ಫೆಬ್ರವರಿ 7,2025ರಂದು RBI (ಭಾರತೀಯ ರಿಸರ್ವ್ ಬ್ಯಾಂಕ್) 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರೆಪೋ ದರ ಇಳಿಸಿದೆ. ಇದರ ಪರಿಣಾಮ ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಎಫ್‌ಡಿ ಖಾತೆಗಳ ಮೇಲಿನ ಬಡ್ಡಿಯನ್ನು ಕಡಿತಗೊಳಿಸಿದೆ. ಸುಮಾರು 6.50% ನಿಂದ 6.25%ಗೆ ರೆಪೋ ದರ ಇಳಿದಿದ್ದು, ಎಫ್‌ಡಿ ಖಾತೆಗಳ ಮೇಲಿನ ಬಡ್ಡಿ ದರಕ್ಕೆ ಎಫೆಕ್ಟ್ ಆಗಿದೆ. ರೆಪೋ ದರ ಇಳಿಕೆಯ ಅನುಸಾರವಾಗಿ ಎಫ್‌ಡಿ ಮೇಲಿನ ಬಡ್ಡಿ ದರ ಕಡಿತಗೊಳಿಸಿರುವ ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸದ್ಯ ಸಾಮಾನ್ಯ ವರ್ಗದ ಜನರಿಗೆ ಎಫ್‌ಡಿಯಿಂದ 3.50% ಇಂದ 8.55%ವರೆಗೂ ಬಡ್ಡಿಯನ್ನು ನೀಡುತ್ತಿದೆ.

ಮೊದಲು ಈ ಬ್ಯಾಂಕ್ ಸಾಮಾನ್ಯ ನಾಗರಿಕರ ಎಫ್‌ಡಿ ಖಾತೆ ಮೇಲೆ 8.8% ವರೆಗೂ ಬಡ್ಡಿ ನೀಡುತ್ತಿತ್ತು. ಹಿರಿಯ ನಾಗರಿಕರ ಎಫ್‌ಡಿ ಖಾತೆ ಮೇಲೆ 9.3%ವರೆಗೆ ಬಡ್ಡಿ ದರ ನೀಡುತ್ತಿತ್ತು. ಆದರೆ ರೆಪೋ ದರ ಇಳಿಕೆಯ ನಂತರ ಬಡ್ಡಿ ದರ ನೀಡುವುದನ್ನು ಕೂಡ ಕಡಿಮೆ ಮಾಡಿದ್ದು, ಅದು ನಿನ್ನೆಯಿಂದ ( ಫೆಬ್ರವರಿ 18,2025) ಜಾರಿಗೆ ಬಂದಿದೆ.
ಅಂದಹಾಗೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಈ ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 25 ಬೇಸಿಸ್ ಪಾಯಿಂಟ್‌ಗಳಿಂದ ತನ್ನ ಬಡ್ಡಿ ದರವನ್ನು ಕಡಿಮೆ ಮಾಡಿದೆ. ಹಿರಿಯ ನಾಗರಿಕರಿಗೆ 18 ತಿಂಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ ಹೆಚ್ಚಿನ ಬಡ್ಡಿ ದರವನ್ನು ಇಳಿಸಿದೆ. ಅಂದರೆ ಸುಮಾರು 9.30% ರಿಂದ 9.05% ಕ್ಕೆ ಬಡ್ಡಿ ದರವನ್ನು ಇಳಿಸಿದೆ. ಅದೇ ರೀತಿ ಸಾಮಾನ್ಯ ನಾಗರಿಕರಿಗೆ ಎಫ್‌ಡಿಗಳ ಮೇಲೆ ಅತ್ಯಧಿಕ ದರವನ್ನು ಇಳಿಸಿದೆ. ಅಂದರೆ ಸುಮಾರು ದರವನ್ನು 8.80% ರಿಂದ 8.55% ಕ್ಕೆ ಇಳಿಸಿದೆ.
ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಇತ್ತೀಚಿನ ಬಡ್ಡಿ ದರಗಳು:
ಸುಮಾರು 15 ರಿಂದ 29 ದಿನಗಳ ಅವಧಿಯ ಎಫ್‌ಡಿ ಖಾತೆಗಳ ಮೇಲೆ ಸಾಮಾನ್ಯ ನಾಗರಿಕರಿಗೆ, ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 3.75% ಬಡ್ಡಿದರವನ್ನು ನೀಡಿದರೆ, ಹಿರಿಯ ನಾಗರಿಕರಿಗೆ 4.25% ಬಡ್ಡಿ ದರ ನೀಡುತ್ತವೆ. 30 ರಿಂದ 90 ದಿನಗಳ ಅವಧಿಯ ಎಫ್‌ಡಿ ಖಾತೆಗಳ ಮೇಲೆ ಸಾಮಾನ್ಯ ನಾಗರಿಕರಿಗೆ 4.25% ಹಿರಿಯ ನಾಗರಿಕರಿಗೆ 4.75% ಬಡ್ಡಿ ದರ ನೀಡುತ್ತವೆ. ಮತ್ತು 91 ರಿಂದ 180 ದಿನಗಳ ಅವಧಿಗೆ ಸಾಮಾನ್ಯ ನಾಗರಿಕರಿಗೆ 4.75% ಮತ್ತು ಹಿರಿಯ ನಾಗರಿಕರಿಗೆ 5.25% ಬಡ್ಡಿಯನ್ನು ನೀಡುತ್ತದೆ.
ಇನ್ನು 6 ತಿಂಗಳಿಂದ 9 ತಿಂಗಳೊಳಗೆ ಸಾಮಾನ್ಯರಿಗೆ 6.00%, ಹಿರಿಯ ನಾಗರಿಕರಿಗೆ 6.50% ಬಡ್ಡಿ ದರವನ್ನು ನೀಡಲಾಗುತ್ತದೆ. 9 ತಿಂಗಳಿಂದ 12 ತಿಂಗಳೊಳಗಿನ ಎಫ್‌ಡಿಗೂ ಸಾಮಾನ್ಯರಿಗೆ 6.00%, ಹಿರಿಯ ನಾಗರಿಕರಿಗೆ 6.50% ಬಡ್ಡಿ ದರವನ್ನು ನೀಡಲಾಗುತ್ತದೆ. 12ನೇ ತಿಂಗಳಿನಿಂದ 18 ತಿಂಗಳವರೆಗೂ ಸಾಮಾನ್ಯರಿಗೆ 8.55% ಮತ್ತು ಹಿರಿಯ ನಾಗರಿಕರಿಗೆ 9.05% ಬಡ್ಡಿ ನೀಡಲಾಗುತ್ತದೆ. 18 ತಿಂಗಳಿಂದ 24 ತಿಂಗಳವರೆಗೆ ಸಾಮಾನ್ಯ ನಾಗರಿಕರಿಗೆ 8.30% ಮತ್ತು ಹಿರಿಯ ನಾಗರಿಕರಿಗೆ 8.80% ಬಡ್ಡಿ ನೀಡಲಾಗುತ್ತದೆ. 24 ತಿಂಗಳ ಮೊದಲನೇ ದಿನದಿಂದ 36ನೇ ತಿಂಗಳವರೆಗೂ ಸಾಮಾನ್ಯ ನಾಗರಿಕರಿಗೆ 7.50% ಮತ್ತು ಹಿರಿಯ ನಾಗರಿಕರಿಗೆ 8.00% ಬಡ್ಡಿ ನೀಡಲಾಗುತ್ತದೆ.
More From GoodReturns

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ



Click it and Unblock the Notifications