RBI: ಹೊಸ ಆದೇಶ! ಗ್ರಾಹಕರು ‌ನಿರಾಳ; ಇವರಿಗೆಲ್ಲಾ 100 ರೂ. ದಂಡ.. ಯಾಕೆ?

ಇನ್ಮುಂದೆ ಗ್ರಾಹಕರು ನಿರಾಳ! ಬ್ಯಾಂಕ್‌ಗಳ ಮೇಲೆ ಆರ್ ಬಿಐ (RBI) ದಂಡಾಸ್ತ್ರ ಪ್ರಯೋಗ. ಈ ಆದೇಶ ಪಾಲಿಸದಿದ್ದರೆ ಬೀಳುತ್ತೆ 100 ರೂ. ದಂಡ. ಹೌದು, ಬ್ಯಾಂಕುಗಳು,ಎನ್​ಬಿಎಫ್​ಸಿಗಳು, ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳು ತಮ್ಮ ಗ್ರಾಹಕರ ದೂರುಗಳನ್ನು 30 ದಿನದೊಳಗೆ ಸಮಸ್ಯೆಗೆ ಪರಿಹಾರ ನೀಡದೇ ಹೋದರೆ ದಂಡ ಕಟ್ಟಬೇಕಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಆದೇಶವನ್ನು ಬ್ಯಾಂಕ್‌ಗಳಿಗೆ ನೀಡಿದೆ.

ಆರ್​ಬಿಐನ ಹೊಸ ನಿರ್ದೇಶನದ ಪ್ರಕಾರ ಈ ಸಂಸ್ಥೆಗಳು ಗ್ರಾಹಕರಿಗೆ ಪರಿಹಾರವಾಗಿ ದಿನಕ್ಕೆ 100 ರೂನಂತೆ ದಂಡ ಕಟ್ಟಿಕೊಡಬೇಕು. ಯಾವುದಾದರೂ ಬ್ಯಾಂಕು ತಮ್ಮ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಸಿಐಸಿ ಬಳಿ ಕೇಳಿದಲ್ಲಿ ಅದರ ಮಾಹಿತಿಯನ್ನು ಗ್ರಾಹಕರಿಗೆ ತಕ್ಕಣ ನೀಡಬೇಕು ಎಂದು ಎಚ್ಚರಿಕೆಯನ್ನು ನೀಡಿದೆ.

RBI: ಗ್ರಾಹಕರು ‌ನಿರಾಳ; ಬ್ಯಾಂಕ್‌ಗಳಿಗೆ 100 ರೂ. ದಂಡ.. ಯಾಕೆ?

ಕ್ರೆಡಿಟ್ ಇನ್ಫಾರ್ಮೇಶನ್‌ಗೂ ನಿಯಮ ಅನ್ವಯ

ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳಿಗೂ ಈ ನಿಯಮಗಳು ಅನ್ವಯ ಆಗುತ್ತದೆ. ಆರ್ ಬಿಐ ಸಂಗ್ರಹಿಸಿದ ದಂಡದ ಹಣವನ್ನು ಗ್ರಾಹಕರಿಗೆ ಪರಿಹಾರವಾಗಿ ನೀಡಲಾಗುತ್ತದೆ. ಎಲ್ಲಾ ಬ್ಯಾಂಕ್‌ಗಳು ಬಹುಬೇಗನೆ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವ ಉದ್ದೇಶಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕ್ರಮವನ್ನು ಕೈಗೊಂಡಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ಗ್ರಾಹಕರಿಗೆ ಇಮೇಲ್ ಅಥವಾ ಮೆಸೇಜು ಮೂಲಕ ಮಾಹಿತಿ ತಿಳಿಸಬೇಕು

ಆರ್ ಬಿಐ ಇನ್ನೂ ಕೆಲ ಮಹತ್ವದ ಕ್ರಮಗಳನ್ನು ಆರ್​ಬಿಐ ತೆಗೆದುಕೊಂಡಿದ್ದು, ಅದರಲ್ಲೂ ಬ್ಯಾಂಕ್‌ಗಳು ಗ್ರಾಹಕರ ಬಳಿ ಸಿಬಿಲ್, ಎಕ್ಸ್​ಪೀರಿಯನ್ ಇತ್ಯಾದಿ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳು (ಸಿಐಸಿ) ಯಾವುದೇ ಹಣಕಾಸು ಸಂಸ್ಥೆ ತಮ್ಮ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಪಡೆದುಕೊಂಡಲ್ಲಿ, ಆ ಬಗ್ಗೆ ಗ್ರಾಹಕರಿಗೆ ಇಮೇಲ್ ಅಥವಾ ಎಸ್ಸೆಮ್ಮೆಸ್ ಮುಖಾಂತರ ಮಾಹಿತಿ ತಿಳಿಸಬೇಕು ಎಂದು ಆರ್​ಬಿಐ ಹೇಳಿದೆ.

ಗ್ರಾಹಕರಿಗೆ ಸಾಲದ ಡೀಫಾಲ್ಟ್ ಬಗ್ಗೆ ತಿಳಿಸಬೇಕು

ಬ್ಯಾಂಕುಗಳು ತಮ್ಮ ಗ್ರಾಹಕರು ಒಂದು ವೇಳೆ ಸಾಲ ಮರುಪಾವತಿಸದೇ ಡೀಫಾಲ್ಟ್ ಆಗುತ್ತಿದ್ದರೆ ಗ್ರಾಹಕರಿಗೆ ಮಾಹಿತಿಯನ್ನು ತಿಳಿಸಬೇಕು.ಇದನ್ನು ಬ್ಯಾಂಕ್‌ ಅವರು 21 ದಿನದೊಳಗೆ ತಿಳಿಸದೇ ಹೋದಲ್ಲಿ ದಿನಕ್ಕೆ 100 ರೂನಂತೆ ಗ್ರಾಹಕರಿಗೆ ಪರಿಹಾರವನ್ನು ಒದಗಿಸಬೇಕಾಗುತ್ತದೆ.

ಸಾಲದ ಇತ್ತೀಚಿನ ಮಾಹಿತಿಯ ಬಗ್ಗೆ ವಿವರ ಕೊಡಬೇಕು.

ಹಣಕಾಸು ಸಂಸ್ಥೆಗಳು ಸಿಐಸಿ ಅಥವಾ ಗ್ರಾಹಕರು ದೂರು ನೀಡಿದ 21 ದಿನದೊಳಗೆ ಸಾಲದ ಇತ್ತೀಚಿನ ಮಾಹಿತಿಯನ್ನು ಸಿಐಸಿಗೆ ನೀಡಬೇಕು ಎನ್ನುವ ನಿಯಮ ಇದೆ. ಅದನ್ನು ಪಾಲಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಗ್ರಾಹಕರಿಗೆ ಸಂಪೂರ್ಣ ವಿವರವನ್ನು ನೀಡುವುದಕ್ಕಾಗಿ ಈ ನಿಯಮಗಳನ್ನು ತಂದಿದೆ.

ಭಾರತದಲ್ಲಿ ನಾಲ್ಕು ಸಿಐಸಿಗಳು ಇವೆ

ಸಿಬಿಲ್, ಸಿಆರ್​ಐಎಫ್, ಈಕ್ವಿಫ್ಯಾಕ್ಸ್ ಮತ್ತು ಎಕ್ಸ್​ಪೀರಿಯನ್ ಸಂಸ್ಥೆಗಳು ಭಾರತದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿವೆ.ಗ್ರಾಹಕರು ನೀಡಿರುವ ದೂರಗಳನ್ನು ಈ ಸಿಐಸಿಗಳು ಮತ್ತು ಬ್ಯಾಂಕುಗಳು 30 ದಿನದೊಳಗೆ ಬಗೆಹರಿಸಬೇಕು. ದೂರಿನ ಸಂಬಂಧ ಏನೇನು ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಗ್ರಾಹಕರಿಗೆ ಮಾಹಿತಿಯನ್ನು ತಿಳಿಸಿರಬೇಕು. ಒಂದು ವೇಳೆ ದೂರನ್ನು ತಿರಸ್ಕರಿಸಿದಲ್ಲಿ ಕಾರಣವನ್ನು ತಿಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ತಿಳಿಸಿದೆ.

ಇನ್ಮುಂದೆ ಗ್ರಾಹಕರು ನಿರಾಳ! ಬ್ಯಾಂಕ್‌ಗಳ ಮೇಲೆ ಆರ್ ಬಿಐ (RBI) ದಂಡಾಸ್ತ್ರ ಪ್ರಯೋಗ. ಈ ಆದೇಶ ಪಾಲಿಸದಿದ್ದರೆ ಬೀಳುತ್ತೆ 100 ರೂ. ದಂಡ. ಹೌದು, ಬ್ಯಾಂಕುಗಳು,ಎನ್​ಬಿಎಫ್​ಸಿಗಳು, ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳು ತಮ್ಮ ಗ್ರಾಹಕರ ದೂರುಗಳನ್ನು 30 ದಿನದೊಳಗೆ ಸಮಸ್ಯೆಗೆ ಪರಿಹಾರ ನೀಡದೇ ಹೋದರೆ ದಂಡ ಕಟ್ಟಬೇಕಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿರ್ದೇಶನವನ್ನು ಬ್ಯಾಂಕ್‌ಗಳಿಗೆ ನೀಡಿದೆ.

ಆರ್​ಬಿಐನ ಹೊಸ ನಿರ್ದೇಶನದ ಪ್ರಕಾರ ಈ ಸಂಸ್ಥೆಗಳು ಗ್ರಾಹಕರಿಗೆ ಪರಿಹಾರವಾಗಿ ದಿನಕ್ಕೆ 100 ರೂನಂತೆ ದಂಡ ಕಟ್ಟಿಕೊಡಬೇಕು. ಯಾವುದಾದರೂ ಬ್ಯಾಂಕು ತಮ್ಮ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಸಿಐಸಿ ಬಳಿ ಕೇಳಿದಲ್ಲಿ ಅದರ ಮಾಹಿತಿಯನ್ನು ಗ್ರಾಹಕರಿಗೆ ತಕ್ಕಣ ನೀಡಬೇಕು ಎಂದು ಎಚ್ಚರಿಕೆಯನ್ನು ನೀಡಿದೆ.

ಕ್ರೆಡಿಟ್ ಇನ್ಫಾರ್ಮೇಶನ್‌ಗೂ ನಿಯಮ ಅನ್ವಯ

ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳಿಗೂ ಈ ನಿಯಮಗಳು ಅನ್ವಯ ಆಗುತ್ತದೆ. ಆರ್ ಬಿಐ ಸಂಗ್ರಹಿಸಿದ ದಂಡದ ಹಣವನ್ನು ಗ್ರಾಹಕರಿಗೆ ಪರಿಹಾರವಾಗಿ ನೀಡಲಾಗುತ್ತದೆ. ಎಲ್ಲಾ ಬ್ಯಾಂಕ್‌ಗಳು ಬಹುಬೇಗನೆ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವ ಉದ್ದೇಶಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕ್ರಮವನ್ನು ಕೈಗೊಂಡಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ಗ್ರಾಹಕರಿಗೆ ಇಮೇಲ್ ಅಥವಾ ಮೆಸೇಜು ಮೂಲಕ ಮಾಹಿತಿ ತಿಳಿಸಬೇಕು

ಆರ್ ಬಿಐ ಇನ್ನೂ ಕೆಲ ಮಹತ್ವದ ಕ್ರಮಗಳನ್ನು ಆರ್​ಬಿಐ ತೆಗೆದುಕೊಂಡಿದ್ದು, ಅದರಲ್ಲೂ ಬ್ಯಾಂಕ್‌ಗಳು ಗ್ರಾಹಕರ ಬಳಿ ಸಿಬಿಲ್, ಎಕ್ಸ್​ಪೀರಿಯನ್ ಇತ್ಯಾದಿ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳು (ಸಿಐಸಿ) ಯಾವುದೇ ಹಣಕಾಸು ಸಂಸ್ಥೆ ತಮ್ಮ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಪಡೆದುಕೊಂಡಲ್ಲಿ, ಆ ಬಗ್ಗೆ ಗ್ರಾಹಕರಿಗೆ ಇಮೇಲ್ ಅಥವಾ ಎಸ್ಸೆಮ್ಮೆಸ್ ಮುಖಾಂತರ ಮಾಹಿತಿ ತಿಳಿಸಬೇಕು ಎಂದು ಆರ್​ಬಿಐ ಹೇಳಿದೆ.

ಗ್ರಾಹಕರಿಗೆ ಸಾಲದ ಡೀಫಾಲ್ಟ್ ಬಗ್ಗೆ ತಿಳಿಸಬೇಕು

ಬ್ಯಾಂಕುಗಳು ತಮ್ಮ ಗ್ರಾಹಕರು ಒಂದು ವೇಳೆ ಸಾಲ ಮರುಪಾವತಿಸದೇ ಡೀಫಾಲ್ಟ್ ಆಗುತ್ತಿದ್ದರೆ ಗ್ರಾಹಕರಿಗೆ ಮಾಹಿತಿಯನ್ನು ತಿಳಿಸಬೇಕು.ಇದನ್ನು ಬ್ಯಾಂಕ್‌ ಅವರು 21 ದಿನದೊಳಗೆ ತಿಳಿಸದೇ ಹೋದಲ್ಲಿ ದಿನಕ್ಕೆ 100 ರೂನಂತೆ ಗ್ರಾಹಕರಿಗೆ ಪರಿಹಾರವನ್ನು ಒದಗಿಸಬೇಕಾಗುತ್ತದೆ.

ಸಾಲದ ಇತ್ತೀಚಿನ ಮಾಹಿತಿಯ ಬಗ್ಗೆ ವಿವರ ಕೊಡಬೇಕು.

ಹಣಕಾಸು ಸಂಸ್ಥೆಗಳು ಸಿಐಸಿ ಅಥವಾ ಗ್ರಾಹಕರು ದೂರು ನೀಡಿದ 21 ದಿನದೊಳಗೆ ಸಾಲದ ಇತ್ತೀಚಿನ ಮಾಹಿತಿಯನ್ನು ಸಿಐಸಿಗೆ ನೀಡಬೇಕು ಎನ್ನುವ ನಿಯಮ ಇದೆ. ಅದನ್ನು ಪಾಲಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಗ್ರಾಹಕರಿಗೆ ಸಂಪೂರ್ಣ ವಿವರವನ್ನು ನೀಡುವುದಕ್ಕಾಗಿ ಈ ನಿಯಮಗಳನ್ನು ತಂದಿದೆ.

ಭಾರತದಲ್ಲಿ ನಾಲ್ಕು ಸಿಐಸಿಗಳು ಇವೆ

ಸಿಬಿಲ್, ಸಿಆರ್​ಐಎಫ್, ಈಕ್ವಿಫ್ಯಾಕ್ಸ್ ಮತ್ತು ಎಕ್ಸ್​ಪೀರಿಯನ್ ಸಂಸ್ಥೆಗಳು ಭಾರತದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿವೆ.ಗ್ರಾಹಕರು ನೀಡಿರುವ ದೂರಗಳನ್ನು ಈ ಸಿಐಸಿಗಳು ಮತ್ತು ಬ್ಯಾಂಕುಗಳು 30 ದಿನದೊಳಗೆ ಬಗೆಹರಿಸಬೇಕು. ದೂರಿನ ಸಂಬಂಧ ಏನೇನು ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಗ್ರಾಹಕರಿಗೆ ಮಾಹಿತಿಯನ್ನು ತಿಳಿಸಿರಬೇಕು. ಒಂದು ವೇಳೆ ದೂರನ್ನು ತಿರಸ್ಕರಿಸಿದಲ್ಲಿ ಕಾರಣವನ್ನು ತಿಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ತಿಳಿಸಿದೆ.

ಏಪ್ರಿಲ್ 1, 2025 ರಂದು ಸೌಲಭ್ಯ ಲಭ್ಯ

ಆರ್​ಟಿಜಿಎಸ್ ಮತ್ತು ಎನ್ಇಎಫ್​ಟಿಯ ನೇರ ಅಥವಾ ಉಪ ಸದಸ್ಯರಾಗಿರುವ ಎಲ್ಲಾ ಬ್ಯಾಂಕುಗಳು ಏಪ್ರಿಲ್ 1, 2025 ರ ನಂತರ ಈ ಸೌಲಭ್ಯವನ್ನು ನೀಡುವಂತೆ ಸೂಚಿಸಲಾಗಿದೆ ಎಂದು ಆರ್​ಬಿಐ ಸುತ್ತೋಲೆಯಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ.

ಬೇರೆಯವರ ಖಾತೆಗೆ ಹಣ ಜಮಾ ಆಗುವುದನ್ನು ತಡೆಯಲು ಕ್ರಮ

ಆರ್​ಟಿಜಿಎಸ್ ಮತ್ತು ಎನ್ಇಎಫ್​ಟಿಯಲ್ಲಿ ಈ ಸೌಲಭ್ಯ ಜಾರಿಯಾದರೆ ಹಣ ಕಳುಹಿಸುವವರು ಫಲಾನುಭವಿಯ ಖಾತೆ ಸಂಖ್ಯೆ ಮತ್ತು ಶಾಖೆ ಐಎಫ್ಎಸ್​ಸಿ ಕೋಡ್ ನಮೂದಿಸಿದ ನಂತರ ಅವರಿಗೆ ಫಲಾನುಭವಿ ಖಾತೆಯ ಹೆಸರು ಕಾಣಿಸುತ್ತದೆ. ಇದರಿಂದ ತಪ್ಪಾದ ಖಾತೆಗಳಿಗೆ ಹಣ ಜಮೆಯಾಗುವುದನ್ನು ಮತ್ತು ವಂಚನೆಗಳನ್ನು ತಡೆಗಟ್ಟಬಹುದು ಹಾಗೂ ಇದರಿಂದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಗ್ರಾಹಕರ ವಿಶ್ವಾಸ ಹೆಚ್ಚಾಗಲಿದೆ.

ಆರ್‌ಬಿಐನ 26ನೇ ಗವರ್ನರ್ ಆಗಿ ಇತ್ತೀಚೆಗೆ ಸಂಜಯ್ ಮಲ್ಹೋತ್ರಾ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಡಿಸೆಂಬರ್ 10 ರಂದು ಕೊನೆಗೊಂಡಿತ್ತು. ಹೀಗಾಗಿ, ಮಲ್ಹೋತ್ರಾ ಅವರನ್ನು 26ನೇ ಆರ್‌ಬಿಐ ಗವರ್ನರ್ ಆಗಿ ಆಯ್ಕೆ ಮಾಡಲಾಗಿದೆ. ಇವರು ಮುಂದಿನ ಮೂರು ವರ್ಷ ಕಾಲ ಆರ್​ಬಿಐನ ಗವರ್ನರ್ ಆಗಿ ಕೆಲಸ ನಿರ್ವಹಿಸಲಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+