ಮೋದಿ ಸರ್ಕಾರದಿಂದ 200 ರೂ. ನೋಟು ರದ್ದು? ಆರ್‌ಬಿಐ ಸ್ಪಷ್ಟನೆ

ಮೋದಿ ಸರ್ಕಾರ ಭಾರತದಲ್ಲಿ 2000 ರೂ. ನೋಟುಗಳನ್ನು ರದ್ದು ಮಾಡಿರುವುದು ಗೊತ್ತೇ ಇದೆ. ಇದೀಗ, 200 ರೂ. ನೋಟು ಸಹ ವಾಪಸ್ ಪಡೆಯುವ ಬಗ್ಗೆ ಸುದ್ದಿ ಹಬ್ಬಿದೆ. ಹೌದು, ದೇಶದಲ್ಲಿ 2000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಂತೆ, 200 ರೂ. ನೋಟುಗಳನ್ನು ಸರ್ಕಾರ ರದ್ದು ಮಾಡಲಿದೆಯೇ? ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸ್ಪಷ್ಟನೆ ನೀಡಿದೆ. ಹಾಗಿದ್ರೆ, ಮೋದಿ ಸರ್ಕಾರ 200 ರೂ. ನೋಟನ್ನು ರದ್ದುಗೊಳಿಸುತ್ತಾ? ಈ ಬಗ್ಗೆ ಆರ್‌ಬಿಐ ಹೇಳಿದ್ದೇನು? ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ ಬನ್ನಿ.

ಹೌದು, ಭಾರತದಲ್ಲಿ ಅತಿ ಹೆಚ್ಚು ಚಲಾವಣೆ ಆಗುವ ನೋಟುಗಳೆಂದರೆ 500 ರೂಪಾಯಿ ಹಾಗೂ 200 ರೂಪಾಯಿಗಳು ಅದರಲ್ಲೂ ಬಹುತೇಕ ಎಲ್ಲರ ಜೇಬಿನಲ್ಲಿ 200 ರೂಪಾಯಿ ನೋಟು ಅಂತೂ ಇದ್ದೇ ಇರುತ್ತದೆ. ಆದರೆ ಮೋದಿ ಸರ್ಕಾರ ಈ ಪ್ರಸ್ತುತ ನೋಟನ್ನು ರದ್ದುಗೊಳಿಸಲಿದೆಯೇ? ಎಂಬ ಮಾಹಿತಿ ಕೆಳಗಿನಂತೆ ಇದೆ ಮುಂದೆ ಓದಿ..

 200 ರೂ. ನೋಟು ರದ್ದು? ಆರ್‌ಬಿಐ ಸ್ಪಷ್ಟನೆ

ಭಾರತೀಯ ರಿಸರ್ವ್ ಬ್ಯಾಂಕ್ ಇದ್ದಕ್ಕಿದ್ದಂತೆ ದೊಡ್ಡ ಅಪ್‌ಡೇಟ್‌ಅನ್ನು ನೀಡಿದೆ. ಈ ಬಗ್ಗೆ ಅಧಿಸೂಚನೆ ಅನ್ನು ನೀಡಿದೆ.

ಅದರಲ್ಲಿ ಅವರು ಈ ರೀತಿಯ ಮಾಹಿತಿಯನ್ನು ತಿಳಿಸಿದ್ದಾರೆ ಅದು ಯಾವುದು ಎಂದರೆ 2000 ರೂಪಾಯಿ ನೋಟುಗಳನ್ನು ವಾಪಾಸ್‌ ಪಡೆದುಕೊಂಡ ನಂತರ, ದೇಶದಲ್ಲಿ 200 ಮತ್ತು 500 ರೂಪಾಯಿ ನಕಲಿ ನೋಟುಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಆರ್‌ಬಿಐ ಹೇಳಿದೆ. ವಹಿವಾಟಿನ ಸಮಯದಲ್ಲಿ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದೆ.

ನಿಜವಾದ ನೋಟನ್ನು ಹೀಗೆ ಗುರುತಿಸುವುದು?

ನೋಟಿನ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಬರೆಯಲಾದ 200 ರೂ., ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಸ್ಪಷ್ಟ ಚಿತ್ರ, ಸೂಕ್ಷ್ಮ ಅಕ್ಷರಗಳಲ್ಲಿ RBI, ಭಾರತ್, ಇಂಡಿಯಾ ಮತ್ತು 200 ಮತ್ತು ಬಲಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಇರಬೇಕು.

ನಕಲಿ ನೋಟು ನಡೆಯಲು RBI ಸೂಚನೆಯೇನು?

ನಕಲಿ ನೋಟುಗಳ ಪತ್ತೆ ಹಚ್ಚಿ ಅದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಒತ್ತಾಯಿಸಿದೆ. ವಹಿವಾಟಿನ ಸಮಯದಲ್ಲಿ ನೋಟುಗಳನ್ನು ಸರಿಯಾಗಿ ಪರಿಶೀಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.

ಇನ್ನೂ ಯಾರಾದರೂ ನಕಲಿ ನೋಟು ಪಡೆದರೆ, ತಕ್ಷಣವೇ ಸ್ಥಳೀಯ ಆಡಳಿತ ಅಥವಾ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಲು ಸೂಚಿಸಲಾಗಿದೆ. ಅದರೊಂದಿಗೆ 200 ರೂಪಾಯಿ ನೋಟನ್ನು ವಾಪಾಸ್‌ ಪಡೆದುಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದೂ ಆರ್‌ಬಿಐ ಮಾಹಿತಿ ತಿಳಿಸಿದೆ.

500 ನೋಟು ಅಸಲಿಯೋ, ನಕಲಿಯೋ ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಹಲವು ಕ್ರಮ ಕೈಗೊಂಡರು ನಕಲಿ ನೋಟುಗಳ ಹಾವಳಿ ಪ್ರಕರಣ ನಡೆಯುತ್ತಲೇ ಇದೆ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ 500 ರೂಪಾಯಿ ನೋಟುಗಳ ಬಗ್ಗೆ ಎಚ್ಚರಿಕೆ ನೀಡಿದೆ.500 ರೂ ನೋಟು ಅಸಲಿಯೋ, ನಕಲಿಯೋ ಅನ್ನೋದು ಗುರುತಿಸಲು ಕೆಲವೊಂದು ಮಾರ್ಗಸೂಚಿಗಳು ಈಕೆಳಗಿನಂತೆ ಇವೆ.

ಒರಿಜಿನಲ್ 500 ರೂಪಾಯಿ ನೋಟು 66 ಮಿಮೀ x 159ಮಿಮೀ ಅಳತೆಯನ್ನು ಹೊಂದಿರುತ್ತದೆ.ನೋಟಿನ ಭದ್ರತಾ ದಾರವನ್ನು ನಾವು ಓರೆಯಾಗಿಸಿದಾಗ ಅದು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಚೇಂಚ್ ಆಗುತ್ತದೆ.
ದೇವನಾಗರಿ ಲಿಪಿಯಲ್ಲಿ '500' ಅಂಕಿಯನ್ನು ಬರೆಯಲಾಗಿದೆ. ವಾಟರ್‌ಮಾರ್ಕ್‌ನಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರ ಮತ್ತು '500 ಸಂಖ್ಯೆ ಇರುತ್ತದೆ.
ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರ ಕಾಣಿಸುತ್ತದೆ. ಅದರಲ್ಲಿ'ಭಾರತ' ಮತ್ತು 'RBI' ಅನ್ನು ಸೂಕ್ಷ್ಮ ಅಕ್ಷರಗಳಲ್ಲಿ ಮುದ್ರಿಸಲಾಗಿದೆ.ಮುದ್ರಣದ ವರ್ಷ ಎಡಭಾಗದಲ್ಲಿದೆ ಮತ್ತು ಅಶೋಕ ಸ್ತಂಭದ ಲಾಂಛನ ಬಲಭಾಗದಲ್ಲಿದೆ ಇರುತ್ತದೆ.

ನಕಲಿ ನೋಟುಗಳ ಬಗ್ಗೆ ಇರಲಿ ಎಚ್ಚರ

ನಕಲಿ ನೋಟು ಹಾವಳಿಯನ್ನು ತಪ್ಪಿಸಲು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಬಹುಮುಖ್ಯ. ಈಗಲೇ ನಕಲಿ ನೋಟುಗಳನ್ನು ಗುರುತಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳನ್ನು ಒದಗಿಸುತ್ತದೆ.ಇದನ್ನು ಅನುಸರಿಸುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಸಹಾಯವಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+