For Quick Alerts
ALLOW NOTIFICATIONS  
For Daily Alerts

ಪಶ್ಚಿಮ ಬಂಗಾಳದ ಕೋ-ಆಪರೇಟಿವ್ ಬ್ಯಾಂಕ್ ಪರವಾನಗಿ ರದ್ದುಗೊಳಿಸಿದ ಆರ್‌ಬಿಐ

|

ಪಶ್ಚಿಮ ಬಂಗಾಳದ ಯುನೈಟೆಡ್ ಕೋ-ಆಪರೇಟಿವ್ ಬ್ಯಾಂಕ್ ಪರವಾನಗಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರದ್ದುಗೊಳಿಸಿದೆ. ಪರಿಣಾಮ ಈ ಬ್ಯಾಂಕ್‌ನ ಖಾತೆದಾರರು ಬ್ಯಾಂಕಿಂಗ್ ವ್ಯವಹಾರ ಮಾಡಲು ಸಾಧ್ಯವಾಗುವುದಿಲ್ಲ. ಅದೇ ಸಮಯದಲ್ಲಿ, ಈ ಬ್ಯಾಂಕಿನ ಖಾತೆದಾರರ ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ.

 

ಸದ್ಯ ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಬಡ್ಡಿದರ ಹೆಚ್ಚಿದೆ? ಲೇಟೆಸ್ಟ್‌ ಮಾಹಿತಿ ಇಲ್ಲಿದೆ

ಇದರ ಜೊತೆಗೆ ಆರ್‌ಬಿಐ ಆದೇಶವಿಲ್ಲದೆ, ಈಗ ಖಾತೆದಾರರ ಹಣ ವಿತ್‌ಡ್ರಾ ಸಾಧ್ಯವಾಗುವುದಿಲ್ಲ. ಬ್ಯಾಂಕ್ ಖಾತೆದಾರರ ಹಣ ಸುರಕ್ಷಿತವಾಗಿದೆ ಎಂದು ಆರ್‌ಬಿಐ ಹೇಳಿದ್ದರೂ ಸಹ, ವಿತ್‌ಡ್ರಾ ಮಾಡಲು ಎಷ್ಟು ದಿನ ಬೇಕಾಗಬಹುದು ಎಂಬುದನ್ನು ತಿಳಿಸಿಲ್ಲ.

ಪಶ್ಚಿಮ ಬಂಗಾಳದ ಕೋ-ಆಪರೇಟಿವ್ ಬ್ಯಾಂಕ್ ಪರವಾನಗಿ ರದ್ದುಗೊಳಿಸಿದ RBI

13 ಮೇ 2021 ರಂದು, ರಿಸರ್ವ್ ಬ್ಯಾಂಕ್ ಪಶ್ಚಿಮ ಬಂಗಾಳದ ಯುನೈಟೆಡ್ ಕೋ-ಆಪರೇಟಿವ್ ಬ್ಯಾಂಕ್ ಪರವಾನಗಿಯನ್ನು ರದ್ದುಗೊಳಿಸಿತು. ಈ ನಿಟ್ಟಿನಲ್ಲಿ ಆರ್‌ಬಿಐ ಅಧಿಸೂಚನೆ ಹೊರಡಿಸಿದೆ. ಆರ್‌ಬಿಐ ತಕ್ಷಣವೇ ಜಾರಿಗೆ ಬರುವಂತೆ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಲು ಮತ್ತು ಬ್ಯಾಂಕಿಂಗ್‌ಗೆ ಸಂಬಂಧಿಸಿದ ಎಲ್ಲಾ ಕಾರ್ಯಾಚರಣೆಗಳನ್ನು ನಿಷೇಧಿಸಿದೆ. ಜೊತೆಗೆ ಬ್ಯಾಂಕಿನ ಖಾತೆದಾರರಿಗೆ ತಮ್ಮ ಠೇವಣಿ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದೆ.

ಯುನೈಟೆಡ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಪರವಾನಗಿಯನ್ನು ರದ್ದುಗೊಳಿಸುವಾಗ, ವ್ಯವಹಾರವನ್ನು ಮುಂದುವರಿಸಲು ಬ್ಯಾಂಕಿಗೆ ಸಾಕಷ್ಟು ಬಂಡವಾಳವಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಖಾತೆದಾರರ ಹಣದ ಸುರಕ್ಷತೆಯಿಂದಾಗಿ ಬ್ಯಾಂಕಿನ ವ್ಯವಹಾರವನ್ನು ಮುಚ್ಚಬೇಕಾಗುತ್ತದೆ. 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 56 ರ ಸೆಕ್ಷನ್ 11 (1) ಮತ್ತು ಸೆಕ್ಷನ್ 22 (3) (ಡಿ) ನಿಬಂಧನೆಗಳ ಅಡಿಯಲ್ಲಿ ಆರ್‌ಬಿಐ ಈ ಕ್ರಮ ಕೈಗೊಂಡಿದೆ.

English summary

RBI Cancels Licence Of West Bengal's United Co-operative Bank

The RBI on Thursday said it has cancelled the licence of the United Co-operative Bank Ltd, Bagnan in West Bengal as the bank does not have adequate capital and earning prospects.
Story first published: Friday, May 14, 2021, 22:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X