ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ (ಸೆಪ್ಟೆಂಬರ್ 6) ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2023 ರ ವೇಳೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ಹೊಸ ಐದು ಪಾವತಿ ವಿಧಾನಗಳನ್ನು ಘೋಷಣೆ ಮಾಡಿದ್ದಾರೆ.
ಕ್ರೆಡಿಟ್ ಲೈನ್ ಯುಪಿಐ, ಯುಪಿಐ ಲೈಟ್ ಎಕ್ಸ್, ಟ್ಯಾಪ್ & ಪೇ, ಹೆಲೋ ಯುಪಿಐ, ಬಿಲ್‌ಪೇ ಕನೆಕ್ಟ್ ಎಂಬ ಐದು ಹೊಸ ಪಾವತಿ ವಿಧಾನಗಳನ್ನು ಆರಂಭ ಮಾಡಿದ್ದಾರೆ. ಈ ನೂತನ ಪಾವತಿ ವಿಧಾನವು ಆಕರ್ಷಕವಾಗಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆಗೆ ಒಂದು ವಿನೂತನ ವಿಧಾನಗಳು ಇದಾಗಿದೆ.

ಸ್ವದೇಶಿ ಎನ್‌ಪಿಸಿಐ ರುಪೇ ಗೇಟ್‌ವೇ ಮೂಲಕ ಭಾರತದಲ್ಲಿ ರಿಟೇಲ್ ಪಾವತಿಗಳು ಮತ್ತು ಇತರೆ ಪಾವತಿಗಳನ್ನು ಒಂದು ಪ್ರಮುಖ ಸಂಸ್ಥೆಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಒಂದು ದೃಢವಾದ ಪಾವತಿಗಳನ್ನು ವ್ಯವಸ್ಥೆಯನ್ನು ರಚಿಸಲು ಒಂದು ಉಪಕ್ರಮವಾಗಿದೆ.
ಯುಪಿಐನಲ್ಲಿ ಕ್ರೆಡಿಟ್ ಲೈನ್
ಈ ಹೊಸ ಪಾವತಿ ವ್ಯವಸ್ಥೆಯು ಯುಪಿಐ ಮೂಲಕ ಬ್ಯಾಂಕ್‌ಗಳಿಂದ ಪೂರ್ವ ಮಂಜೂರಾದ ಕ್ರೆಡಿಟ್ ಅನ್ನು ಸಕ್ರಿಯಗೊಳಿಸುತ್ತದೆ ಮತ್ತು ಕ್ರೆಡಿಟ್ ಅನ್ನು ಜನರು ಯುಪಿಐ ಮೂಲಕವೇ ಪಡೆಯಲು ಸಹಾಯಕವಾಗುತ್ತದೆ. ಕ್ರೆಡಿಟ್ ಪಡೆಯುವ ಪ್ರಕ್ರಿಯೆಯು ತ್ವರಿತಗೊಳ್ಳುತ್ತದೆ, ಆರ್ಥಿಕ ಬೆಳವಣಿಗೆ ಮತ್ತು ಪ್ರಗತಿಯನ್ನು ಹೆಚ್ಚಿಸುತ್ತದೆ.
ಯುಪಿಐ ಲೈಟ್ ಎಕ್ಸ್
ಈ ಹೊಸ ಫೀಚರ್ ಮೂಲಕ, ಬಳಕೆದಾರರು ಈಗ ಆಫ್‌ಲೈನ್‌ನಲ್ಲಿ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಇದರಿಂದಾಗಿ ನಾವು ಯಾವುದೇ ಇಂಟರ್‌ನೆಟ್ ಇಲ್ಲದ ಪ್ರದೇಶದಲ್ಲಿದ್ದರೂ, ದೂರದ ಪ್ರದೇಶದಲ್ಲಿದ್ದರೂ ಕೂಡಾ ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತದೆ.
ಯುಪಿಐ ಟ್ಯಾಪ್ & ಪೇ
ಕ್ಯೂಆರ್ ಕೋಡ್ ಮತ್ತು ನಿಯರ್ ಫೀಲ್ಡ್ ಕಮ್ಯುನಿಕೇಷನ್ ತಂತ್ರಜ್ಞಾನದ ಅಳವಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಆರ್‌ಬಿಐ ಗವರ್ನರ್ ಯುಪಿಐ ಟ್ಯಾಪ್ & ಪೇ ಅನ್ನು ಸಹ ಪರಿಚಯಿಸಿದ್ದಾರೆ. ಸಾಂಪ್ರದಾಯಿಕ ಸ್ಕ್ಯಾನ್ ಮತ್ತು ಪಾವತಿ ವಿಧಾನದ ಜೊತೆಗೆ, ಬಳಕೆದಾರರು ತಮ್ಮ ಪಾವತಿಗಳನ್ನು ಪೂರ್ಣಗೊಳಿಸಲು ವ್ಯಾಪಾರಿ ಸ್ಥಳಗಳಲ್ಲಿ ಎನ್‌ಎಫ್‌ಸಿ ಸಕ್ರಿಯಗೊಳಿಸಿದ ಕ್ಯೂಆರ್ ಕೋಡ್‌ಗಳನ್ನು ಸರಳವಾಗಿ ಟ್ಯಾಪ್ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ.
ಹೆಲೋ! ಯುಪಿಐ- ಯುಪಿಐನಲ್ಲಿ ಕನ್‌ವರ್ಸೇಷನಲ್ ಪೇಮೆಂಟ್
ನೀವು ಸಂಭಾಷಣೆಯ ಮೂಲಕ ಯುಪಿಐ ಪಾವತಿಗಳನ್ನು ಪರಿಚಯ ಮಾಡಲಾಗಿದೆ. ಇದು ನಿಮಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಯುಪಿಐ ಅಪ್ಲಿಕೇಶನ್‌ಗಳು, ಟೆಲಿಕಾಂ ಕರೆಗಳು ಮತ್ತು ಐಒಟಿ ಸಾಧನಗಳ ಮೂಲಕ ಧ್ವನಿ-ಸಕ್ರಿಯಗೊಳಿಸಿದ ಯುಪಿಐ ಪಾವತಿಗಳನ್ನು ಮಾಡಲು ಸಹಾಯಕವಾಗಿದೆ. ಶೀಘ್ರದಲ್ಲೇ ಹಲವಾರು ಇತರ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುತ್ತದೆ. ಬಳಕೆದಾರರು ಹಣವನ್ನು ವರ್ಗಾಯಿಸಲು ಧ್ವನಿ ಆಜ್ಞೆಗಳನ್ನು ನೀಡಬಹುದು. ವಹಿವಾಟನ್ನು ಪೂರ್ಣಗೊಳಿಸಲು ಯುಪಿಐ ಪಿನ್ ಅನ್ನು ನಮೂದಿಸಬಹುದು.
ಬಿಲ್‌ಪೇ ಕನೆಕ್ಟ್ - ಕನ್‌ವರ್ಸೇಷನಲ್ ಬಿಲ್ ಪೇಮೆಂಟ್
ಬಿಲ್‌ಪೇ ಕನೆಕ್ಟ್‌ನೊಂದಿಗೆ, ಭಾರತ್ ಬಿಲ್‌ಪೇ ಭಾರತದಾದ್ಯಂತ ಬಿಲ್ ಪಾವತಿಗಳಿಗಾಗಿ ರಾಷ್ಟ್ರೀಕೃತ ಸಂಖ್ಯೆಯನ್ನು ಪರಿಚಯಿಸುತ್ತದೆ. ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಸರಳವಾಗಿ 'ಹಾಯ್' ಅನ್ನು ಕಳುಹಿಸುವ ಮೂಲಕ ಗ್ರಾಹಕರು ಈಗ ಅನುಕೂಲಕರವಾಗಿ ತಮ್ಮ ಬಿಲ್‌ಗಳನ್ನು ಪಡೆಯಬಹುದು, ಮತ್ತು ಪಾವತಿಸಬಹುದು. ಇದರೊಂದಿಗೆ, ಸ್ಮಾರ್ಟ್‌ಫೋನ್‌ಗಳು ಅಥವಾ ಮೊಬೈಲ್ ಡೇಟಾ ಇಲ್ಲದೆ ಗ್ರಾಹಕರು ಮಿಸ್ಡ್ ಕಾಲ್ ನೀಡುವ ಮೂಲಕ ಬಿಲ್‌ಗಳನ್ನು ಪಾವತಿಸಲು ಸಾಧ್ಯವಾಗುತ್ತದೆ.


Click it and Unblock the Notifications