ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರಂತರವಾಗಿ ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಆದರೆ ಈ ಮಾನೆಟರಿ ಪಾಲಿಸಿ ಕಮಿಟಿ ಸಭೆಯ ಬಳಿಕ ದರವನ್ನು ಸ್ಥಿರವಾಗಿರಿಸುವ ನಿರ್ಧಾರವನ್ನು ಮಾಡಿದೆ. ಆರ್‌ಬಿಐ ರೆಪೋ ದರವನ್ನು ಫೆಬ್ರವರಿಯಲ್ಲಿ 25 ಮೂಲಾಂಕ ಏರಿಕೆ ಮಾಡಿದ್ದು, ದರವು ಶೇಕಡ 6.5ಕ್ಕೆ ತಲುಪಿದೆ. ಅದಾದ ಬಳಿಕ ಆ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಈ ಹಿಂದೆ ಒಟ್ಟು 6 ಬಾರಿ ಆರ್‌ಬಿಐ ರೆಪೋ ದರ ಪರಿಷ್ಕರಣೆ ಮಾಡಿದೆ. 7ನೇ ಬಾರಿಗೆ ಆರ್‌ಬಿಐ ರೆಪೋ ದರವನ್ನು 25 ಬಿಪಿಎಸ್ ಏರಿಕೆ ಮಾಡಬಹುದು ಎಂಬುವುದು ತಜ್ಞರ ಅಭಿಪ್ರಾಯವಾಗಿತ್ತು. ಆದರೆ ಆರ್‌ಬಿಐ ದರವನ್ನು ಸ್ಥಿರವಾಗಿರಿಸಿತ್ತು. ಈಗ ಸತತವಾಗಿ ಐದನೇ ಬಾರಿ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಿದೆ.

2022ರ ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ಪ್ರಯತ್ನದಲ್ಲಿ 2022ರ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು 40 ಮೂಲಾಂಕ ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಅದಾದ ಬಳಿಕ ನಿರಂತರವಾಗಿ ದರ ಹೆಚ್ಚಿಸುತ್ತಾ ಬಂದಿದೆ.
ಮೇ ತಿಂಗಳಿನಿಂದ ಈವರೆಗೆ ರೆಪೋ ದರ ಏರಿಕೆ ಟೈಮ್‌ಲೈನ್
* 4, ಮೇ 2022: ಎಂಪಿಸಿಯ ಅನಿಗದಿತ ಸಭೆಯ ಬಳಿಕ ಆರ್‌ಬಿಐ 40 ಮೂಲಾಂಕ ದರ ಏರಿಕೆ ಮಾಡಿದೆ. ಏಪ್ರಿಲ್‌ವರೆಗೆ ಸತತ 10 ಬಾರಿ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಿತ್ತು. ಈ ಪರಿಷ್ಕರಣೆಯ ಬಳಿಕ ಶೇಕಡ 3.35ರಷ್ಟಿದ್ದ ರೆಪೋ ದರ ಶೇಕಡ 4.40ಕ್ಕೆ ಏರಿಕೆಯಾಗಿದೆ.
* 8, ಜೂನ್ 2022: ಮೇ ತಿಂಗಳಲ್ಲಿ ಅನಿಗದಿತ ಸಭೆಯನ್ನು ನಡೆಸಿ ಆರ್‌ಬಿಐ 40 ಬಿಪಿಎಸ್ ರೆಪೋ ದರ ಏರಿಕೆ ಮಾಡಿದ ಬಳಿಕ ಜೂನ್‌ನಲ್ಲಿಯೂ ಮತ್ತೆ ದರ ಹೆಚ್ಚಿಸಿದೆ. ಜೂನ್ ತಿಂಗಳಿನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಿಸಲಾಗಿದ್ದು ದರ ಶೇಕಡ 4.9ಕ್ಕೆ ತಲುಪಿದೆ.
* 5, ಆಗಸ್ಟ್ 2022: ಇದಾದ ಬಳಿಕ ನಂತರ ಆಗಸ್ಟ್‌ನಲ್ಲಿ ಎಂಪಿಸಿ ಸಭೆಯು ನಡೆದಿದೆ. ಈ ಸಭೆಯ ಬಳಿಕ ಆರ್‌ಬಿಐ ರೆಪೋ ದರವನ್ನು 50 ಬಿಪಿಎಸ್ ಹೆಚ್ಚಿಸಿದ್ದು, ದರ ಶೇಕಡ 5.4ಕ್ಕೆ ಏರಿಕೆಯಾಗಿದೆ.
* 30, ಸೆಪ್ಟೆಂಬರ್ 2022: ಸೆಪ್ಟೆಂಬರ್‌ನಲ್ಲಿ ಮತ್ತೆ ರೆಪೋ ದರವನ್ನು ಆರ್‌ಬಿಐ 50 ಬಿಪಿಎಸ್ ಹೆಚ್ಚಿಸಿದ್ದು ದರವು ಶೇಕಡ 5.9ಕ್ಕೆ ತಲುಪಿದೆ.
* 7, ಡಿಸೆಂಬರ್ 2022: ಸತತವಾಗಿ 50 ಮೂಲಾಂಕ ರೆಪೋ ದರ ಏರಿಕೆ ಮಾಡಿದ ಬಳಿಕ ಆರ್‌ಬಿಐ ಡಿಸೆಂಬರ್‌ನಲ್ಲಿ ದರ ಏರಿಕೆ ಕೊಂಚ ಕಡಿಮೆ ಮಾಡಿದೆ. ಡಿಸೆಂಬರ್‌ನಲ್ಲಿ ನಡೆದ ಎಂಪಿಸಿ ಸಭೆಯ ಬಳಿಕ ಆರ್‌ಬಿಐ 35 ಬಿಪಿಎಸ್ ದರ ಹೆಚ್ಚಿಸಿದ್ದು ರೆಪೋ ದರ ಶೇಕಡ 6.25ಕ್ಕೆ ತಲುಪಿದೆ.
* 8, ಫೆಬ್ರವರಿ 2023: ಫೆಬ್ರವರಿಯಲ್ಲಿ ಮತ್ತಷ್ಟು ಕಡಿಮೆ ದರ ಏರಿಕೆಯನ್ನು ಆರ್‌ಬಿಐ ಮಾಡಿದೆ. ಕೇಂದ್ರ ಬ್ಯಾಂಕ್ 25 ಬಿಪಿಎಸ್ ದರ ಹೆಚ್ಚಿಸಿದ್ದು, ರೆಪೋ ದರ ಶೇಕಡ 6.50ಕ್ಕೆ ತಲುಪಿದೆ.
* 6, ಏಪ್ರಿಲ್ 2023: ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿಸಿದ್ದು, ರೆಪೋ ದರ ಶೇಕಡ 6.50ಕ್ಕೆ ಆಗಿದೆ.
* 8, ಜೂನ್ 2023: ಆರ್‌ಬಿಐ ಮತ್ತೆ ರೆಪೋ ದರ ಸ್ಥಿರವಾಗಿಸಿದೆ, ದರ ಶೇಕಡ 6.50ಕ್ಕೆ ಆಗಿದೆ.
* 10, ಆಗಸ್ಟ್ 2023: ಸತತವಾಗಿ ಮೂರನೇ ಬಾರಿಗೆ ರೆಪೋ ದರ ಸ್ಥಿರ.
* 6, ಅಕ್ಟೋಬರ್ 2023: ಸತತವಾಗಿ ನಾಲ್ಕನೇ ಬಾರಿಗೆ ರೆಪೋ ದರ ಸ್ಥಿರವಾಗಿದ್ದು ರೆಪೋ ದರ ಶೇಕಡ 6.50 ಆಗಿದೆ.
* 8, ಡಿಸೆಂಬರ್ 2023: ಸತತವಾಗಿ ಐದನೇ ಬಾರಿಗೆ ರೆಪೋ ದರ ಸ್ಥಿರವಾಗಿದ್ದು ರೆಪೋ ದರ ಶೇಕಡ 6.50 ಆಗಿದೆ.
ರೆಪೋ ದರ ಎಂದರೇನು?
ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಡಿಸೆಂಬರ್ 6, 7, 8 ರಂದು ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆ ನಡೆದಿದ್ದು ಈ ಸಭೆಯ ಅಂತ್ಯದಲ್ಲಿ ಅಂದರೆ ಡಿಸೆಂಬರ್ 8 ರಂದು ಆರ್‌ಬಿಐ ರೆಪೋ ದರ ಘೋಷಿಸಿದೆ.


Click it and Unblock the Notifications