ಅಮೆಜಾನ್ ಪೇ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಮೇಲೆ 3.06 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗುವುದುಉ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ಮಾಹಿತಿ ನೀಡಿದೆ. ಈ ಹಿಂದೆ ಹಲವಾರು ಬ್ಯಾಂಕುಗಳ ವಿರುದ್ಧ ಆರ್‌ಬಿಐ ದಂಡವನ್ನು ವಿಧಿಸಿದೆ. ಇದಕ್ಕಾಗಿ ಹಲವಾರು ಕಾರಣಗಳನ್ನು ಕೂಡಾ ನೀಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಆರ್‌ಬಿಐ ಮೂರು ಸಹಕಾರಿ ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಿತ್ತು.
ಆರ್‌ಬಿಐ ಅಮೆಜಾನ್ ಪೇ ಮೇಲೆ ಪ್ರಮುಖವಾಗಿ ಪೂರ್ವಪಾವತಿ ಸೂಚನೆ (ಪಿಪಿಐ) ಮತ್ತು ನೋ ಯುವರ್ ಕಸ್ಟಮರ್ (ಕೆವೈಸಿ) ನಿಯಮವನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡದ ಕಾರಣದಿಂದಾಗಿ ಈಗ ದಂಡವನ್ನು ವಿಧಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. "ಸಂಸ್ಥೆಯು ಆರ್‌ಬಿಐ ನೀಡಿವ ಕೆವೈಸಿ ಅಗತ್ಯಗಳ ನಿರ್ದೇಶನವನ್ನು ಸಪೂರ್ಣವಾಗಿ ಪಾಲನೆ ಮಾಡಿಲ್ಲ ಎಂಬುವುದು ನಮ್ಮ ಗಮನಕ್ಕೆ ಬಂದಿದೆ," ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಈ ಬಗ್ಗೆ ಆರ್‌ಬಿಐ ಅಮೆಜಾನ್ ಪೇ (ಇಂಡಿಯಾ) ಗೆ ನೋಟಿಸ್ ಅನ್ನು ನೀಡಿದೆ. ಸೂಚನೆಯನ್ನು ಪಾಲನೆ ಮಾಡದ ನಿಮ್ಮ ಮೇಲೆ ಆರ್‌ಬಿಐ ದಂಡವನ್ನು ಯಾಕೆ ಹಾಕಬಾರದು ಎಂಬ ಬಗ್ಗೆ ಸರಿಯಾದ ಕಾರಣವನ್ನು ನೀಡಿ ಎಂದು ಕೂಡಾ ಇದರಲ್ಲಿ ಉಲ್ಲೇಖಿಸಲಾಗಿದೆ. "ಸಂಸ್ಥೆಯ ಪ್ರತಿಕ್ರಿಯೆಯನ್ನು ಆಧಾರಿಸಿ ಆರ್‌ಬಿಐ ಮುಂದಿನ ಸೂಚನೆಯನ್ನು ನೀಡುತ್ತದೆ. ಶುಲ್ಕದ ಬಗ್ಗೆ ಮಾಹಿತಿ ನೀಡುತ್ತದೆ," ಎಂದು ಕೂಡಾ ಹೇಳಿದೆ. ಆದರೆ ಕೇಂದ್ರ ಬ್ಯಾಂಕ್ 3.06 ಕೋಟಿ ರೂಪಾಯಿ ಶುಲ್ಕವನ್ನು ನಿಗಧಿಪಡಿಸಿದೆ.
ಈ ಹಿಂದೆ ಸಹಕಾರಿ ಬ್ಯಾಂಕ್‌ಗಳಿಗೆ ದಂಡ ವಿಧಿಸಿದ್ದ ಆರ್‌ಬಿಐ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಳೆದ ವರ್ಷ ಫೆಬ್ರವರಿಯಲ್ಲಿ ಮೂರು ಸಹಕಾರಿ ಬ್ಯಾಂಕ್‌ಗಳಿಗೆ ದಂಡ ವಿಧಿಸಿದೆ. ದಿ ಬಿಗ್ ಕಾಂಚೀಪುರಂ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್-ಕಾಂಚಿಪುರಂ, ಚೆನ್ನೈ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮತ್ತು ದಿ ಬಾರಾಮುಲ್ಲಾ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡವನ್ನು ವಿಧಿಸಿದೆ.
ಅದಕ್ಕೂ ಮುನ್ನ ಸೆಂಟ್ರಲ್ ಬ್ಯಾಂಕ್ ನೀಡಿದ ಕೆಲವು ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐದು ಬ್ಯಾಂಕ್‌ಗಳ ವಿರುದ್ಧ ಒಟ್ಟು 6.35 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಹೈದರಾಬಾದ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್; ಜಿಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ ಮರ್ಯಾಡಿಟ್, ಗ್ವಾಲಿಯರ್; ವ್ಯವಸಾಯಿಕ್ ಸಹಕಾರಿ ಬ್ಯಾಂಕ್ ಲಿಮಿಟೆಡ್, ರಾಯಪುರ; ಮುಲಾ ಸಹಕಾರಿ ಬ್ಯಾಂಕ್ ಲಿಮಿಟೆಡ್, ಸೋನೈ, ಅಹ್ಮದ್‌ನಗರ ಮತ್ತು ಜಿಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ ಮರ್ಯಾದಿತ್, ಶಿವಪುರಿ ಬ್ಯಾಂಕ್‌ಗಳಿಗೆ ದಂಡವನ್ನು ವಿಧಿಸಲಾಗಿದೆ.


Click it and Unblock the Notifications