ಸಿಹಿಸುದ್ದಿ! ಚಿಂತೆಬೇಡ.. ನೀವು ಸಾಲ ಮರುಪಾವತಿಸಿಲ್ವಾ? RBI ಕೊಟ್ಟ ಗುಡ್ ನ್ಯೂಸ್ ಇಲ್ಲಿದೆ

ನೀವು ಸಾಲ ಮರುಪಾವತಿಸಿಲ್ಲವೇ? ಹಾಗಿದ್ರೆ, ಆರ್‌ಬಿಐ ನಿಮಗೆ ಗುಡ್ ನ್ಯೂಸ್ ಕೊಟ್ಟಿದೆ. ಆರ್‌ಬಿಐ (RBI) ಹೊಸ ನಿಯಮದ ಪ್ರಕಾರ, ಬ್ಯಾಂಕುಗಳು ಸಿಬಿಲ್‌ಗೆ ಮರುಪಾವತಿಸದ ಗ್ರಾಹಕರ ಪಟ್ಟಿ ಕಳಿಸುವ ಮೊದಲು ಗ್ರಾಹಕರಿಗೆ ತಿಳಿಸಬೇಕಿದೆ. ಈ ಕಾರಣದಿಂದ, ನೀವು ನಿಮ್ಮ ಸಿಬಿಲ್ ಸ್ಕೋರ್ ಹಾಳಾಗುವ ಮುನ್ನವೇ ಎಚ್ಚರಿಕೆ ವಹಿಸಬಹುದಾಗಿದೆ. ಹಾಗೆಯೇ, ಯಾವುದೇ ಸಂಸ್ಥೆ ಸಿಬಿಲ್ ಸ್ಕೋರ್ ಪರಿಶೀಲಿಸಿದಾಗ, ಆ ಮಾಹಿತಿಯನ್ನು ನಿಮಗೆ ಇಮೇಲ್ ಮೂಲಕ ಮಾಹಿತಿ ನೀಡಬೇಕು. ನೀವು ಪ್ರತಿ ವರ್ಷ ಒಂದು ಸಂಪೂರ್ಣ ಕ್ರೆಡಿಟ್ ವರದಿಯನ್ನು ಉಚಿತವಾಗಿ ಪಡೆಯಬಹುದಾಗಿದೆ.

ಗ್ರಾಹಕರಿಗೆ ಅನುಕೂಲವಾಗುವ ಈ ಹೊಸ ನಿಯಮಗಳು 2024 ರಿಂದ (ಏಪ್ರಿಲ್ 26) ಜಾರಿಗೆ ಬಂದಿದೆ. ನೀವು ಸಿಬಿಲ್ ಸ್ಕೋರ್ ಬಗ್ಗೆ ದೂರು ನೀಡಿದರೆ, ಸಂಸ್ಥೆಯು ತಿಂಗಳ (30) ಒಳಗೆ ಸಮಸ್ಯೆ ಪರಿಹರಿಸಬೇಕಿದೆ. ಇಲ್ಲದೆ ಹೋದರೆ, ಸಂಸ್ಥೆಯು ಪ್ರತಿ ದಿನಕ್ಕೆ 100 ರೂ. ದಂಡ ಪಾವರಿಸಬೇಕಿದೆ. ಹಾಗೂ ನಿಮಗೆ ಸಾಲ ಬೇಕು ಅಂದ್ರೆ ನಿಮ್ಮ ಕ್ರೆಡಿಟ್‌ ಹಿಸ್ಟರಿ ಕ್ಲೀನಾಗಿ ಅದನ್ನು ಕಾಪಾಡಿಕೊಂಡು ಬರಬೇಕು.ಬ್ಯಾಂಕ್‌ಗಳು ಕ್ರೆಡಿಟ್‌ ಸ್ಕೋರ್‌ ಅಥವಾ ಸಿಬಿಲ್‌ ಸ್ಕೋರ್‌ ಆಧರಿಸಿ ಸಾಲಗಳನ್ನು ನಿಮಗೆ ನೀಡಲಾಗುತ್ತದೆ.

ಸಿಹಿಸುದ್ದಿ! ನೀವು ಸಾಲ ಮರುಪಾವತಿಸಿಲ್ವಾ? ಚಿಂತೆಬೇಡ.. ಹೀಗೆ ಮಾಡಿ

ಸಿಬಿಲ್ ಸ್ಕೋರ್

ಗ್ರಾಹಕರ ಕ್ರೆಡಿಟ್ ರೇಟಿಂಗ್ ಸುಧಾರಿಸಲು ಬೇಕಾದ ಮಾಹಿತಿ ನೀಡಬೇಕೆಂದು RBI ಸೂಚಿಸಿದೆ. CRISIL, CIBIL, American Express ಇತ್ಯಾದಿ ಕ್ರೆಡಿಟ್ ಬ್ಯೂರೋಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಮಾಹಿತಿಯನ್ನು ಸಂದೇಶದ ಮೂಲಕ ಅಥವಾ ಇಮೇಲ್ ಮೂಲಕ ಮಾಹಿತಿ ನಿಮಗೆ ನೀಡಬಹುದು. ಇನ್ನೂ ಕ್ರೆಡಿಟ್ ಸ್ಕೋರ್ ಗೆ ಸಂಬಂಧಿಸಿದ ಹಲವು ದೂರುಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಇಂಡಿಯಾ ಈ ರೀತಿಯ ಕ್ರಮವನ್ನು ಕೈಗೊಂಡಿದೆ.

ಸಿಬಿಲ್ ಸ್ಕೋರ್ RBI ಸಲಹೆಗಳು

ಆರ್ ಬಿಐ ಹೇಳಿರುವಂತೆ ಸಾಲ ಸಂಸ್ಥೆಗಳು ಗ್ರಾಹಕರ ಯಾವುದೇ ಕೋರಿಕೆಯನ್ನು ತಿರಸ್ಕರಿಸಲು ಕಾರಣವನ್ನು ಸ್ಪಷ್ಟವಾಗಿ ತಿಳಿಸಬೇಕೆಂದು ಸಲಹೆಯನ್ನು ನೀಡಿದೆ. ತಮ್ಮ ಕೋರಿಕೆಗಳನ್ನು ಸಾಲಸಂಸ್ಥೆಗಳು ಯಾಕೆ ತಿರಸ್ಕಾರ ಮಾಡುತ್ತವೆ ಎಂಬ ಮಾಹಿತಿ ಗ್ರಾಹಕರಿಗೆ ತಿಳಿದುಕೊಂಡರೆ ಅವರಿಗೆ ತಮ್ಮ ಸಿಬಿಲ್ ಸ್ಕೋರ್ ಹೇಗೆ ಸುಧಾರಿಸುವುದು ಎಂಬುವುದು ಅರ್ಥವಾಗುತ್ತದೆ.

ಬ್ಯಾಂಕ್ ಮೂಲಕ ಪಡೆದ ಸಾಲಗಳು

ತಮ್ಮ ಸಂಪೂರ್ಣ ಕ್ರೆಡಿಟ್ ವರದಿಯನ್ನು ವರ್ಷಕ್ಕೊಮ್ಮೆ ಉಚಿತವಾಗಿ ನೀಡಬೇಕೆಂದುಸಾಲ ಸಂಸ್ಥೆಗಳಿಗೆ ಭಾರತೀಯ ರಿಸರ್ವ ಬ್ಯಾಂಕ್ ಹೇಳಿದೆ. ಎಲ್ಲಾ ಮಾಹಿತಿಗಳನ್ನು ಸಾಲ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ನಲ್ಲಿ ಸೌಲಭ್ಯಗಳನ್ನು ಒದಗಿಸಬೇಕು. ಹೀಗಾಗಿ ಗ್ರಾಹಕರು ತಮ್ಮ ಉಚಿತ ಕ್ರೆಡಿಟ್ ವರದಿ ಸುಲಭವಾಗಿ ನೋಡಿಕೊಳ್ಳಬಹುದು. ಇದರ ಮೂಲಕ ಗ್ರಾಹಕರಿಗೆ ಅವರ ಸಂಪೂರ್ಣ ಕ್ರೆಡಿಟ್ ಇತಿಹಾಸ ಮತ್ತು ಸಿಬಿಲ್ ಸ್ಕೋರ್ ವರ್ಷಕ್ಕೊಮ್ಮೆ ನೋಡಲು ಅವಕಾಶ ಸಹ ನೀಡಲಾಗುತ್ತದೆ. ಇದಕ್ಕೆ ಅನುಗುಣವಾಗಿ ಯಾವುದೇ ಹಣಕಾಸಿನ ನಿರ್ಧಾರಗಳನ್ನು ನಿರ್ಧಾರಗಳನ್ನು ತೆಗೆದುಕೊಳ್ಳವ ಮುಂಚಿತವಾಗಿ ಇದು ನಿಮಗೆ ಸ್ವಷ್ಟ ಮಾಹಿತಿಯನ್ನು ನೀಡುತ್ತದೆ.

ಉತ್ತಮ ಸಿಬಿಲ್ ಸ್ಕೋರ್

ಗ್ರಾಹಕರಿಗೆ ಸಾಲ ನೀಡುವ ಯಾವುದೇ ಸಂಸ್ಥೆಗಳು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂದೇಶದ ಮೂಲಕ ಅಥವಾ ಇಮೇಲ್ ಮಾಡುವ ಮೂಲಕ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಹಾಗೂ ಯಾವುದೇ ರೀತಿಯ೦ ಸಾಲಗಳನ್ನು ನೀಡುವ ಮೊದಲು ಬ್ಯಾಂಕುಗಳು ಮತ್ತು ಸಾಲ ನೀಡುವ ಸಂಸ್ಥೆಗಳು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತಾರೆ.

ಸಿಬಿಲ್ ಸ್ಕೋರ್ ದೂರುಗಳು

ಕ್ರೆಡಿಟ್ ಮಾಹಿತಿ ಸಂಸ್ಥೆ 30 ದಿನಗಳಲ್ಲಿ ಗ್ರಾಹಕರ ದೂರು ಪರಿಹರಿಸಬೇಕು. ಇಲ್ಲವಾದಲ್ಲಿ ಅವರು ದಿನಕ್ಕೆ 100 ರೂಪಾಯಿ ದಂಡ ಪಾವತಿಸಬೇಕು. ಅಂದರೆ ಹೆಚ್ಚು ಕಾಲ ತೆಗೆದುಕೊಂಡರೆ, ಹೆಚ್ಚು ದಂಡ ಕಟ್ಟಬೇಕಾಗುತ್ತದೆ. ಸಾಲ ನೀಡುವ ಸಂಸ್ಥೆಗಳಿಗೆ 21 ದಿನಗಳು ಮತ್ತು ಕ್ರೆಡಿಟ್ ಬ್ಯೂರೋಗಳಿಗೆ 9 ದಿನಗಳನ್ನು ನೀಡಲಾಗುತ್ತದೆ. 21 ದಿನಗಳಲ್ಲಿ ಕ್ರೆಡಿಟ್ ಬ್ಯೂರೋಗೆ ಮಾಹಿತಿ ನೀಡದಿದ್ದರೆ, ಬ್ಯಾಂಕಿಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ, ಬ್ಯಾಂಕಿಗೆ ಮಾಹಿತಿ ನೀಡಿ 9 ದಿನಗಳ ಬಳಿಕವೂ ದೂರು ಬಗೆಹರಿಸದಿದ್ದರೆ, ಕ್ರೆಡಿಟ್ ಬ್ಯೂರೋ ದಂಡ ಕಟ್ಟಬೇಕು. ಈ ವ್ಯವಸ್ಥೆಯಿಂದ ಗ್ರಾಹಕರ ದೂರುಗಳು ಬೇಗ ಪರಿಹಾರ ಆಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+