For Quick Alerts
ALLOW NOTIFICATIONS  
For Daily Alerts

ಬಜಾಜ್ ಫೈನಾನ್ಸ್ ಗೆ 2.5 ಕೋಟಿ ರು. ದಂಡ ಹಾಕಿದ ಆರ್ ಬಿಐ

By ಅನಿಲ್ ಆಚಾರ್
|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಮಂಗಳವಾರದಂದು (ಜನವರಿ 5, 2021) ನಾನ್ ಬ್ಯಾಂಕ್ ಫೈನಾನ್ಷಿಯರ್ ಬಜಾಜ್ ಫೈನಾನ್ಸ್ ಗೆ 2.5 ಕೋಟಿ ರುಪಾಯಿ ದಂಡ ವಿಧಿಸಿದೆ. ಸಾಲ ಪಡೆದವರಿಂದ ಹಣವನ್ನು ವಸೂಲಿ ಮಾಡುವಾಗ ರೆಕವರಿ ಏಜೆಂಟ್ ಗಳು ಶೋಷಣೆ ಮಾಡಿಲ್ಲ ಎಂಬುದನ್ನು ಸಾಬೀತು ಮಾಡುವುದಕ್ಕೆ ವಿಫಲವಾದ ಹಿನ್ನೆಲೆಯಲ್ಲಿ ದಂಡ ಹಾಕಲಾಗಿದೆ.

ಎನ್ ಬಿಎಫ್ ಸಿ ಬಜಾಜ್ ಫೈನಾನ್ಸ್ ವರದಿ ಮಾಡಿರುವಂತೆ, ಸೆಪ್ಟೆಂಬರ್ 30, 2020ಕ್ಕೆ ಅಸೆಟ್ಸ್ ಅಂಡರ್ ಮ್ಯಾನೇಜ್ ಮೆಂಟ್ (AUM) 1.04 ಲಕ್ಷ ಕೋಟಿ ರುಪಾಯಿ ಇದೆ. ಕೆಲವು ಆಪ್ ಆಧಾರಿತ ಸಾಲ ನೀಡುವ ಕಂಪೆನಿಗಳ ವಸೂಲಾತಿ ವಿಧಾನದ ಬಗ್ಗೆ ಗ್ರಾಹಕರು ಗಂಭೀರ ಸ್ವರೂಪದ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಆರ್ ಬಿಐ ಕ್ರಮ ಮಹತ್ವ ಪಡೆದುಕೊಂಡಿದೆ.

ಎಚ್ ಡಿಎಫ್ ಸಿ ಬ್ಯಾಂಕ್ ಗೆ ರಿಸರ್ವ್ ಬ್ಯಾಂಕ್ ನಿಂದ 10 ಲಕ್ಷ ರುಪಾಯಿ ದಂಡಎಚ್ ಡಿಎಫ್ ಸಿ ಬ್ಯಾಂಕ್ ಗೆ ರಿಸರ್ವ್ ಬ್ಯಾಂಕ್ ನಿಂದ 10 ಲಕ್ಷ ರುಪಾಯಿ ದಂಡ

ಇಂಥ ಬಹುತೇಕ ಸಂಸ್ಥೆಗಳು ರಿಸರ್ವ್ ಬ್ಯಾಂಕ್ ನಿಯಂತ್ರಣದಲ್ಲಿ ಬರುವುದಿಲ್ಲ. ಆದರೆ ಅದರ ನಿಯಂತ್ರಣಕ್ಕೆ ಒಳಪಡುವ ಬಜಾಜ್ ಫೈನಾನ್ಸ್ ಬಗ್ಗೆ ತೆಗೆದುಕೊಂಡಿರುವ ಕ್ರಮವು ಉಳಿದವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಆದರೆ ಇಂಥ ಅಪ್ಲಿಕೇಷನ್ ಗಳನ್ನು ನಿಯಂತ್ರಿಸುವುದು ಅತಿ ದೊಡ್ಡ ಸಮಸ್ಯೆಯಾಗಿದೆ. ಏಕೆಂದರೆ, ಈ ಕಂಪೆನಿಗಳು ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪೆನೀಸ್ (ಎನ್ ಬಿಎಫ್ ಸಿಗಳು) ಎಂದು ನೋಂದಣಿ ಆಗಿರುವುದಿಲ್ಲ.

ಬಜಾಜ್ ಫೈನಾನ್ಸ್ ಗೆ 2.5 ಕೋಟಿ ರು. ದಂಡ ಹಾಕಿದ ಆರ್ ಬಿಐ

ಆದರೆ, ವಿವಿಧ ರಾಜ್ಯ ಸರ್ಕಾರಗಳ ಹಣ ನೀಡುವ ಕಾಯ್ದೆಯಡಿ ನೋಂದಣಿ ಆಗಿರುತ್ತದೆ. ಇದು ನಿಯಂತ್ರಕರಿಗೆ ಸವಾಲಾಗಿ ಪರಿಣಮಿಸುತ್ತಿದೆ. ಇನ್ನು ಈಗಿನ ಕ್ರಮದ ಬಗ್ಗೆ ತಿಳಿಸಿರುವ ಆರ್ ಬಿಐ, ಕಂಪೆನಿಯ ವಸೂಲಾತಿ ಮತ್ತು ಸಂಗ್ರಹ ವಿಧಾನದ ಬಗ್ಗೆ ಪದೇಪದೇ ದೂರುಗಳು ಬಂದವು. ಇನ್ನು ಆರ್ ಬಿಐ ತಿಳಿಸಿರುವಂತೆ, ಕಂಪೆನಿಗೆ ಏಕೆ ದಂಡ ವಿಧಿಸಬಾರದು ಎಂದು ಶೋಕಾಸ್ ನೋಟಿಸ್ ಸಹ ನೀಡಲಾಗಿತ್ತು.

English summary

RBI Penalises Bajaj Finance For Harassing Customers During Loan Recovery

On the basis of customer harassment complaint while loan recovery by Bajaj Finance, RBI imposed Rs 2.5 crore fine.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X