RBI Penalty: ಆಕ್ಸಿಸ್ ಬ್ಯಾಂಕ್‌ಗೆ 90.92 ಲಕ್ಷ ರೂ. ದಂಡ ವಿಧಿಸಿದ ಆರ್‌ಬಿಐ, ಗ್ರಾಹಕರ ಮೇಲೆ ಪ್ರಭಾವವೇನು?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗುರುವಾರ ಎರಡು ಹಣಕಾಸು ಸಂಸ್ಥೆಗಳ ಮೇಲೆ ದಂಡವನ್ನು ವಿಧಿಸಿದೆ. ಆಕ್ಸಿಸ್ ಬ್ಯಾಂಕ್ ಮೇಲೆ ನಿರ್ದಿಷ್ಟ ನಿರ್ದೇಶನ ಪಾಲಿಸದ ಕಾರಣ ಆರ್‌ಬಿಐ 90.92 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಇನ್ನು ಮಣಪ್ಪುರಂ ಫೈನಾನ್ಸ್ ಲಿಮಿಟೆಡ್‌ಗೆ ಆರ್‌ಬಿಐ 42.78 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಈ ಬಗ್ಗೆ ಹೇಳಿಕೆಯಲ್ಲಿ ಆರ್‌ಬಿಐ ಮಾಹಿತಿಯನ್ನು ನೀಡಿದೆ. "ಆರ್‌ಬಿಐ ಹೊರಡಿಸಿದ ಕೆಲವು ನಿರ್ದೇಶನಗಳನ್ನು ಅನುಸರಿಸದ ಕಾರಣ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್‌ಗೆ 90.92 ಲಕ್ಷ ರೂಪಾಯಿಗಳ ವಿತ್ತೀಯ ದಂಡವನ್ನು ವಿಧಿಸಲಾಗುತ್ತದೆ," ಎಂದು ಆರ್‌ಬಿಐ ಹೇಳಿದೆ.

 ಆಕ್ಸಿಸ್ ಬ್ಯಾಂಕ್‌ಗೆ 90.92 ಲಕ್ಷ ದಂಡ, ಗ್ರಾಹಕರ ಮೇಲೆ ಪ್ರಭಾವವೇನು?

'ಕೆವೈಸಿ ನಿರ್ದೇಶನಗಳು- 2016, ಸಾಲಗಳು ಮತ್ತು ಮುಂಗಡಗಳು - ಶಾಸನಬದ್ಧ ಮತ್ತು ಇತರ ನಿರ್ಬಂಧಗಳು, ಬ್ಯಾಂಕ್‌ಗಳಿಂದ ಹಣಕಾಸು ಸೇವೆಗಳ ಹೊರಗುತ್ತಿಗೆಯಲ್ಲಿ ಅಪಾಯಗಳು ಮತ್ತು ನೀತಿ ಸಂಹಿತೆಗಳನ್ನು ನಿರ್ವಹಿಸುವ ಮಾರ್ಗಸೂಚಿ, ಚಾಲ್ತಿ ಖಾತೆಗಳನ್ನು ತೆರೆಯಲು ಮತ್ತು ನಿರ್ವಹಿಸಲು ನೀತಿ ಸಂಹಿತೆ,' ಮೊದಲಾದವುಗಳನ್ನು ಆಕ್ಸಿಸ್ ಬ್ಯಾಂಕ್ ಉಲ್ಲಂಘಿಸಿದೆ ಎಂದು ಆರ್‌ಬಿಐ ತಿಳಿಸಿದೆ.

ಗ್ರಾಹಕರ ಮೇಲೆ ಏನು ಪ್ರಭಾವ?

ಈ ಕ್ರಮವು ನಿಯಂತ್ರಕರ ನಿಯಮ ಉಲ್ಲಂಘನೆಯನ್ನು ಆಧರಿಸಿದೆ. ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವಹಿವಾಟು ಅಥವಾ ಒಪ್ಪಂದದ ಮೇಲೆ ಇದು ಪ್ರಭಾವ ಬೀರದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಇನ್ನು ಸಾಮಾನ್ಯವಾಗಿಯೇ ಆರ್‌ಬಿಐ ಯಾವುದೇ ಹಣಕಾಸು ಸಂಸ್ಥೆಗೆ ದಂಡವನ್ನು ವಿಧಿಸಿದರೆ ಅದರ ನೇರ ಪ್ರಭಾವ ಗ್ರಾಹಕರ ಮೇಲೆ ಉಂಟಾಗುವುದಿಲ್ಲ.

ಆಕ್ಸಿಸ್ ಬ್ಯಾಂಕ್‌ನಿಂದ ಆದ ತಪ್ಪುಗಳೇನು?

ಆಕ್ಸಿಸ್ ಬ್ಯಾಂಕ್‌ನ ಮೇಲ್ವಿಚಾರಣಾ ಮೌಲ್ಯಮಾಪನಕ್ಕಾಗಿ ಶಾಸನಬದ್ಧ ತಪಾಸಣೆಯನ್ನು ಆರ್‌ಬಿಐ ನಡೆಸಿದೆ. ಮಾರ್ಚ್ 31, 2022 ರಂತೆ ಅದರ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ ಆರ್‌ಬಿಐ ತಪಾಸಣೆ ನಡೆಸಿದೆ. ಖಾತೆಗಳ ಪರಿಶೀಲನೆಯನ್ನು ಕೂಡಾ ಆರ್‌ಬಿಐ ಮಾಡಿದೆ.

ಈ ಸಂದರ್ಭದಲ್ಲಿ 'ಕೆಲವು ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರ ವಿಳಾಸವನ್ನು ಹೊಂದಿಲ್ಲ, ಕೆಲವು ಗ್ರಾಹಕರಿಗೆ ನಿರಂತರ ಕರೆಗಳನ್ನು ಮಾಡಿದೆ, ಸಾಲ ವಸೂಲಾತಿ ಏಜೆಂಟ್‌ಗಳ ಸೂಕ್ತ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆ, ಕೆಲವು ಗ್ರಾಹಕರಿಗೆ ರಿಕವರಿ ಏಜೆಂಟ್‌ಗಳು ಮಾಡಿದ ಕರೆಗಳ ರೆಕಾರ್ಡಿಂಗ್ ಇಲ್ಲ, ಖಾತೆ ತೆರೆಯುವಾಗ ಗ್ರಾಹಕರಿಂದ ಡಿಕ್ಲೆರೇಷನ್ ಪಡೆದಿಲ್ಲ,' ಎಂಬುವುದು ಆರ್‌ಬಿಐ ಗಮನಕ್ಕೆ ಬಂದಿದೆ.

ಇದರ ನಂತರ, ಆರ್‌ಬಿಐ ಆಕ್ಸಿಸ್ ಬ್ಯಾಂಕ್‌ಗೆ ನೋಟಿಸ್ ಕಳುಹಿಸಿದ್ದು, ಆರ್‌ಬಿಐ ನೀಡಿದ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕೆ ದಂಡವನ್ನು ಏಕೆ ವಿಧಿಸಬಾರದು ಎಂಬ ಕಾರಣವನ್ನು ಕೇಳಿದೆ. ಬ್ಯಾಂಕ್‌ನ ಪ್ರತಿಕ್ರಿಯೆಯನ್ನು ಆಧರಿಸಿ ಈಗ ಆರ್‌ಬಿಐ ಸೂಕ್ತ ದಂಡವನ್ನು ನಿಗದಿಪಡಿಸಿದೆ.

ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಮೇಲೆ ದಂಡ

ಈ ನಡುವೆ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಮೇಲೆ ಕೂಡಾ ಆರ್‌ಬಿಐ ದಂಡವನ್ನು ವಿಧಿಸಿರುವುದಾಗಿ ತಿಳಿಸಿದೆ. ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯ ಕೆಲವು ನಿಬಂಧನೆಗಳನ್ನು ಅನುಸರಿಸದ ಕಾರಣ 42.78 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ ಎಂದು ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+