ಅಲ್ಪಾವಧಿ ಬೆಳೆ ಸಾಲ ಪಡೆದ ರೈತರಿಗೆ ಆರ್ ಬಿಐನಿಂದ ಮುಖ್ಯ ಸುದ್ದಿ

ಅಲ್ಪಾವಧಿ ಬೆಳೆ ಸಾಲದ ಮೇಲಿನ 'ಪ್ರಾಮಾಣಿಕ ಮರುಪಾವತಿ ಪ್ರೋತ್ಸಾಹಧನವನ್ನು' (PRI) 2018-19, 2019- 20ರ ಸಾಲಿಗೆ ಅವಧಿ ವಿಸ್ತರಣೆ ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಕೊರೊನಾ ಲಾಕ್ ಡೌನ್ ಇರುವ ಕಾರಣಕ್ಕೆ ಈ ಘೋಷಣೆ ಮಾಡಲಾಗಿದೆ.

ಕೊರೊನಾ ಹಬ್ಬದಂತೆ ತಡೆಯಬೇಕು ಎಂದು ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಇಂಥ ಸನ್ನಿವೇಶದಲ್ಲಿ ರೈತರಿಗೆ ಬ್ಯಾಂಕ್ ನ ಶಾಖೆಗೆ ತೆರಳಿ ಅಲ್ಪಾವಧಿ ಸಾಲದ ಬಾಕಿಯನ್ನು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಿಸರ್ವ್ ಬ್ಯಾಂಕ್ ನ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೊರೊನಾ ಲಾಕ್ ಡೌನ್ ನಲ್ಲಿ ಘೋಷಿಸಲಾದ ಪ್ಯಾಕೇಜ್ ಪ್ರಕಾರ, ಮಾರ್ಚ್ 1, 2020 ಹಾಗೂ ಮೇ 31, 2020ರ ಮಧ್ಯೆ ಕಟ್ಟಬೇಕಾದ ಸಾಲದ ಕಂತುಗಳಿಗೆ ವಿನಾಯಿತಿ ನೀಡಲಾಗಿದೆ. ಆ ಸಾಲದ ಕಂತುಗಳಲ್ಲಿ ಅಲ್ಪಾವಧಿ ಬೆಳೆ ಸಾಲವೂ ಒಳಗೊಂಡಿದೆ. ಅದರ ಪ್ರಕಾರ, ರೈತರು ದಂಡವಾಗಿ ಬಡ್ಡಿ ಕಟ್ಟುವ ಅಗತ್ಯ ಇಲ್ಲ.

ಅಲ್ಪಾವಧಿ ಬೆಳೆ ಸಾಲ ಪಡೆದ ರೈತರಿಗೆ ಆರ್ ಬಿಐನಿಂದ ಮುಖ್ಯ ಸುದ್ದಿ

ಜತೆಗೆ ಬಡ್ಡಿ ರಿಯಾಯಿತಿ ಯೋಜನೆ ಕೂಡ ಸಿಗಲಿದೆ. ಈ ಅವಧಿಯಲ್ಲಿ ಬಡ್ಡಿ ರಿಯಾಯಿತಿ 2% ಹಾಗೂ ಪ್ರಾಮಾಣಿಕ ಮರುಪಾವತಿ ಪ್ರೋತ್ಸಾಹ ಧನ 3% ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. 3 ಲಕ್ಷ ರುಪಾಯಿಯೊಳಗೆ ಬೆಳೆ ಸಾಲ ಪಡೆದ ಕೃಷಿಕರಿಗೆ ಈ ಯೋಜನೆ ಅನ್ವಯ ಮಾಡುವಂತೆ ಸರ್ಕಾರ ಸೂಚಿಸಿದೆ. ಉಳಿದ ಯಾವ ಷರತ್ತು, ನಿಬಂಧನೆಗಳಲ್ಲೂ ಬದಲಾವಣೆ ಮಾಡಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+