For Quick Alerts
ALLOW NOTIFICATIONS  
For Daily Alerts

ನಿಯಮ ಉಲ್ಲಂಘನೆ: 14 ಬ್ಯಾಂಕ್‌ಗಳಿಗೆ 2 ಕೋಟಿ ರೂಪಾಯಿ ತನಕ ದಂಡ ವಿಧಿಸಿದ RBI

|

ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಬ್ಯಾಂಕ್‌ಗಳ ಅನುಸರಣೆಯಲ್ಲಿನ ನ್ಯೂನ್ಯತೆಗಳನ್ನ ಆಧರಿಸಿ 14 ಬ್ಯಾಂಕ್‌ಗಳಿಗೆ 2 ಕೋಟಿ ರೂಪಾಯಿವರೆಗೆ ದಂಡವನ್ನ ವಿಧಿಸಿದೆ. ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಬ್ಯಾಂಕ್ ಸಾಲ ನೀಡುವಿಕೆಗೆ ಸಂಬಂಧಿಸಿದ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ದೊಡ್ಡ ಮಾನ್ಯತೆಗಳ ಡೇಟಾವನ್ನು ನಿರ್ವಹಿಸಿದ್ದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ದಂಡ ವಿಧಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಬಂಧನ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ , ಸೆಂಟ್ರಲ್ ಬ್ಯಾಂಕ್ ಸೇರಿದಂತೆ 14 ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ಬುಧವಾರ ವಿತ್ತೀಯ ದಂಡ ವಿಧಿಸಿದೆ. ಈ ದಂಡವು 50 ಲಕ್ಷದಿಂದ 2 ಕೋಟಿ ರೂ., ಎಸ್‌ಬಿಐಗೆ 50 ಲಕ್ಷ ರೂ. ಮತ್ತು ಬ್ಯಾಂಕ್ ಆಫ್ ಬರೋಡಾಗೆ 2 ಕೋಟಿ ರೂ. ದಂಡ ಹಾಕಲಾಗಿದೆ.

14 ಬ್ಯಾಂಕ್‌ಗಳಿಗೆ 2 ಕೋಟಿ ರೂಪಾಯಿ ತನಕ ದಂಡ ವಿಧಿಸಿದ RBI

"ಈ ಕ್ರಮವು ರೆಗ್ಯುಲೇಟರಿ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ ಮತ್ತು ಬ್ಯಾಂಕುಗಳು ತಮ್ಮ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವವನ್ನು ಉದ್ದೇಶಿಸಿಲ್ಲ" ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ವಿವಿಧ ನಿಯಮ ಉಲ್ಲಂಘನೆಗಳಿಗಾಗಿ ಒಂದೇ ದಿನದಲ್ಲಿ ಆರ್‌ಬಿಐನಿಂದ ಅತಿ ಹೆಚ್ಚು ದಂಡವನ್ನು ಬ್ಯಾಂಕುಗಳಿಗೆ ವಿಧಿಸುತ್ತಿರುವುದು ಇದು ಮೊದಲು. ಹಾಗಿದ್ದರೆ ಯಾವೆಲ್ಲಾ ಬ್ಯಾಂಕುಗಳು ದಂಡಕ್ಕೆ ಒಳಗಾಗಿಗೆ ಎಂಬುದನ್ನು ಈ ಕೆಳಗೆ ತಿಳಿಯಿರಿ.

ಆರ್‌ಬಿಐ ದಂಡ ವಿಧಿಸಿರುವ ಬ್ಯಾಂಕುಗಳ ಹೆಸರು:
ಬಂಧನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕ್ರೆಡಿಟ್ ಸ್ಯೂಸ್, ಇಂಡಿಯನ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಉತ್ಕರ್ಶ್ ಸ್ಮಾಲ್ ಫೈನಾನ್ಸ್ ಬ್ಯಾಂಕ್.

English summary

RBI Imposes Fine Of Upto Rs 2 Crore On 14 Banks For Non Compliance

The RBI on Wednesday imposed a monetary penalty on 14 banks, including State Bank of India (SBI), Bandhan Bank, IndusInd Bank
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X