ಭಾರತೀಯ ರಿಸರ್ವ್ ಬ್ಯಾಂಕ್, ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಭಾರೀ ದಂಡವನ್ನು ವಿಧಿಸಿದೆ. ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಸಿಟಿ ಯೂನಿಯನ್ ಬ್ಯಾಂಕ್ ಗಳಿಗೆ ನಿಯಮ ಪಾಲಿಸದ ಕಾರಣ ಕೋಟ್ಯಂತರ ರೂಪಾಯಿ ದಂಡ ವಿಧಿಸಲಾಗಿದೆ.
ಮೂರೂ ಬ್ಯಾಂಕ್ ಗಳಿಗೆ ಆರ್ ಬಿಐ ಸುಮಾರು 3 ಕೋಟಿ ರೂ. ಠೇವಣಿದಾರರ ಶಿಕ್ಷಣ ಜಾಗೃತಿ ನಿಧಿ ಯೋಜನೆ 2014ಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಮೂರು ಬ್ಯಾಂಕುಗಳಿಗೆ ದಂಡ ವಿಧಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಠೇವಣಿದಾರರ ಶಿಕ್ಷಣ ಜಾಗೃತಿ ನಿಧಿ ಯೋಜನೆ 2014 ರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎಸ್‌ಬಿಐ, ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್ ಮತ್ತು ಕೆನರಾ ಬ್ಯಾಂಕ್‌ಗಳಿಗೆ ದಂಡ ವಿಧಿಸಲಾಗಿದೆ, ಆದರೆ ದಂಡದ ಮೊತ್ತವು ಬೇರೆ ಬೇರೆ ಆಗಿವೆ.
ಆಸ್ತಿ ವರ್ಗೀಕರಣ, ಆದಾಯ ಪ್ರಮಾಣಪತ್ರ ಮತ್ತು ಸಾಲ, ನಿಷ್ಕ್ರಿಯ ಸಾಲಗಳು (NPA) ಮತ್ತು KYC ಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ SBI ಗೆ RBI 2 ಕೋಟಿ ದಂಡ ವಿಧಿಸಿದೆ. ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್‌ಗೆ 66 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಇದಲ್ಲದೇ ಆರ್ ಬಿಐನ ಕೆಲವು ನಿಯಮಗಳ ಕಾರಣ ಕೆನರಾ ಬ್ಯಾಂಕ್ ಕೂಡ ಅವ್ಯವಹಾರಕ್ಕೆ ದಂಡ ವಿಧಿಸಿದ್ದು, ಇದರ ಮೊತ್ತ 32.30 ಲಕ್ಷ ರೂ.
ಈ ಮೂರು ಬ್ಯಾಂಕುಗಳ ಹೊರತಾಗಿ, ಒಡಿಶಾದಲ್ಲಿರುವ ರೂರ್ಕೆಲಾದ ಓಷನ್ ಕ್ಯಾಪಿಟಲ್ ಮಾರ್ಕೆಟ್ ಲಿಮಿಟೆಡ್‌ಗೆ ಭಾರಿ ದಂಡವನ್ನು ವಿಧಿಸಲಾಗಿದೆ. ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ (ಎನ್‌ಬಿಎಫ್‌ಸಿ) ಸಂಬಂಧಿಸಿದ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ಆರ್‌ಬಿಐ ಈ ಕಂಪನಿಗೆ 16 ಲಕ್ಷ ರೂಪಾಯಿ ದಂಡ ವಿಧಿಸಿದೆ.

RBI ನ ಈ ಕ್ರಮವು ಗ್ರಾಹಕರ ಮೇಲೆ ಯಾವ ಪರಿಣಾಮ ಬೀರಬಹುದು? ಬ್ಯಾಂಕ್‌ನೊಂದಿಗೆ ವಹಿವಾಟು ನಡೆಸುವಲ್ಲಿ ಗ್ರಾಹಕರು ಸಮಸ್ಯೆಗಳನ್ನು ಎದುರಿಸಬಹುದೇ? ಎಂಬ ಪ್ರಶ್ನೆ ಸಾಮಾನ್ಯವಾಗಿ ಜನರಲ್ಲಿ ಕಾಡುತ್ತಲೇ ಇರುತ್ತದೆ. ಆ ರೀತಿ ಏನು ಆಗುವುದಿಲ್ಲ.
ನಿಯಮಗಳನ್ನು ಪಾಲಿಸದ ಬ್ಯಾಂಕ್‌ಗಳಿಗೆ ವಿಧಿಸುವ ದಂಡವು ಗ್ರಾಹಕರ ಮೇಲೆ ಪರಿಣಾಮ ಬೀರುವುದಿಲ್ಲ. ಕಾಲಕಾಲಕ್ಕೆ, ಆರ್‌ಬಿಐ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ಬ್ಯಾಂಕಿಂಗ್ ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ದಂಡವನ್ನು ವಿಧಿಸುತ್ತದೆ. ಗ್ರಾಹಕರು ತಮ್ಮ ಬ್ಯಾಂಕ್ ಸಂಬಂಧಿತ ಕೆಲಸವನ್ನು ಯಾವುದೇ ಅಡಚಣೆಯಿಲ್ಲದೆ ಮಾಡಬಹುದು.


Click it and Unblock the Notifications