ಭಾರತೀಯ ರಿಸರ್ವ್ ಬ್ಯಾಂಕ್ (RBI)ನ 'ವಿತ್ತ ನೀತಿ ಸಮಿತಿ' (MPC) ಸಭೆಯಲ್ಲಿ ಬಡ್ಡಿದರಗಳ ಕುರಿತು ದೊಡ್ಡ ನಿರ್ಧಾರ ತೆಗೆದುಕೊಂಡಿದೆ.
ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತ ನೀತಿ ಸಮಿತಿ (MPC) ಸಭೆ ಎರಡು ತಿಂಗಳಿಗೊಮ್ಮೆ ನಡೆಯುವ ಹಣಕಾಸು ಪರಿಶೀಲನಾ ಸಮಿತಿಯ (MPC) ಮೂರು ದಿನಗಳ ಸಭೆ ಇಂದು ಕೊನೆಗೊಂಡಿದೆ. 6 ಸದಸ್ಯರ ಸಮಿತಿಯು ಬಡ್ಡಿದರಗಳನ್ನು ಕಡಿಮೆ ಮಾಡಲು ಒಪ್ಪಿಕೊಂಡಿದೆ. ಸಮಿತಿಯ ಅಧ್ಯಕ್ಷ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ದರ ಕಡಿತದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಈ ಹಿಂದೆ ಸತತ ಎರಡು ಬಾರಿ ರೆಪೋ ದರದಲ್ಲಿಇಳಿಕೆಯನ್ನು ಮಾಡಲಾಗಿತ್ತು.ಇದೀಗ ಮೂರನೇ ಬಾರಿಯ ಜೂನ್ ನೀತಿಯಲ್ಲಿ ಬಡ್ಡಿದರಗಳಲ್ಲಿ 50 ಬೇಸಿಸ್ ಪಾಯಿಂಟ್ ಕಡಿತಕ್ಕೆ ಸಮ್ಮತಿಯನ್ನು ಸೂಚಿಸಿದ್ದು, ಶೇ. 6 ರಿಂದ ಶೇ. 5.5 ಮಟ್ಟಕ್ಕೆ ರೆಪೋ ದರವನ್ನು ಇಳಿಕೆ ಮಾಡಲಾಗಿದೆ. ಕಳೆದ ಏಪ್ರಿಲ್ ತಿಂಗಳಲದಲಿ ನಡೆದ ಎಂಪಿಸಿ ಸಭೆಯಲ್ಲಿ ಆರ್‌ಬಿಐ ರೆಪೋ ದರವನ್ನು ಶೇ. 0.25ರಷ್ಟು ಇಳಿಕೆಯಾಗಿತ್ತು.ಈ ಬಾರಿಗೆ ಅತಿ ಹೆಚ್ಚಾಗಿ ರೆಪೋ ದರ ಇಳಿಕೆಯಾಗಿದ್ದು, ಗೃಹ ಸಾಲಗಳಂತವುಗಳ ಮೇಲೆ ಬಡ್ಡಿದರವನ್ನು ಕಡಿಮೆಯಾಗಿದೆ.
ಸಾಲಗಾರರಿಗೆ RBI ಸಿಹಿಸುದ್ದಿ
ಸಾಲಗಾರರಿಗೆ RBI ಸಿಹಿಸುದ್ದಿ ನೀಡಿದ್ದು, ಸತತ ಮೂರನೇ ಬಾರಿಗೆ ಆರ್‌ಬಿಐ ಪ್ರಮುಖ ಸಾಲ ದರವನ್ನು ಕಡಿತಗೊಳಿಸಿದೆ. ಆರ್‌ಬಿಐ ರೆಪೊ ದರವನ್ನು 0.5 ರಷ್ಟು ಕಡಿಮೆ ಮಾಡಿದೆ. ಇದು ರೆಪೊ ದರದಲ್ಲಿ ಸತತ ಮೂರನೇ ಕಡಿತವಾಗಿದೆ. ರೆಪೊ ದರದಲ್ಲಿನ ಕಡಿತದಿಂದಾಗಿ, ಗೃಹ ಸಾಲಗಳು ಸೇರಿದಂತೆ ಎಲ್ಲಾ ಸಾಲಗಳು ಅಗ್ಗವಾಗಲಿದೆ. ಇಎಂಐಗಳು ಬಡ್ಡಿ ದರಗಳು ಕೂಡ ಇಳಿಕೆಯಾಗಿವೆ.
ಆರ್‌ಬಿಐ ರೆಪೋ ದರವನ್ನು ಏಕೆ ಕಡಿಮೆ ಮಾಡುತ್ತಿದೆ..?
ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳಿಂದಾಗಿ, ಹಣದುಬ್ಬರವನ್ನು ನಿಯಂತ್ರಿಸಲು ವಿಶ್ವದಾದ್ಯಂತ ಕೇಂದ್ರ ಬ್ಯಾಂಕುಗಳು ದರಗಳನ್ನು ಹೆಚ್ಚಿಸಿವೆ. ಇದರಲ್ಲಿ ಭಾರತದ ಕೇಂದ್ರ ಬ್ಯಾಂಕ್, ಆರ್‌ಬಿಐ ಕೂಡ ಸೇರಿದೆ. ರೆಪೊ ದರದ ರೂಪದಲ್ಲಿ ಹಣದುಬ್ಬರವನ್ನು ಎದುರಿಸಲು ಕೇಂದ್ರ ಬ್ಯಾಂಕ್ ಬಲವಾದ ಅಸ್ತ್ರವನ್ನು ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಹಣದುಬ್ಬರವು ನಿಯಂತ್ರಣ ತಪ್ಪಿದಾಗ ಅಥವಾ ಹೊರಬರಲು ಪ್ರಾರಂಭಿಸಿದಾಗ, ಆರ್‌ಬಿಐ ರೆಪೊ ದರಗಳನ್ನು ಬದಲಾವಣೆಯನ್ನು ಮಾಡುತ್ತದೆ.
ರಿವರ್ಸ್ ರೆಪೊ ದರದಲ್ಲಿನ ಬದಲಾವಣೆಯು ಎಷ್ಟು ಪರಿಣಾಮ ಬೀರುತ್ತದೆ?
ರೆಪೊ ದರದ ಜೊತೆಗೆ, MPC ನೀತಿಯಲ್ಲಿ ರಿವರ್ಸ್ ರೆಪೊ ದರವನ್ನು ಸಹ ಘೋಷಿಸಲಾಗಿದೆ. ರಿವರ್ಸ್ ರೆಪೊ ದರ ಎಂದರೆ ರಿಸರ್ವ್ ಬ್ಯಾಂಕ್ ಹಣವನ್ನು ಇರಿಸಿಕೊಳ್ಳಲು ಬ್ಯಾಂಕುಗಳಿಗೆ ಬಡ್ಡಿಯನ್ನು ಪಾವತಿಸುವ ದರ. ರಿವರ್ಸ್ ರೆಪೊ ದರವನ್ನು ಹೆಚ್ಚಿಸುವ ಮೂಲಕ, RBI ಮಾರುಕಟ್ಟೆಯಲ್ಲಿ ಹಣವನ್ನು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಬ್ಯಾಂಕುಗಳು RBI ಯೊಂದಿಗೆ ತಮ್ಮ ಹಿಡುವಳಿಗಳ ಮೇಲೆ ಬಡ್ಡಿಯನ್ನು ತೆಗೆದುಕೊಳ್ಳುವ ಮೂಲಕ ಇದರ ಲಾಭವನ್ನು ಪಡೆದುಕೊಳ್ಳುತ್ತವೆ. ಆರ್ಥಿಕತೆಯಲ್ಲಿ ಹಣದುಬ್ಬರದ ಸಮಯದಲ್ಲಿ ಕೇಂದ್ರ ಬ್ಯಾಂಕ್ ರಿವರ್ಸ್ ರೆಪೊ ದರವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಬ್ಯಾಂಕುಗಳು ಗ್ರಾಹಕರಿಗೆ ಸಾಲ ನೀಡಲು ಕಡಿಮೆ ಹಣವನ್ನು ಹೊಂದಿರುತ್ತವೆ.
2025ರಲ್ಲಿ ಬಡ್ಡಿ ದರ ಇಳಿಕೆ
- ಫೆಬ್ರವರಿ 2025: ಐದು ವರ್ಷಗಳ ನಂತರ ಮೊದಲ ಬಾರಿಗೆ ಬಡ್ಡಿ ದರ ಕಡಿತ ಮಾಡಿತ್ತು.
- ಏಪ್ರಿಲ್ 2025: ಎರಡನೇ ಬಾರಿಗೆ ದರ ಇಳಿಕೆ.
- ಜೂನ್ 4ರಂದು : ಮೂರನೇ ಬಾರಿಗೆ ಸತತವಾಗಿ ಬಡ್ಡಿ ದರ ಕಡಿತ
ಆರು ಸದಸ್ಯರ ಸಮಿತಿಯ ಮಹತ್ವದ ನಿರ್ಧಾರ
ಜೂನ್ 4 ರಂದು ಪ್ರಾರಂಭವಾದ ಮೂರು ದಿನಗಳ ಚರ್ಚೆಯ ನಂತರ ಇಂದು ಆರ್‌ಬಿಐ ಹಣಕಾಸು ನೀತಿ ಸಮಿತಿಯ ನಿರ್ಧಾರಗಳನ್ನು ಪ್ರಕಟಿಸಲಾಯಿತು. ಇದು 2026 ರ ಹಣಕಾಸು ವರ್ಷದ ಎರಡನೇ ದ್ವೈಮಾಸಿಕ ಹಣಕಾಸು ನೀತಿ ಘೋಷಣೆಯಾಗಿದೆ. ಸಮಿತಿಯು ಆರು ಸದಸ್ಯರನ್ನು ಒಳಗೊಂಡಿದೆ.


Click it and Unblock the Notifications