ಕೇಂದ್ರ ಸರ್ಕಾರಕ್ಕೆ 57,000 ಕೋಟಿ ಡಿವಿಡೆಂಡ್ ಪಾವತಿಸಲು ಆರ್ ಬಿಐ ಒಪ್ಪಿಗೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (ಆರ್ ಬಿಐ) ಸರ್ಕಾರಕ್ಕೆ 57,128 ಕೋಟಿ ರುಪಾಯಿ ಲಾಭಾಂಶ (ಡಿವಿಡೆಂಡ್) ಪಾವತಿಸಲಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಬಜೆಟ್ 2020- 21ರ ಲೆಕ್ಕಾಚಾರದ ಪ್ರಕಾರ, ಕೇಂದ್ರ ಬ್ಯಾಂಕ್ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ 60,000 ಕೋಟಿ ರುಪಾಯಿ ಡಿವಿಡೆಂಡ್ ಬರಬಹುದು ಎಂಬ ಲೆಕ್ಕಾಚಾರ ಇತ್ತು.
ಇನ್ನು ಕಳೆದ ವರ್ಷ ಆರ್ ಬಿಐನಿಂದ 1.76 ಲಕ್ಷ ಕೋಟಿ ರುಪಾಯಿಯನ್ನು ಪಾವತಿ ಮಾಡಲು ಮಂಡಳಿಯಿಂದ ಒಪ್ಪಿಗೆ ನೀಡಲಾಗಿತ್ತು. 526.4 ಬಿಲಿಯನ್ ರುಪಾಯಿಯನ್ನು ಹೆಚ್ಚುವರಿ ಮೀಸಲು ನಿಧಿಯಿಂದ ಪಾವತಿಸಲಾಗಿತ್ತು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಕೇಂದ್ರ ಸರ್ಕಾರ ಹಣಕಾಸಿನ ಸಮಸ್ಯೆ ಎದುರಿಸುತ್ತಿದೆ. ಆದಾಯದಲ್ಲಿ ಭಾರಿ ಕುಸಿತ ಆಗಿರುವುದರಿಂದ ಸರ್ಕಾರಕ್ಕೆ ಈ ರೀತಿಯ ಡಿವಿಡೆಂಡ್, ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಮಾರಾಟದಿಂದ ಬರುವ ಬಂಡವಾಳದ ಮೂಲಕ ಕೊರತೆಯನ್ನು ನೀಗಿಸಿಕೊಳ್ಳುವ ಸವಾಲು ಎದುರಿಸುತ್ತಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications