For Quick Alerts
ALLOW NOTIFICATIONS  
For Daily Alerts

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 1 ಕೋಟಿ ದಂಡ ವಿಧಿಸಿದ ಆರ್‌ಬಿಐ

|

ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ನವೆಂಬರ್‌ 29 ರಂದು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮೇಲೆ ಸುಮಾರು ಒಂದು ಕೋಟಿ ರೂಪಾಯಿಯಷ್ಟು ವಿತ್ತೀಯ ದಂಡವನ್ನು ವಿಧಿಸಿದೆ. ಆಸ್ತಿಗಳ ಮಾರಾಟ ಹಾಗೂ ವಂಚನೆಗಳ ವರದಿಗೆ ಸಂಬಂಧಿಸಿದ ಕೆಲವು ನಿರ್ಬಂಧನೆಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಆರ್‌ಬಿಐ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮೇಲೆ ಒಂದು ಕೋಟಿ ರೂಪಾಯಿ ವಿತ್ತೀಯ ದಂಡವನ್ನು ವಿಧಿಸಿದೆ.

 

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಆರ್‌ಬಿಐ ಈ ಹಿಂದೆ ತಪಾಸಣೆಯನ್ನು ನಡೆಸಿ ಎಚ್ಚರಿಕೆಯನ್ನು ನೀಡಿದೆ. ಆದರೆ ಅದರ ಹೊರತಾಗಿಯೂ ಈ ಆಸ್ತಿಗಳ ಮಾರಾಟ ಹಾಗೂ ವಂಚನೆಗಳ ವರದಿಗೆ ಸಂಬಂಧಿಸಿದ ಕೆಲವು ನಿರ್ಬಂಧನೆಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿಲ್ಲ ಎಂಬ ಆರೋಪದಲ್ಲಿ ದಂಡ ವಿಧಿಸಲಾಗಿದೆ.

 

ಎಸ್‌ಬಿಐಗೆ 1 ಕೋಟಿ ದಂಡ ವಿಧಿಸಿದ ಆರ್‌ಬಿಐ!</a><a href=" title="ಎಸ್‌ಬಿಐಗೆ 1 ಕೋಟಿ ದಂಡ ವಿಧಿಸಿದ ಆರ್‌ಬಿಐ!" />ಎಸ್‌ಬಿಐಗೆ 1 ಕೋಟಿ ದಂಡ ವಿಧಿಸಿದ ಆರ್‌ಬಿಐ!

ಈ ಬಗ್ಗೆ ಮಾಹಿತಿ ನೀಡಿರುವ ಆರ್‌ಬಿಐ, "ಆರ್‌ಬಿಐ ತಪಾಸಣೆ ನಡೆಸಿ ಎಚ್ಚರಿಕೆ ನೀಡಿದರೂ ಕೂಡಾ ಈ ನಿಯಮವನ್ನು ಪಾಲನೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಖಾತರಿಯನ್ನು ನೀಡಿಲ್ಲ. ತನ್ನ ವಾರ್ಷಿಕ ವರದಿಯಲ್ಲಿ ಭದ್ರತಾ ರಸೀದಿಗಳಿಗೆ (ಎಸ್‌ಆರ್‌ಗಳು) ನಿಬಂಧನೆಗಳನ್ನು ಬಹಿರಂಗಪಡಿಸಲು ವಿಫಲವಾಗಿದೆ ಎಂದು ತಿಳಿಸಿದೆ.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 1 ಕೋಟಿ ದಂಡ

ಈ ಕ್ರಮವು ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ. ಬ್ಯಾಂಕ್‌ ತನ್ನ ಗ್ರಾಹಕರ ಜೊತೆ ಮಾಡಿಕೊಂಡಿರುವ ಯಾವುದೇ ವಹಿವಾಟು ಅಥವಾ ಒಪ್ಪಂದದ ಮಾನ್ಯತೆಯ ಮೇಲೆ ನಡೆದಿರಬೇಕು. ಆದರೆ ಅದರ ಉಲ್ಲಂಘನೆ ಆಗಿದೆ ಎಂದು ಆರ್‌ಬಿಐ ಪುನರುಚ್ಛರಿಸಿದೆ.

2018 ರ ಮಾರ್ಚ್ 31 ಹಾಗೂ 2019 ರ ಮಾರ್ಚ್ 31 ರಂತೆ ಬ್ಯಾಂಕಿನ ಮೇಲ್ವಿಚಾರಣಾ ಮೌಲ್ಯಮಾಪನಕ್ಕಾಗಿ (ಐಎಸ್‌ಇ) ಶಾಸನಬದ್ದವಾದ ತಪಾಸಣೆಯನ್ನು ಆರ್‌ಬಿಐ ತನ್ನ ಹಣಕಾಸಿನ ಸ್ಥಿತಿಗಳನ್ನು ಉಲ್ಲೇಖ ಮಾಡಿ ನಡೆಸಿದೆ ಎಂದು ಆರ್‌ಬಿಐ ಹೇಳಿದೆ. ಆಸ್ತಿಗಳ ಮಾರಾಟ ಹಾಗೂ ವಂಚನೆಗಳ ವರದಿಗೆ ಸಂಬಂಧಿಸಿದ ಕೆಲವು ನಿರ್ಬಂಧನೆಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ತಿಳಿಸಿದೆ.

ಈ ಹಿಂದೆ ಎಸ್‌ಬಿಐಗೆ ಒಂದು ಕೋಟಿ ದಂಡ ವಿಧಿಸಿದ್ದ ಆರ್‌ಬಿಐ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ (ಎಸ್‌ಬಿಐ) ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಈ ಹಿಂದೆ ಒಂದು ಕೋಟಿ ರೂಪಾಯಿ ದಂಡವನ್ನು ವಿಧಿಸಿತ್ತು. ವಂಚನೆ ಸಂಬಂಧಿಸಿದ ನಿಯಮಗಳನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪಾಲನೆ ಮಾಡಿಲ್ಲ ಎಂಬ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ, ಎಸ್‌ಬಿಐಗೆ ದಂಡ ವಿಧಿಸಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಖಾತೆಗಳ ಬಗ್ಗೆ ತನಿಖೆ ನಡೆಸಲಾಗಿದೆ ಮತ್ತು ವಂಚನೆಗಳ ಬಗ್ಗೆ ಎಸ್‌ಬಿಐ ಬಳಿ ವರದಿ ಮಾಡುವಲ್ಲಿ ಅಡೆತಡೆಗಳು ಇದೆ. ಈ ನಿಟ್ಟಿನಲ್ಲಿ ಎ‌ಸ್‌ಬಿಐಗೆ ದಂಡ ವಿಧಿಸಲಾಗಿದೆ ಎಂದು ನಿಯಂತ್ರಕರು ತಿಳಿಸಿದ್ದಾರೆ.

ಪೇಟಿಯಂಗೆ ಭಾರಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾಪೇಟಿಯಂಗೆ ಭಾರಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ

ಈ ಬಗ್ಗೆ ಮಾಹಿತಿ ನೀಡಿರುವ ನಿಯಂತ್ರಕರು, "ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾವು ಎಸ್‌ಬಿಐನಲ್ಲಿ ಇರುವ ಗ್ರಾಹಕರ ಖಾತೆಯ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಕೆಲವು ಅಡೆತಡೆಗಳು ಇರುವುದು ಕಂಡು ಬಂದಿದೆ," ಎಂದು ಹೇಳಿದ್ದಾರೆ. "ಯಾವುದೇ ವಂಚನೆ ನಡೆದ ಸಂದರ್ಭದಲ್ಲಿ ಆ ಬಗ್ಗೆ ದೂರು ದಾಖಲು ಮಾಡುವಾಗ ಎಸ್‌ಬಿಐನ ಕೆಲವು ಅಡೆತಡೆಗಳಿಂದಾಗಿ ವಿಳಂಬವಾಗುತ್ತದೆ. ಈ ನಿಟ್ಟಿನಲ್ಲಿ ದಂಡ ವಿಧಿಸಲಾಗಿದೆ," ಎಂದು ಕೂಡಾ ಉಲ್ಲೇಖ ಮಾಡಲಾಗಿದೆ. ಇನ್ನು ಆರ್‌ಬಿಐಯು ಎಸ್‌ಬಿಐಗೆ ನೋಟಿಸ್‌ ಅನ್ನು ಕೂಡಾ ನೀಡಿದೆ. ಈ ನೋಟಿಸ್‌ನಲ್ಲಿ ದೇಶದ ಅತೀ ದೊಡ್ಡ ಸಾಲದಾತ ಬ್ಯಾಂಕ್‌ನ ಈ ತಪ್ಪಿನ ಮೇಲೆ ಏಕೆ ದಂಡ ವಿಧಿಸಬಾರದು ಎಂದು ಸಲಹೆಯನ್ನು ಸೂಚಿಸಿ ಎಂದು ಹೇಳಿದೆ. ಈ ಮೂಲಕ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾವು ಎಸ್‌ಬಿಐ ಮೇಲೆ ಛಾಟಿ ಏಟು ಬೀಸಿದೆ.

English summary

RBI imposes Rs 1 crore penalty on Union Bank of India

The Reserve Bank of India (RBI) imposes Rs 1 crore penalty on Union Bank of India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X