For Quick Alerts
ALLOW NOTIFICATIONS  
For Daily Alerts

ಕೋವಿಡ್-19 ನಿಭಾಯಿಸಲು ತುರ್ತು ಆರೋಗ್ಯ ಸೇವೆಗಳಿಗೆ 50,000 ಕೋಟಿ : ಆರ್‌ಬಿಐ

|

ಕೋವಿಡ್ 19 ಪರಿಸ್ಥಿತಿಗೆ ತಕ್ಕಂತೆ ರಿಸರ್ವ್ ಬ್ಯಾಂಕ್ ತನ್ನ ಸಂಪನ್ಮೂಲ ನಿಯೋಜಿಸಿದ್ದು, ಈ ಸಂಕಷ್ಟವನ್ನು ಭಾರತ ಸಮರ್ಥವಾಗಿ ಎದುರಿಸುವ ನಂಬಿಕೆ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ತುರ್ತು ವೈದ್ಯಕೀಯ ಪರಿಸ್ಥಿತಿ ನಿಭಾಯಿಸಲು, ಲಸಿಕೆ ಉತ್ಪಾದನೆ, ಇತ್ಯಾದಿಗೆ ಬಳಕೆ ಮಾಡಲು 50,000 ಕೋಟಿ ರೂ. ನೀಡಲು ಆರ್‌ಬಿಐ ಮುಂದಾಗಿದ್ದು, ಮಾರ್ಚ್ 31, 2022 ತನಕ ಕೋವಿಡ್ -19 ಸಂಬಂಧಿತ ಸಾಲ ನೀಡಲಿದೆ.

ತುರ್ತು ಆರೋಗ್ಯ ಸೇವೆಗಳಿಗೆ 50,000 ಕೋಟಿ : ಆರ್‌ಬಿಐ

ಆರೋಗ್ಯ ಭದ್ರತೆಗಾಗಿ 50,000 ಕೋಟಿ ರೂ.ಗಳ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಮೇ 20 ರಂದು ಆರ್‌ಬಿಐ 35,000 ಕೋಟಿ ಮೌಲ್ಯದ ಸೆಕ್ಯೂರಿಟಿಗಳ ಖರೀದಿಯ ಎರಡನೇ ಹಂತವನ್ನು ಪ್ರಾರಂಭಿಸಲಿದೆ.

ಅಸಂಘಟಿತ ವಲಯದ ಉಪಯೋಗಕ್ಕಾಗಿ 3 ವರ್ಷಗಳ ಅವಧಿಗೆ 10,000 ಕೋಟಿ ರೂ. ಸಣ್ಣ ಮಧ್ಯಮ ಬ್ಯಾಂಕ್ ಗಳಿಗೆ ನೀಡಲಾಗುತ್ತಿದ್ದು, 10 ಲಕ್ಷ ರೂ. ತನಕ ಸಾಲ ಪಡೆಯಬಹುದು. 10000 ಕೋಟಿ ಟಿಎಲ್‌ಆರ್‌ಒ ಸಹ ಆರ್‌ಬಿಐ ಎಸ್‌ಎಫ್‌ಬಿ ಅಡಿಯಲ್ಲಿ ತರಲಾಗುವುದು. ಇವುಗಳಿಗಾಗಿ ಸಾಲಗಾರನಿಗೆ 10 ಲಕ್ಷ ಮಿತಿ ಇರುತ್ತದೆ. ಈ ಸೌಲಭ್ಯವು 31 ಮಾರ್ಚ್ 2022 ರವರೆಗೆ ಲಭ್ಯವಿರುತ್ತದೆ.

ಜಿ-ಎಸ್‌ಎಪಿ 1.0 ರ ಅಡಿಯಲ್ಲಿ ಜಿ-ಎಸ್‌ಇಸಿ ಎರಡನೇ ಖರೀದಿ 35,000 ಕೋಟಿ ರೂಪಾಯಿ ಮೇ 20 ರಂದು ಇರಲಿದೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.

English summary

RBI Governor Shaktikanta Das Speech Highlights in Kannada

Covid-19 RBI Governor Shaktikanta Das Speech Highlights and Key decisions takem. Read on
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X