ಸಾಲದ ಮೇಲಿನ EMI ಪಾವತಿ ವಿನಾಯಿತಿ ಮತ್ತೆ 3 ತಿಂಗಳು ವಿಸ್ತರಣೆ ಸಾಧ್ಯತೆ

ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಯಾಗಿದ್ದ ಬಳಿಕ ಆರ್‌ಬಿಐ ಸಾಲಗಳ ಮೇಲಿನ ಕಂತು ಪಾವತಿ (ಇಎಂಐ) ಅವಧಿಯನ್ನು ಮೂರು ತಿಂಗಳು ವಿಸ್ತಣೆ ಮಾಡಿತ್ತು. ಆದರೆ ಲಾಕ್‌ಡೌನ್ ಮುಂದುವರಿದ ಭಾಗವಾಗಿ ಮತ್ತೆ ಇನ್ನೂ ಮೂರು ತಿಂಗಳು ವಿಸ್ತರಿಸುವ ಸಾಧ್ಯತೆ ಇದೆ.

ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತಷ್ಟು ಹೆಚ್ಚಾಗಿರುವುದರಿಂದ ಲಾಕ್‌ಡೌನ್ ಮುಂದುವರಿಸಲಾಗಿದೆ. ಇದರಿಂದ ಜನರಿಗೆ ಸಾಲದ ಮರುಪಾವತಿ ಕಷ್ಟಸಾಧ್ಯವಾಗಿದೆ. ಹೀಗಾಗಿ ಇಎಂಐ ಪಾವತಿಗೆ ಮತ್ತೆ ಮೂರು ತಿಂಗಳು ಅವಧಿ ವಿಸ್ತರಿಸಬೇಕು ಎಂದು ಇಂಡಿಯನ್‌ ಬ್ಯಾಂಕ್‌ ಅಸೋಸಿಯೇಷನ್‌ ಸೇರಿದಂತೆ ಅನೇಕ ಸಂಸ್ಥೆಗಳು ಸಲಹೆ ನೀಡಿವೆ. ಹೀಗಾಗಿ ಈ ಪ್ರಸ್ತಾವನೆಗಳನ್ನು ರಿಸರ್ವ್‌ ಬ್ಯಾಂಕ್‌ ಪರಿಗಣಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸಾಲಗಾರರಿಗೆ ಮತ್ತೆ ಮೂರು ತಿಂಗಳ ಸಮಯ ಸಿಗುವ ಸಾಧ್ಯತೆ

ಸಾಲಗಾರರಿಗೆ ಮತ್ತೆ ಮೂರು ತಿಂಗಳ ಸಮಯ ಸಿಗುವ ಸಾಧ್ಯತೆ

ಗೃಹ, ವಾಹನ ಸಾಲ ಮತ್ತು ಇತರೆ ಅವಧಿ ಸಾಲಗಳ ಕಂತು ಪಾವತಿ(ಇಎಂಐ)ಯನ್ನು ಮೂರು ತಿಂಗಳ ಕಾಲ ತಡೆ ಹಿಡಿಯಲು ಬ್ಯಾಂಕ್‌ಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ಆರ್‌ಬಿಐ ಕಳೆದ ಮಾರ್ಚ್‌ನಲ್ಲಿ ಸೂಚನೆ ನೀಡಿತ್ತು. ಈಗ ಸಾಲಗಾರರಿಗೆ ಮತ್ತೆ ಮೂರು ತಿಂಗಳ ಸಮಯ ಸಿಗುವ ಸಾಧ್ಯತೆ ಇದೆ. ಆದರೆ ಇಎಂಐ ಪಾವತಿ ಮಾಡುವ ಸಾಮರ್ಥ್ಯವುಳ್ಳವರು ಮುಂದೂಡದೇ ಪಾವತಿಸುವುದೇ ಒಳ್ಳೆಯದು ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ವಿಸ್ತರಣೆಗೊಳ್ಳುವ ಅವಧಿಗೆ ಬಡ್ಡಿ ಬೀಳುವುದು ಖಚಿತ

ವಿಸ್ತರಣೆಗೊಳ್ಳುವ ಅವಧಿಗೆ ಬಡ್ಡಿ ಬೀಳುವುದು ಖಚಿತ

ಸಾಲ ಕಟ್ಟಲು ಸಮಯವನ್ನು ನೀಡಲಾಗಿದೆ ಎಂದು ಒಂದು ವೇಳೆ ಹಣವಿದ್ದರೂ ಕಟ್ಟದೇ ಸುಮ್ಮನಾದರೆ ವಿಸ್ತರಣೆಗೊಳ್ಳುವ ಅವಧಿಗೆ ಬಡ್ಡಿ ಬೀಳುತ್ತದೆ. ಹೀಗಾಗಿ ದುಡ್ಡಿದ್ದರೆ ಇಎಂಐ ಪಾವತಿ ಸೂಕ್ತ ಎಂದು ತಜ್ಞರು ಸಲಹೆಯನ್ನು ನೀಡಿದ್ದಾರೆ.

ಇಎಂಐ ಪಾವತಿ ಅವಧಿ ಮುಂದೂಡಿಕೆಯಿಂದ ಹೊರೆಯೇ ಹೆಚ್ಚು?

ಇಎಂಐ ಪಾವತಿ ಅವಧಿ ಮುಂದೂಡಿಕೆಯಿಂದ ಹೊರೆಯೇ ಹೆಚ್ಚು?

ಇಎಂಐ ಪಾವತಿ ಅವಧಿಯನ್ನು ಮುಂದೂಡುವ ವಿನಾಯಿತಿಯಲ್ಲಿ ಜನರಿಗೆ ಯಾವುದೇ ಅನುಕೂಲವಾದಂತಿಲ್ಲ. ಮತ್ತಷ್ಟು ಹೊರೆಯಾಗಲಿದೆ ಎಂದು ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಮೂರು ತಿಂಗಳ ಅವಧಿಗೆ ಇಎಂಐ ಕಟ್ಟಬೇಕಾದ ಹಣವನ್ನು ಹೋಲ್ಡ್‌ ಮಾಡಬೇಕು, ಹೀಗಾಗಿ ಇದರ ಮೇಲಿನ ಬಡ್ಡಿ ಹೆಚ್ಚಾಗಿರುತ್ತದೆ. ಈ ಕಾರಣದಿಂದ ವಿಸ್ತರಣೆ ಅವಧಿಗೆ ಯಾವುದೇ ಬಡ್ಡಿ ವಿಧಿಸಬೇಡಿ ಎಂಬುದು ಸಾಲಗಾರರ ಒತ್ತಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+