ಇಲ್ಲಿ ಕೇಳಿ..! ಶೀಘ್ರವೇ 100, 200 ರೂ.ಗಳ ಹೊಸ ನೋಟು ಬಿಡುಗಡೆ.. ಯಾರ ಸಹಿ ಇರುತ್ತೆ ಗೊತ್ತಾ?

ಇಲ್ಲಿ ಕೇಳಿ..! ..ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ 100 ಮತ್ತು 200 ರೂ. ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ ಎಂದು ಆರ್ ಬಿಐ ಘೋಷಣೆ ಮಾಡಿದೆ.

ಹೌದು, ಆರ್‌ಬಿಐನ ಹೊಸ 100 ಮತ್ತು 200 ರೂ.ಗಳ ಹೊಸ ಮುಖಬೆಲೆಯ ನೋಟುಗಳು ಅಧಿಕೃತ ಮಾಹಿತಿ ಪ್ರಕಾರ, ಮಹಾತ್ಮ ಗಾಂಧಿ (ಹೊಸ) ಸರಣಿಯ ಅಸ್ತಿತ್ವದಲ್ಲಿರುವ 100 ಮತ್ತು 200 ರೂ. ನೋಟುಗಳನ್ನು ಹೋಲುತ್ತದೆ ಆದರೆ ಅದರ ಮೇಲೆ ಆರ್‌ಬಿಐನ ಗವರ್ನರ್ ಸಂಜಯ್ ಮಲ್ಹೋತ್ರಾ ಸಹಿ ಇರಲಿದೆ ಎಂದು ಹೇಳಿಕೆ ನೀಡಿದ್ದಾರೆ.

100, 200 ರೂ.ಗಳ ಹೊಸ ನೋಟು ಬಿಡುಗಡೆ ಯಾರ ಸಹಿ ಇರುತ್ತೆ ಗೊತ್ತಾ?

ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿಯೊಂದಿಗೆ ಕರೆನ್ಸಿಯನ್ನು ಪರಿಚಯಿಸುವುದು ಬ್ಯಾಂಕಿನ ನೋಟುಗಳ ಸರಣಿಯಲ್ಲಿ ಗಮನಾರ್ಹವಾದ ವಿನ್ಯಾಸ ಹಾಗೂ ವಿಶೇಷತೆಯಾಗಿರುತ್ತದೆ.ಇದರಿಂದ ನೋಟುಗಳು ನಕಲಿಯನ್ನು ಪತ್ತೆ ಹೆಚ್ಚಬಹುದು.

ಹೊಸ ರೂ 100 ಮತ್ತು ರೂ 200 ನೋಟುಗಳ ವಿನ್ಯಾಸ ಅಂಶಗಳು ಈ ಹಿಂದೆ ಮಹಾತ್ಮ ಗಾಂಧಿ (ಹೊಸ) ಸರಣಿಯಲ್ಲಿ ನೀಡಲಾದವುಗಳೊಂದಿಗೆ ಸ್ಥಿರವಾಗಿರುತ್ತವೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ಮಾಹಿತಿಯನ್ನು ತಿಳಿಸಿದೆ. ಈ ವಿನ್ಯಾಸದಲ್ಲಿ ಈ ಸ್ಥಿರತೆಯು ಚಲಾವಣೆಯಲ್ಲಿರುವ ಕರೆನ್ಸಿಯಾದ್ಯಂತ ಏಕರೂಪತೆಯನ್ನು ಕಾಯ್ದುಕೊಳ್ಳುವ ಗುರಿಯನ್ನು ಈ ಹೊಸ ನೋಟುಗಳು ಹೊಂದುತ್ತೇವೆ ಎಂದು ಹೇಳಿದ್ದಾರೆ.

ಈ ಹಿಂದೆ ರಿಸರ್ವ್ ಬ್ಯಾಂಕ್ ಇಂಡಿಯಾ ಬಿಡುಗಡೆ ಮಾಡಿದ 100 ಮತ್ತು 200 ರೂಪಾಯಿ ಮುಖಬೆಲೆಯ ಎಲ್ಲ ನೋಟುಗಳು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಇರುತ್ತವೆ ಎಂದು ಸಹ ಎಂದು ಮಾಹಿತಿಯನ್ನು ತಿಳಿಸಲಾಗಿದೆ.

ದೇಶದಲ್ಲಿಹಣಕಾಸು ವ್ಯವಸ್ಥೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಈ ಕ್ರಮ ಅಗತ್ಯವಾಗಿದೆ. ಅದರಂತೆ ಹೊಸ ನೋಟುಗಳು ಶೀಘ್ರದಲ್ಲೇ ಚಲಾವಣೆಗೆ ಬರಲಿವೆ ಎಂದು ಆರ್​​ಬಿಐ ತನ್ನ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ತಿಳಿಸಿದೆ.

ಶಕ್ತಿಕಾಂತ ದಾಸ್ ಅವರ ಅದಿಕಾರ ಅವಧಿ ಪೂರ್ಣಗೊಂಡ ನಂತರ ಅವರ ಸ್ಥಾನದಲ್ಲಿ ಸಂಜಯ್‌ ಮಲ್ಹೋತ್ರಾ 2024 ರ ಡಿಸೆಂಬರ್​ನಲ್ಲಿ ಆರ್​ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.ಮುಂದಿನ ಮೂರು ವರ್ಷಗಳ ಕಾಲ ಈ ಹುದ್ದೆಯಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ.

ಸಂಜಯ್ ಮಲ್ಹೋತ್ರಾ ಅವರ ಹಿನ್ನಲೆ

ಸಂಜಯ್ ಮಲ್ಹೋತ್ರಾರಾಜಸ್ಥಾನ ಕೇಡರ್‌ನ 1990-ಬ್ಯಾಚ್‌ನ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಯಾಗಿದ್ದಾರೆ. ಇವರು ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ ಪದವೀಧರರಾಗಿದ್ದು ಆ ಬಳಿಕ ಅಮೇರಿಕಾದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡವರಾಗಿದ್ದಾರೆ. ಸುಮಾರು 33 ವರ್ಷಗಳ ವೃತ್ತಿಜೀವನವನ್ನು ಹೊಂದಿರುವ ಸಂಜಯ್ ಹಲವು ಇಲಾಖೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ವಿದ್ಯುತ್, ಹಣಕಾಸು ಮತ್ತು ತೆರಿಗೆ, ಮಾಹಿತಿ ತಂತ್ರಜ್ಞಾನ, ಗಣಿಗಳು ಇತ್ಯಾದಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೆಲಸದ ಅನುಭವ ಹೊಂದಿರುವ ಸಂಜಯ್ ಮಲ್ಹೋತ್ರಾ ಅವರು ಪ್ರಸ್ತುತ ಕಂದಾಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಂದಾಯ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು, ಅವರು ಹಣಕಾಸು ಸೇವೆಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ಇದಕ್ಕೂ ಹಿಂದೆ ಅವರು ರಾಜ್ಯ-ಆರ್‌ಇಸಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ.

ರಾಜ್ಯ-ಆರ್‌ಇಸಿಯ ಅಧ್ಯಕ್ಷರಾಗಿದ್ದ ವೇಳೆ, ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಏರಿಕೆ ಸಾಧಿಸಿದ್ದಾರೆ.ಇದಲ್ಲದೇ ಬಜೆಟ್ ಮತ್ತು ತೆರಿಗೆ ನೀತಿಗಳಲ್ಲಿನ ಪಾತ್ರವಹಿಸಿದ್ದಾರೆ. GST ಕೌನ್ಸಿಲ್‌ನ ಪದನಿಮಿತ್ತ ಕಾರ್ಯದರ್ಶಿಯಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ವಿದ್ಯುತ್ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಮತ್ತು 3 ಲಕ್ಷ ಕೋಟಿ ರೂಪಾಯಿಗಳ ವಿದ್ಯುತ್ ವಿತರಣಾ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+