ನೀವು ಯಾರಿಗಾದರೂ ಯುಪಿಐ ಮತ್ತು ಐಎಂಪಿಎಸ್ನಲ್ಲಿ ಹಣ ಕಳುಹಿಸುವಾಗ ಅವರ ಬ್ಯಾಂಕ್ ಖಾತೆಯಲ್ಲಿರುವ ಹೆಸರನ್ನು ಸರಿ ಇದ್ದೀಯಾ ಎಂದು ಪರಿಶೀಲಿಸಿಕೊಂಡು ಖಚಿತಪಡಿಸಿಕೊಳ್ಳಬಹುದು.ಆದರೆ, ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಮೂಲಕ ಹಣ ವರ್ಗಾವಣೆ ಮಾಡುವಾಗ ವ್ಯಕ್ತಿಯ ಹೆಸರು ಮತ್ತು ಅಕೌಂಟ್ ಅನ್ನು ಖಾತ್ರಿ ಮಾಡುವ ಅವಕಾಶ ಇರಲಿಲ್ಲ. ಇದರಿಂದ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಆಗಿ ಹೋಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಈಗ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿಯಲ್ಲೂ ಹೆಸರು ಪರಿಶೀಲಿಸುವ ಸೌಲಭ್ಯವನ್ನು ಜಾರಿಗೊಳಿಸಬೇಕಂದು ಸೋಮವಾರ (ಡಿ.30) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ( ಆರ್‌ಬಿಐ) ಎಲ್ಲಾ ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ.
ಹೌದು, ಆರ್ಟಿಜಿಎಸ್ ಅಥವಾ ಎನ್ಇಎಫ್ಟಿ ವ್ಯವಸ್ಥೆಯ ಮೂಲಕ ಹಣ ಕಳುಹಿಸುವ ಮುನ್ನ ಹಣ ಕಳುಹಿಸುವವರು ಫಲಾನುಭವಿ ಖಾತೆದಾರರ ಹೆಸರನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುವಂಥ ಸೌಲಭ್ಯ ಜಾರಿಗೊಳಿಸಬೇಕಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.

ಏಪ್ರಿಲ್ 1, 2025 ರಂದು ಸೌಲಭ್ಯ ಲಭ್ಯ
ಆರ್ಟಿಜಿಎಸ್ ಮತ್ತು ಎನ್ಇಎಫ್ಟಿಯ ನೇರ ಅಥವಾ ಉಪ ಸದಸ್ಯರಾಗಿರುವ ಎಲ್ಲಾ ಬ್ಯಾಂಕುಗಳು ಏಪ್ರಿಲ್ 1, 2025 ರ ನಂತರ ಈ ಸೌಲಭ್ಯವನ್ನು ನೀಡುವಂತೆ ಸೂಚಿಸಲಾಗಿದೆ ಎಂದು ಆರ್‌ಬಿಐ ಸುತ್ತೋಲೆಯಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ.
ಬೇರೆಯವರ ಖಾತೆಗೆ ಹಣ ಜಮಾ ಆಗುವುದನ್ನು ತಡೆಯಲು ಕ್ರಮ
ಆರ್ಟಿಜಿಎಸ್ ಮತ್ತು ಎನ್ಇಎಫ್ಟಿಯಲ್ಲಿ ಈ ಸೌಲಭ್ಯ ಜಾರಿಯಾದರೆ ಹಣ ಕಳುಹಿಸುವವರು ಫಲಾನುಭವಿಯ ಖಾತೆ ಸಂಖ್ಯೆ ಮತ್ತು ಶಾಖೆ ಐಎಫ್ಎಸ್ಸಿ ಕೋಡ್ ನಮೂದಿಸಿದ ನಂತರ ಅವರಿಗೆ ಫಲಾನುಭವಿ ಖಾತೆಯ ಹೆಸರು ಕಾಣಿಸುತ್ತದೆ. ಇದರಿಂದ ತಪ್ಪಾದ ಖಾತೆಗಳಿಗೆ ಹಣ ಜಮೆಯಾಗುವುದನ್ನು ಮತ್ತು ವಂಚನೆಗಳನ್ನು ತಡೆಗಟ್ಟಬಹುದು ಹಾಗೂ ಇದರಿಂದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಗ್ರಾಹಕರ ವಿಶ್ವಾಸ ಹೆಚ್ಚಾಗಲಿದೆ.
ಬ್ಯಾಂಕ್ ಖಾತೆ ಹೆಸರಿನ ಲುಕ್- ಅಪ್ ಸೌಲಭ್ಯ
ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ (ಆರ್ಟಿಜಿಎಸ್) ಮತ್ತು ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ (ಎನ್ಇಎಫ್ಟಿ) ವ್ಯವಸ್ಥೆಗಳಿಗೆ ಫಲಾನುಭವಿ ಬ್ಯಾಂಕ್ ಖಾತೆ ಹೆಸರಿನ ಲುಕ್- ಅಪ್ ಸೌಲಭ್ಯವನ್ನು ಪರಿಚಯಿಸಲು ಅಕ್ಟೋಬರ್ 9, 2024 ರ ಆರ್‌ಬಿಐ ನ ಅಭಿವೃದ್ಧಿ ಮತ್ತು ನಿಯಂತ್ರಣ ನೀತಿಗಳ ಹೇಳಿಕೆಯಲ್ಲಿ ಪ್ರಸ್ತಾಪ ಮಾಡಲಾಗಿದೆ.
ಅದರಂತೆ ಈ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಎಲ್ಲಾ ಬ್ಯಾಂಕುಗಳನ್ನು ಈ ವ್ಯವಸ್ಥೆಯಡಿ ತರಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಗೆ ಸೂಚಿಸಲಾಗಿದೆ ಎಂದು ಆರ್‌ಬಿಐ ಎಲ್ಲಾ ಬ್ಯಾಂಕುಗಳಿಗೆ ಸುತ್ತೋಲೆಯಲ್ಲಿ ತಿಳಿಸಿದೆ. ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಸಿಸ್ಟಮ್ಸ್ ನಲ್ಲಿರುವ ಬ್ಯಾಂಕುಗಳು ಈ ಸೌಲಭ್ಯವನ್ನು ತಮ್ಮ ಗ್ರಾಹಕರಿಗ ಇಂಟರ್ ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ಲಭ್ಯವಾಗುವಂತೆ ಮಾಡಬೇಕು ಎಂದು ಆರ್‌ಬಿಐ ನಿರ್ದೇಶಿಸಿದೆ.
ಪ್ರಸ್ತುತ, ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ಮತ್ತು ತಕ್ಷಣದ ಪಾವತಿ ಸೇವೆ (ಐಎಂಪಿಎಸ್) ವ್ಯವಸ್ಥೆಗಳಲ್ಲಿ ಹಣ ವರ್ಗಾವಣೆಯನ್ನು ಪ್ರಾರಂಭಿಸುವ ಮೊದಲು ಫಲಾನುಭವಿಯ ಹೆಸರನ್ನು ಪರಿಶೀಲಿಸಲು ಅವಕಾಶವಿದೆ. ಈಗ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಹಣ ವರ್ಗಾವಣೆಯಲ್ಲಿಯೂ ಈ ಸೌಲಭ್ಯವನ್ನು ಪರಿಚಯಿಸಲು ನಿರ್ಧರಿಸಲಾಗಿದೆ.
ಆರ್‌ಬಿಐನ 26ನೇ ಗವರ್ನರ್ ಆಗಿ ಇತ್ತೀಚೆಗೆ ಸಂಜಯ್ ಮಲ್ಹೋತ್ರಾ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಡಿಸೆಂಬರ್ 10 ರಂದು ಕೊನೆಗೊಂಡಿತ್ತು. ಹೀಗಾಗಿ, ಮಲ್ಹೋತ್ರಾ ಅವರನ್ನು 26ನೇ ಆರ್‌ಬಿಐ ಗವರ್ನರ್ ಆಗಿ ಆಯ್ಕೆ ಮಾಡಲಾಗಿದೆ. ಇವರು ಮುಂದಿನ ಮೂರು ವರ್ಷ ಕಾಲ ಆರ್‌ಬಿಐನ ಗವರ್ನರ್ ಆಗಿ ಕೆಲಸ ನಿರ್ವಹಿಸಲಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications