ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬುಧವಾರ ರೆಪೋ ದರವನ್ನು 35 ಮೂಲಾಂಕ ಏರಿಕೆ ಮಾಡಿದೆ. ಪ್ರಸ್ತುತ ರೆಪೋ ದರ ಶೇಕಡ 6.25ಕ್ಕೆ ತಲುಪಿದೆ. ಆರ್‌ಬಿಐ ರೆಪೋ ದರ ಪರಿಷ್ಕರಣೆ ಘೋಷಣೆ ಮಾಡುವ ಸಂದರ್ಭದಲ್ಲೇ ಮಾರುಕಟ್ಟೆಯ ಟ್ರೇಡಿಂಗ್ ಅವಧಿಯನ್ನು ವಿಸ್ತರಿಸಿದೆ.
ಈ ಹಿಂದೆ ಏಪ್ರಿಲ್ 7, 2020ರಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ದೇಶದಲ್ಲಿ ಅಧಿಕವಾದ ಸಂದರ್ಭದಲ್ಲಿ ಮಾರುಕಟ್ಟೆ ಅವಧಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಾವಣೆ ಮಾಡಿತ್ತು. ಆದರೆ ಬಳಿಕ ನವೆಂಬರ್ 9, 2020ರಲ್ಲಿ ಕೋವಿಡ್ ನಿರ್ಬಂಧಗಳನ್ನು ಸರ್ಕಾರ ಹಿಂಪಡೆದ ಬಳಿಕ ಮಾರುಕಟ್ಟೆ ಅವಧಿಯನ್ನು ಈ ಹಿಂದಿನಂತೆ ನಿಗದಿಪಡಿಸಲು ಆರಂಭಿಸಲಾಯಿತು.
ಅದಾದ ಬಳಿಕ ಏಪ್ರಿಲ್ 18, 202ರಲ್ಲಿ ಮಾರುಕಟ್ಟೆ ಅವಧಿಯನ್ನು ಮತ್ತೆ ಈ ಹಿಂದಿನಂತೆ ಪರಿವರ್ತನೆ ಮಾಡಲಾಯಿತು. ಕೋವಿಡ್ ಪೂರ್ವದ ಅವಧಿಯಲ್ಲೇ ಮಾರುಕಟ್ಟೆ ಆರಂಭಿಕ ವಹಿವಾಟು ಶುರುವಾಗಿತ್ತು. ಈಗ ಆರ್‌ಬಿಐ ಮತ್ತೆ ವಹಿವಾಟು ಅವಧಿಯಲ್ಲಿ ಬದಲಾವಣೆಯನ್ನು ತಂದಿದೆ. ಡಿಸೆಂಬರ್ 12, 2022ರಿಂದ ವಹಿವಾಟು ಅವಧಿ ವಿಸ್ತರಣೆಯಾಗಲಿದೆ. ನೂತನ ವಹಿವಾಟು ಅವಧಿ ಸಂಪೂರ್ಣ ಪಟ್ಟಿ ಇಲ್ಲಿದೆ ಮುಂದೆ ಓದಿ...

ಮಾರುಕಟ್ಟೆ, ಈ ಹಿಂದಿನ ಅವಧಿ, ನೂತನ ಅವಧಿ
* ಕಾಲ್/ನೋಟಿಸ್/ಟರ್ಮ್ ಮನಿ (Call/notice/term money), ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:30, ವಿಸ್ತರಿತ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 5:00
* ಮಾರುಕಟ್ಟೆ ರೆಪೋ (Market repo in government securities), ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 2:30, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 2:30
* ಟ್ರೀ-ಪಾರ್ಟಿ ರೆಪೋ (Tri-party repo in government securities), ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:00, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 3:00
* ವಾಣಿಜ್ಯ ದಾಖಲೆ, ಡೆಪಾಸಿಟ್ ಪ್ರಮಾಣಪತ್ರ (Commercial paper and Certificates of Deposit), ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:30, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 5:00
* ಕಾರ್ಪೋರೇಟ್ ಬಾಂಡ್ಸ್ ರೆಪೋ (Repo in Corporate Bonds), ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:30, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 5:00
* ಸರ್ಕಾರಿ ಸೆಕ್ಯೂರಿಟಿಗಳು (Government Securities (Central Government Securities, State Development Loans and Treasury Bills), ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:30, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 3:30
* ವಿದೇಶಿ ಕರೆನ್ಸಿ (Foreign Currency (FCY)/Indian Rupee (INR) Trades including Forex Derivatives), ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:30, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 3:30
* ರೂಪಾಯಿ ಬಡ್ಡಿದರ (Rupee Interest Rate Derivatives), ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:30, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 5:00
ಇಂದಿನ ಷೇರುಪೇಟೆ ವಹಿವಾಟು
ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 44.54 ಅಂಕ ಅಥವಾ ಶೇಕಡ 0.07ರಷ್ಟು ಇಳಿಕೆಯಾಗಿ 62366.14ಕ್ಕೆ ತಲುಪಿದೆ. ಇನ್ನು ನಿಫ್ಟಿ 12.70 ಅಂಕ ಅಥವಾ ಶೇಕಡ 0.07ರಷ್ಟು ಕುಸಿದು 18547.80ಕ್ಕೆ ವಹಿವಾಟು ಆರಂಭ ಮಾಡಿದೆ. ಇನ್ನು 1390 ಷೇರುಗಳು ಏರಿಕೆಯಾಗಿದ್ದರೆ, 631 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 123 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು.


Click it and Unblock the Notifications