2021-22ರ ಹಣಕಾಸು ವರ್ಷದಲ್ಲಿ ಭಾರತದ ನೈಜ ಜಿಡಿಪಿ ಬೆಳವಣಿಗೆ 9.5% ಎಂದು ಆರ್‌ಬಿಐ ಅಂದಾಜಿಸಿದೆ. ಇದು Q2 ರಲ್ಲಿ 7.9%, Q3 ರಲ್ಲಿ 6.8% ಮತ್ತು 2021-22 ರ Q4 ನಲ್ಲಿ 6.1% ಅನ್ನು ಒಳಗೊಂಡಿದೆ. 2022-23ರ ಕ್ಯೂ 1 ರ ನೈಜ ಜಿಡಿಪಿ ಬೆಳವಣಿಗೆಯನ್ನು 17.2% ಎಂದು ಅಂದಾಜಿಸಲಾಗಿದೆ ಎಂದು ಶುಕ್ರವಾರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಭಾರತದ ಆರ್ಥಿಕತೆಯು 20.1% ರಷ್ಟು ಬೆಳವಣಿಗೆಯಾಗಿದೆ. ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ತೀವ್ರ ಏರಿಕೆಯು ಕಡಿಮೆ ಮೂಲ ಪರಿಣಾಮದಿಂದ ನೆರವಾಯಿತು. ಏಕೆಂದರೆ ವರ್ಷದ ಹಿಂದಿನ ಅವಧಿಯಲ್ಲಿ ಆರ್ಥಿಕತೆಯು ದಾಖಲೆಯ 24.4% ರಷ್ಟು ಸಂಕುಚಿತಗೊಂಡಿದೆ.
ಭಾರತದ ಜಿಡಿಪಿಯನ್ನ ಶೇ. 8.3 ಅಂದಾಜಿಸಿರುವ ವಿಶ್ವ ಬ್ಯಾಂಕ್
2021-22 ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಆರ್‌ಬಿಐ 9.5% ಎಂದು ಅಂದಾಜಿಸಿದ್ರೆ, ವಿಶ್ವ ಬ್ಯಾಂಕ್ ಶೇಕಡಾ 8.3ರಷ್ಟು ಉಳಿಸಿಕೊಂಡಿದೆ ಮತ್ತು ಫಿಚ್ ಪ್ರೊಜೆಕ್ಷನ್ ಅನ್ನು ಶೇಕಡ 8.3ಕ್ಕೆ ಇಳಿಸಿದೆ.
ಬಡ್ಡಿದರ ಯಥಾಸ್ಥಿತಿ ಉಳಿದಿದೆ
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಿಶೀಲನೆಯ ಫಲಿತಾಂಶವನ್ನು ಇಂದು ಪ್ರಕಟಿಸಲಾಯಿತು.
ಆರ್ಥಿಕತೆಯಲ್ಲಿ ಹಣದುಬ್ಬರದ ಒತ್ತಡ ಮತ್ತು ರೂಪಾಯಿ ಮೌಲ್ಯ ಕುಸಿತದ ಹೊರತಾಗಿಯೂ ಆರ್‌ಬಿಐ ತನ್ನ ಎಂಪಿಸಿ ಮೂರು ದಿನಗಳ ಸಭೆಯ ನಂತರ ಬಡ್ಡಿದರಗಳನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ.
ಚಿಲ್ಲರೆ ಹಣದುಬ್ಬರ 5.3%ಗೆ ಇಳಿಕೆ
ಪ್ರಸಕ್ತ ಹಣಕಾಸು ವರ್ಷ 2021-22 ಕ್ಕೆ ಸಿಪಿಐ ಹಣದುಬ್ಬರವನ್ನು ಶೇಕಡಾ 5.3 ಕ್ಕೆ ಅಂದಾಜಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಘೋಷಿಸಿದರು. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ, ಹಣದುಬ್ಬರವು 5.1 ಶೇಕಡಾ, ಮೂರನೇ ತ್ರೈಮಾಸಿಕದಲ್ಲಿ 4.5 ಶೇಕಡಾ ಮತ್ತು ಹಣಕಾಸಿನ ನಾಲ್ಕನೇ ತ್ರೈಮಾಸಿಕದಲ್ಲಿ 5.8 ಶೇಕಡಾದಲ್ಲಿ ಕಂಡುಬರುತ್ತದೆ.
ಈ ಮೂಲಕ ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರವು ಈ ಹಿಂದಿನ ಶೇಕಡಾ 5.7ರಿಂದ 5.3%ಕ್ಕೆ ಇಳಿದಿದೆ. ಆದರೆ ಡಬ್ಲ್ಯೂಪಿಐ ಆಧಾರಿತ ಹಣದುಬ್ಬರವು ಆಗಸ್ಟ್‌ನಲ್ಲಿ 11.39 ಪ್ರತಿಶತಕ್ಕೆ ಏರಿದೆ.
ಆರ್ಥಿಕ ಉತ್ಪಾದನೆ ಮಟ್ಟ ಕುಸಿತ
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಆರ್ಥಿಕ ಉತ್ಪಾದನೆಯು ಕೋವಿಡ್ ಪೂರ್ವ ಮಟ್ಟಕ್ಕಿಂತ ಕೆಳಗಿದೆ ಎಂದು ಘೋಷಿಸಿದರು. ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಯು ವೇಗವನ್ನು ಪಡೆದುಕೊಂಡಿದೆ ಎಂದು ಹೆಚ್ಚಿನ ಆವರ್ತನ ಸೂಚಕಗಳು ತೋರಿಸುತ್ತವೆ ಎಂದು ಅವರು ಹೇಳಿದರು.
ಐಎಂಪಿಎಸ್ ಮಿತಿ 5 ಲಕ್ಷ ರೂಪಾಯಿಗೆ ಏರಿಕೆ
ಪ್ರತಿ ವಹಿವಾಟಿನ ಐಎಂಪಿಎಸ್ ಮಿತಿಯನ್ನು ಪ್ರಸ್ತುತ ಇರುವ 2 ಲಕ್ಷದಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಲು ಪ್ರಸ್ತಾಪಿಸಿದೆ ಎಂದು ಆರ್‌ಬಿಐ ಹೇಳಿದೆ. ಎಲ್ಲಾ ಹೊಸ ಮತ್ತು ಅಸ್ತಿತ್ವದಲ್ಲಿರುವ ಪಾವತಿ ಮೂಲಸೌಕರ್ಯಗಳ ಮೇಲೆ ಜಿಯೋ-ಟ್ಯಾಗಿಂಗ್ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಚೌಕಟ್ಟನ್ನು ಪರಿಚಯಿಸಲು ಆರ್‌ಬಿಐ ಪ್ರಸ್ತಾಪಿಸಿದೆ.


Click it and Unblock the Notifications