ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್- ಇಂಡಿಯಾಗೆ RBIನಿಂದ 2 ಕೋಟಿ ರು. ದಂಡ

ವಂಚನೆ ಬಗ್ಗೆ ವರದಿ ಮಾಡುವುದನ್ನು ತಡ ಮಾಡಿದ ಕಾರಣಕ್ಕೆ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್- ಇಂಡಿಯಾಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 2 ಕೋಟಿ ರುಪಾಯಿ ಜುಲ್ಮಾನೆ ವಿಧಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ವಾಣಿಜ್ಯ ಬ್ಯಾಂಕ್ ಗಳು ಮತ್ತು ಆಯ್ದ ಹಣಕಾಸು ಸಂಸ್ಥೆಗಳ ವಂಚನೆ- ವರ್ಗೀಕರಣ ಮತ್ತು ವರದಿ) ನಿರ್ದೇಶನ 2016ರಲ್ಲಿ ಇರುವ ಕೆಲವು ಮಾರ್ಗದರ್ಶಿ ಸೂತ್ರಗಳಿಗೆ ಬದ್ಧವಾಗಿಲ್ಲ ಎಂದು ಹಣದ ದಂಡ ವಿಧಿಸಲಾಗಿದೆ.

ಮಾರ್ಚ್ 31, 2018 ಹಾಗೂ ಮಾರ್ಚ್ 31, 2019ರ ಹಣಕಾಸು ಸ್ಥಿತಿಯ ಬಗ್ಗೆ ಕಾನೂನು ಪ್ರಕಾರದ ಪರಿಶೀಲನೆಯನ್ನು ಬ್ಯಾಂಕ್ ನಲ್ಲಿ ಮಾಡುವ ವೇಳೆ ವಂಚನೆ ಬಗ್ಗೆ ಆರ್ ಬಿಐಗೆ ವರದಿ ಮಾಡಿರುವುದು ತಡವಾಗಿದೆ ಎಂಬುದು ಗಮನನಕ್ಕೆ ಬಂತು. ಆದ್ದರಿಂದ ದಂಡ ಹಾಕಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಿರ್ದೇಶನಕ್ಕೆ ಬದ್ಧವಾಗಿಲ್ಲ ಎಂಬ ಕಾರಣಕ್ಕೆ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್- ಇಂಡಿಯಾಗೆ ಏಕೆ ದಂಡ ವಿಧಿಸಬಾರದು ಎಂದು ತಿಳಿಸುವಂತೆ ಆರ್ ಬಿಐನಿಂದ ನೋಟಿಸ್ ನೀಡಲಾಗಿತ್ತು. "ನೋಟಿಸ್ ಗೆ ಬ್ಯಾಂಕ್ ನ ಪ್ರತಿಕ್ರಿಯೆ ಮತ್ತು ಮೌಖಿಕ ಉತ್ತರವನ್ನು ಕೇಳಿಸಿಕೊಂಡ ಮೇಲೆ ಆರ್ ಬಿಐ ನಿರ್ದೇಶನವನ್ನು ಪಾಲನೆ ಮಾಡಿಲ್ಲ ಎಂಬುದು ಕಂಡುಬಂದಿದೆ. ಆ ಕಾರಣಕ್ಕೆ ದಂಡವನ್ನು ಹಾಕಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಗೆ RBIನಿಂದ 2 ಕೋಟಿ ರು. ದಂಡ

ಆರ್ ಬಿಐ ನಿರ್ದೇಶನಗಳ ಪೈಕಿ ಕೆಲವನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಈ ದಂಡ ಹಾಕಲಾಗಿದೆ. ಅದನ್ನು ಹೊರತು ಪಡಿಸಿದರೆ ಗ್ರಾಹಕರ ಜತೆಗಿನ ಯಾವುದೇ ವಹಿವಾಟು, ಒಪ್ಪಂದದ ಸಿಂಧುತ್ವದ ಕಾರಣಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+