For Quick Alerts
ALLOW NOTIFICATIONS  
For Daily Alerts

ದೇಶದಲ್ಲಿ ಬರಲಿವೆ 8 ಹೊಸ ಬ್ಯಾಂಕುಗಳು: ಅರ್ಜಿ ಸ್ವೀಕರಿಸಿದ ಆರ್‌ಬಿಐ

|

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ದೊಡ್ಡ ಮತ್ತು ಸಣ್ಣ ಹಣಕಾಸು ಬ್ಯಾಂಕುಗಳನ್ನು ತೆರೆಯಲು 8 ಅರ್ಜಿಗಳನ್ನು ಸ್ವೀಕರಿಸಿರುವುದಾಗಿ ಬಹಿರಂಗಪಡಿಸಿದೆ. ಈ ಮೂಲಕ ದೇಶದಲ್ಲಿ ಎಂಟು ಹೊಸ ದೊಡ್ಡ ಮತ್ತು ಸಣ್ಣ ಬ್ಯಾಂಕುಗಳು ತೆರೆಯಲಿವೆ.

ಭಾರತದಿಂದ ಹೊರನಡೆಯಲು ಸಿಟಿಬ್ಯಾಂಕ್ ನಿರ್ಧಾರಭಾರತದಿಂದ ಹೊರನಡೆಯಲು ಸಿಟಿಬ್ಯಾಂಕ್ ನಿರ್ಧಾರ

ಯುಎಇ ಎಕ್ಸ್‌ಚೇಂಜ್ ಮತ್ತು ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್, ದಿ ರಿಪ್ಯಾಟ್ರಿಯೇಟ್ಸ್ ಕೋಆಪರೇಟಿವ್ ಫೈನಾನ್ಸ್ ಅಂಡ್ ಡೆವಲಪ್ಮೆಂಟ್ ಬ್ಯಾಂಕ್ ಲಿಮಿಟೆಡ್ (ರೆಪ್ಕೊ ಬ್ಯಾಂಕ್), ಚೈತನ್ಯ ಇಂಡಿಯನ್ ಫಿನ್ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್ ಮತ್ತು ಪಂಕಜ್ ವೈಶ್ಯ ಮತ್ತು ಇತರರು ಜಾಗತಿಕ ಬ್ಯಾಂಕ್ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ದೇಶದಲ್ಲಿ ಬರಲಿವೆ 8 ಹೊಸ ಬ್ಯಾಂಕುಗಳು: ಅರ್ಜಿ ಸ್ವೀಕರಿಸಿದ ಆರ್‌ಬಿಐ

ಫ್ಲಿಪ್‌ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್ ಅವರು 2019 ರ ಸೆಪ್ಟೆಂಬರ್‌ನಲ್ಲಿ 739 ಕೋಟಿ ರೂ.ಗಳ ಹೂಡಿಕೆ ಬದ್ಧತೆಯೊಂದಿಗೆ ಚೈತನ್ಯ ಇಂಡಿಯನ್ ಫಿನ್ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಬಹುಪಾಲು ಪಾಲನ್ನು ಪಡೆದರು. ಸದ್ಯ ಬನ್ಸಾಲ್ ಚೈತನ್ಯದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ).

ಇನ್ನು ಸಣ್ಣ ಹಣಕಾಸು ಬ್ಯಾಂಕ್‌ಗಳ ಅಡಿಯಲ್ಲಿ ವಿಸಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಕ್ಯಾಲಿಕಟ್ ಸಿಟಿ ಸರ್ವಿಸ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಅಖಿಲ್ ಕುಮಾರ್ ಗುಪ್ತಾ ಮತ್ತು ದ್ವಾರ ಕ್ಷತ್ರೀಯ ಗ್ರಾಮೀಣ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ ಅರ್ಜಿ ಸಲ್ಲಿಸಿವೆ.

ಖಾಸಗಿ ವಲಯದ ಸಾರ್ವತ್ರಿಕ ಬ್ಯಾಂಕುಗಳು ಮತ್ತು ಎಸ್‌ಎಫ್‌ಬಿಗಳಿಗೆ ಪರವಾನಗಿ ನೀಡುವ ಮಾರ್ಗಸೂಚಿಗಳನ್ನು ಕ್ರಮವಾಗಿ ಆಗಸ್ಟ್ 1, 2016 ಮತ್ತು ಡಿಸೆಂಬರ್ 5, 2019 ರಂದು ಜಾರಿಗೆ ತರಲಾಯಿತು.

English summary

RBI Receives 8 Application For Setting Up Banks Under On Tap Licensing

The RBI on Thursday said it has received four applications each under the guidelines for ‘on tap’ licensing of universal banks and small finance banks.
Story first published: Friday, April 16, 2021, 13:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X