ಕೆಲವು ಕಳವಳಗಳನ್ನು ಪರಿಹರಿಸುವ ಸಲುವಾಗಿ ಕಾರ್ಡ್ ಟೋಕನೈಜೇಶನ್ ಗಡುವನ್ನು ಮೂರು ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಪ್ರಕಟಿಸಿದೆ. ಅಂದರೆ ಟೋಕನೈಸೇಶನ್ ಗಡುವನ್ನು ಸೆಪ್ಟೆಂಬರ್ 30, 2022 ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಟೋಕನೈಸೇಶನ್ ಗಡುವು ಜೂನ್ 30 ಆಗಿತ್ತು. ಆದರೆ ಇದಕ್ಕೆ ಭಾರೀ ವಿರೋಧಗಳು ವ್ಯಕ್ತವಾಗಿದೆ. ಆದರೆ ಈ ಹೊಸ ವಿಧಾನವು ನಿಮ್ಮ ಆನ್‌ಲೈನ್ ಶಾಪಿಂಗ್ ವ್ಯವಸ್ಥೆಯನ್ನು ಸುಲಭ ಮಾಡುವುದು ಮಾತ್ರವಲ್ಲದೆ ನಿಮ್ಮ ಗುಪ್ತ ಮಾಹಿತಿಯನ್ನು ಕೂಡಾ ಸುರಕ್ಷಿತವಾಗಿರಿಸುತ್ತದೆ.
ಟೋಕನೈಜೇಶನ್ ಎಂಬುವುದು ಹೊಸ ಪಾವತಿ ವಿಧಾನವಾಗಿದೆ. ಕಾರ್ಡ್ ಮಾಹಿತಿಯನ್ನು ಟೋಕನ್‌ನೊಂದಿಗೆ ವಿನಿಮಯ ಮಾಡಿಕೊಳ್ಳುವ ತಂತ್ರವೇ ಟೋಕನೈಜೇಶನ್ ಆಗಿದೆ. ಹಾಗೆಯೇ ಈ ವಿಧಾನವು ಗ್ರಾಹಕರ ಯಾವುದೇ ವೈಯಕ್ತಿಕ ಮಾಹಿತಿ ಸೋರಿಕೆ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ನೀಡುತ್ತದೆ.

ಆರ್‌ಬಿಐನ ಈ ಟೋಕನೈಜೇಶನ್ ನೀತಿಯು ಈ ವಿಧಾನವನ್ನು ಹೇಗೆ ಕಾರ್ಯಗತಗೊಳಿಸುವುದು ಎಂಬುವುದನ್ನು ವಿವರಿಸಿದೆ. ಇನ್ನು ಮುಂದೆ ಸಂಪರ್ಕರಹಿತ ಬ್ಯಾಂಕಿಂಗ್‌ಗೆ ಯಾವುದೇ ಸಿವಿವಿ (ಕಾರ್ಡ್ ವೆರಿಫಿಕೇಶನ್ ವಾಲ್ಯೂ) ಬೇಕಾಗಿಲ್ಲ. ಇದು ಸಂಪೂರ್ಣವಾಗಿ ನೆಟ್‌ವರ್ಕ್ ಅನ್ನು ಸುರಕ್ಷಿತಗೊಳಿಸಲಿದೆ.
ಟೋಕನೈಸೇಶನ್ ಪ್ರಯೋಜನಗಳು
ಈ ಟೋಕನೈಜೇಶನ್ ಡೇಟಾ ಕಳ್ಳತನವನ್ನು ಸಂಪೂರ್ಣವಾಗಿ ತಡೆಗಟ್ಟಲಾರದು, ಆದರೆ ಈ ಡೇಟಾ ಕಳ್ಳತನದ ಸಾಧ್ಯತೆಯನ್ನು ಹೆಚ್ಚು ಕಡಿಮೆ ಮಾಡುತ್ತದೆ. ಆಪ್‌ಗಳ ಮೂಲಕ ನೀವು ಶಾಪಿಂಗ್ ಮಾಡುವುದನ್ನು ಈ ಹೊಸ ವಿಧಾನ ಟೋಕನೈಜೇಶನ್ ನೀವು ಸುಲಭವಾಗಿ ಶಾಪಿಂಗ್ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ಆನ್‌ಲೈನ್ ಶಾಪಿಂಗ್ ಅನ್ನು ಸುರಕ್ಷಿತಗೊಳಿಸುತ್ತದೆ. ಟೋಕನೈಜ್ ಮಾಡಿದ ಕಾರ್ಡ್‌ಗಳನ್ನು ನಿರ್ವಹಣೆ ಮಾಡಲು ಬ್ಯಾಂಕ್‌ಗಳು ಪ್ರತ್ಯೇಕ ಇಂಟರ್ಫೇಸ್ ಅನ್ನು (ಅದರ ವೆಬ್‌ಸೈಟ್‌ನಲ್ಲಿ) ನೀಡುತ್ತದೆ. ಇನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ದಾರರು ಯಾವುದೇ ಸಮಯದಲ್ಲಿ ತಮ್ಮ ಟೋಕನ್ ಆಯ್ಕೆಯನ್ನು ರದ್ದು ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.
ಟೋಕನೈಜೇಶನ್ ಸಂಪೂರ್ಣವಾಗಿ ಉಚಿತವಾಗಿ ಮಾಡಲಾಗುತ್ತದೆ. ಜನರು ತಮ್ಮ ಎಷ್ಟೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನುಟೋಕನೈಜೇಶನ್ ಮಾಡಬಹುದು. ಆದರೆ ಡೊಮೆಸ್ಟಿಕ್ ಕಾರ್ಡ್‌ಗಳಿಗೆ ಮಾತ್ರ ಕೆಲವು ನಿಯಮಗಳು ಇದೆ. ಓವರ್‌ಸೀಸ್ ಕಾರ್ಡ್‌ಗಳಿಗೆ ಟೋಕನೈಜೇಶನ್ ವಿಧಾನ ಅನ್ವಯ ಆಗುವುದಿಲ್ಲ. ನೀವು ಟೋಕನೈಜೇಶನ್ ಮಾಡಲು ಬಯಸಿದರೆ, ಮೊದಲು ತಮ್ಮ ಕಾರ್ಡ್ ಮಾಹಿತಿಯನ್ನು ನೀಡಬೇಕಾಗುತ್ತದೆ. ನೀವು ವೆಬ್‌ಸೈಟ್ ಮೂಲಕ ಯಾವುದೇ ಶಾಪಿಂಗ್ ಮಾಡುವ ಸಂದರ್ಭದಲ್ಲಿ ನೀವು ಟೋಕನೈಜೇಶನ್ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಎರಡೆರಡು ಬಾರಿ ಪಾವತಿ ಆಗುವ ಸಂದರ್ಭದಲ್ಲಿ ನೀವು ಮಾಹಿತಿಯನ್ನು ಪಡೆದುಕೊಳ್ಳಲು ಈ ಟೋಕನ್‌ಗಳು ಸಹಾಯಕವಾಗಿದೆ.


Click it and Unblock the Notifications