ಸಾಮಾನ್ಯವಾಗಿ ಬ್ಯಾಂಕ್‌ನಲ್ಲಿ ನಿರ್ದಿಷ್ಟವಾದ ವಿತ್‌ಡ್ರಾ ಮಿತಿಯು ಇರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಹಾರಾಷ್ಟ್ರದ ಅಕ್ಲೊಜ್‌ನಲ್ಲಿನ ಶಂಕರ್‌ರಾವ್ ಮೋಹಿತೆ ಪಾಟೀಲ್ ಸಹಕಾರಿ ಬ್ಯಾಂಕ್ ಮೇಲೆ ವಿತ್‌ಡ್ರಾ ಮಿತಿಯನ್ನು ಹೇರಿದೆ. ಹೌದು ಇನ್ನು ಮುಂದೆ ನೀವು ಈ ಬ್ಯಾಂಕ್‌ನಲ್ಲಿ ವಿತ್‌ಡ್ರಾ ಮಾಡಬೇಕಾದರೆ ಯೋಚನೆ ಮಾಡಬೇಕಾಗುತ್ತದೆ. ಯಾಕೆಂದರೆ ವಿತ್‌ಡ್ರಾ ಮಿತಿ ಬರೀ 5 ಸಾವಿರ ರೂಪಾಯಿ ಆಗಿದೆ.
ಇದು ಮಾತ್ರವಲ್ಲದೆ ಬ್ಯಾಂಕ್ ಮೇಲೆ ಹಲವಾರು ನಿರ್ಬಂಧಗಳನ್ನು ಕೂಡಾ ವಿಧಿಸಿದೆ. ಪ್ರಸ್ತುತ ಬ್ಯಾಂಕ್‌ನ ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು ಆರ್‌ಬಿಐ ಈ ನಿರ್ಧಾರವನ್ನು ಮಾಡಿದೆ. ಈ ವಿತ್‌ಡ್ರಾ ಮಿತಿ ಮತ್ತು ನಿರ್ಬಂಧಗಳು ಮುಂದಿನ ಆರು ತಿಂಗಳುಗಳ ಕಾಲ ಚಾಲ್ತಿಯಲ್ಲಿರಲಿದೆ. ಫೆಬ್ರವರಿ 24, 2023ರಿಂದ ಆರಂಭವಾಗಿ 6 ತಿಂಗಳುಗಳ ಕಾಲ ಇರಲಿದೆ. ಹಾಗಾದರೆ ಯಾವೆಲ್ಲ ನಿರ್ಬಂಧಗಳಿದೆ, ಇತರೆ ಮಾಹಿತಿ ಇಲ್ಲಿದೆ ಮುಂದೆ ಓದಿ..

ಬೇರೆ ಯಾವೆಲ್ಲ ನಿರ್ಬಂಧಗಳಿದೆ ನೋಡಿ
ಶಂಕರ್‌ರಾವ್ ಮೋಹಿತೆ ಪಾಟೀಲ್ ಸಹಕಾರಿ ಬ್ಯಾಂಕ್ ಇನ್ನು ಮುಂದೆ ಆರ್‌ಬಿಐನ ಅನುಮೋದನೆ ಇಲ್ಲದೆ ಯಾವುದೇ ಸಾಲವನ್ನು ನೀಡುವಂತಿಲ್ಲ. ಹಾಗೆಯೇ ಯಾವುದೇ ಹೂಡಿಕೆಯನ್ನು ಕೂಡಾ ಮಾಡಬೇಕಾದರೂ ಸರ್ಕಾರದ ಅನುಮತಿ ಮುಖ್ಯವಾಗಿದೆ. ಹಾಗೆಯೇ ತನ್ನ ಯಾವುದೇ ಸಂಪತ್ತನ್ನು ವರ್ಗಾಯಿಸಲು, ವಿಲೇವಾರಿ ಮಾಡಲು ಕೂಡಾ ಆರ್‌ಬಿಐನ ಅನುಮತಿ ಬೇಕಾಗುತ್ತದೆ. ಬ್ಯಾಂಕಿಂಗ್ ರೆಗ್ಯೂಲೇಷನ್ ಕಾಯ್ದೆ 1949 ಸೆಕ್ಷನ್ 35 A ಅಡಿಯಲ್ಲಿ ಈ ನಿರ್ಬಂಧವನ್ನು ವಿಧಿಸಲಾಗಿದೆ.
"ಎಲ್ಲ ಉಳಿತಾಯ ಬ್ಯಾಂಕ್ ಅಥವಾ ಕರೆಂಟ್ ಖಾತೆ ಅಥವಾ ಬೇರೆ ಯಾವುದೇ ಖಾತೆಯ ಹೂಡಿಕೆದಾರರು ತಮ್ಮ ಖಾತೆಯಿಂದ ಇನ್ನು ಮುಂದೆ ಮುಖ್ಯವಾಗಿ 5 ಸಾವಿರ ರೂಪಾಯಿಗಿಂತ ಅಧಿಕ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವನ್ನು ನೀಡಲಾಗುವುದಿಲ್ಲ. ಅಂದರೆ ಯಾರು ಈ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರುತ್ತಾರೋ ಅವರು, ಖಾತೆಯಿಂದ 5000 ರೂಪಾಯಿ ಮಾತ್ರ ವಿತ್‌ಡ್ರಾ ಮಾಡಲು ಸಾಧ್ಯವಾಗುತ್ತದೆ," ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಈ ಆದೇಶದಲ್ಲಿ ಆರ್‌ಬಿಐ ಬ್ಯಾಂಕ್‌ನ ಲೈಸೆನ್ಸ್ ಅನ್ನು ರದ್ದು ಮಾಡುವ ಆದೇಶವನ್ನು ನೀಡಿಲ್ಲ ಎಂಬ ಸ್ಪಷ್ಟಣೆಯನ್ನು ಕೂಡಾ ನೀಡಿದೆ. "ಹಣಕಾಸು ಸ್ಥಿತಿಯು ಸರಿಯಾದ ದಾರಿಗೆ ಬರುವವರೆಗೂ ಬ್ಯಾಂಕ್ ಮೇಲೆ ಆರ್‌ಬಿಐ ಹೇರಿರುವ ನಿರ್ಬಂಧವನ್ನು ಮುಂದುವರಿಸಲಾಗುತ್ತದೆ," ಎಂದು ಆರ್‌ಬಿಐ ತಿಳಿಸಿದೆ. ಇನ್ನು ಅರ್ಹ ಹೂಡಿಕೆದಾರರು ಸುಮಾರು 5 ಲಕ್ಷ ರೂಪಾಯಿವರೆಗೆ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿಯನ್ನು ಹೊಂದಿರುತ್ತದೆ.
More From GoodReturns

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಹಣದುಬ್ಬರ ದರ ಏರಿಕೆ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್‌ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!



Click it and Unblock the Notifications