ಯಾವೆಲ್ಲಾ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ದಂಡ ವಿಧಿಸಿದೆ..? ಎಷ್ಟು ಮೊತ್ತದ ದಂಡವನ್ನು ಹೆಚ್ಚಿಸಿದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ನಿಯಮಗಳ ಪಾಲಿಸದ ಮಣಪ್ಪರಂ ಫೈನಾನ್ಸ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ವಿರುದ್ಧ ದಂಡ ವಿಧಿಸಿದೆ. ಭಾರತದ ಕೇಂದ್ರ ಬ್ಯಾಂಕಾಗಿರುವ 'ರಿಸರ್ವ್ ಬ್ಯಾಂಕ್ ಆಫರ್ ಇಂಡಿಯಾ' ದೇಶದ ಎಲ್ಲ ಬ್ಯಾಂಕುಗಳನ್ನು ನಿಯಂತ್ರಣದಲಿಟ್ಟುಕೊಳ್ಳುವ ಅಧಿಕಾರವನ್ನು ಹೊಂದಿದೆ. ಬ್ಯಾಂಕುಗಳಿಂದ ಗ್ರಾಹಕರಿಗೆ ನೀಡುವ ಸೇವೆಗಳ ಬಗ್ಗೆ, ಬ್ಯಾಂಕಿಂಗ್ ಚಟುವಟಿಕೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಥವಾ ನಿಯಮ ಉಲ್ಲಂಘಿಸಿದರೆ ಅಂತಹ ಬ್ಯಾಂಕ್ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತದೆ.

ಇನ್ನೂ ಆರ್‌ಬಿಐ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಚಟುವಟಿಕೆಗಳು ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಕೆಲವು ಮಾರ್ಗಸೂಚಿಗಳನ್ನು ರೂಪಿಸಿದೆ. ಈ ನಿಯಮಗಳಿಗೆ ಅನುಗುಣವಾಗಿ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಕಾರ್ಯವನ್ನು ನಿರ್ಭಹಿಸಬೇಕಾಗುತ್ತದೆ.
ಇಂಡಸ್‌ಇಂಡ್ ಬ್ಯಾಂಕ್ ಮೇಲೆ 27 ಲಕ್ಷ ದಂಡ
ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಇಂಡಸ್‌ಇಂಡ್ ಬ್ಯಾಂಕ್ ವಿರುದ್ಧ ಕ್ರಮ ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ 27.30 ಲಕ್ಷ ದಂಡ ವಿಧಿಸಲಾಗಿದೆ.
ಇಂಡಸ್‌ಇಂಡ್ ಬ್ಯಾಂಕ್ ಕೆಲವು ಅರ್ಹವಲ್ಲದ ಕಂಪನಿಗಳ ಹೆಸರಿನಲ್ಲಿ ಉಳಿತಾಯ ಠೇವಣಿ ಖಾತೆ ತೆರೆದ ಆರೋಪದ ಮೇಳೆ ಆರ್‌ಬಿಐ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಬ್ಯಾಂಕ್‌ಗೆ ದಂಡ ವಿಧಿಸಿದೆ. ಇದಲ್ಲದೆ ಬ್ಯಾಂಕ್‌ಗೆ ಈಗಾಗಲೇ ನೋಟಿಸ್ ಜಾರಿ ಮಾಡಿದೆ. ಆರ್‌ಬಿಐ ನಿಯಮಗಳ ಪ್ರಕಾರ ಈ ಬ್ಯಾಂಕ್‌ಗೆ 27.30 ಲಕ್ಷ ದಂಡ ವಿಧಿಸಲಾಗಿದೆ
ಮಣಪ್ಪುರಂ ಫೈನಾನ್ಸ್ ವಿರುದ್ಧ 20 ಲಕ್ಷ ದಂಡ
ಆರ್‌ಬಿಐ ಪ್ರಮುಖ ಬ್ಯಾಂಕೇತರ ಹಣಕಾಸು ಸಂಸ್ಥೆಯಾದ ಮಣಪ್ಪುರಂ ಫೈನಾನ್ಸ್ ವಿರುದ್ಧ 20 ಲಕ್ಷ ದಂಡವನ್ನು ವಿಧಿಸಿದೆ. ಗ್ರಾಹಕರ ಪ್ಯಾನ್ ನಂಬರ್ ವೆರಿಫಿಕೇಷನ್ ಸಮಯದಲ್ಲಿ ವಿಫಲವಾಗಿದೆ ಎಂದು ಅದು ಕಂಡುಹಿಡಿದಿದೆ. ಹೀಗಾಗಿ ಆರ್‌ಬಿಐ ನಿಯಮಗಳ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಆರ್‌ಬಿಐ ಹಲವಾರು ಪ್ರಮುಖ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಂಡಿದೆ. ಕೆಲವೊಮ್ಮೆ ಹಣಕಾಸು ಸಂಸ್ಥೆಗಳ ಪರವಾನಗಿಯನ್ನೇ ರದ್ದುಗೊಳಿಸುವಂತಹ ಕ್ರಮವನ್ನು ಸಹ ಕೈಗೊಂಡು ಕಠಿಣ ಕ್ರಮವನ್ನು ಕೈಗೊಳ್ಳುತ್ತಿದೆ. ಆರ್‌ಬಿಐ ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಆಗಾಗ್ಗೆ ಪರಿಶೀಲಿಸುವ ನಿಯಂತ್ರಣ ಹೊಂದಿದೆ. ಆರ್‌ಬಿಐ ನಿಯಮಗಳನ್ನು ಪಾಲಿಸದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮವನ್ನು ತಗೆದುಕೊಳ್ಳುವ ಅಧಿಕಾರವನ್ನು ಹೊಂದಿದೆ.


Click it and Unblock the Notifications