ನವದೆಹಲಿ, ಅ. 30: ವಿಶ್ವಾದ್ಯಂತ ಎಲ್ಲಾ ದೇಶಗಳಿಗೂ ಈಗ ಹಣದುಬ್ಬದ ಚಿಂತೆಯೇ ಆಗಿದೆ. ಜಾಗತಿಕವಾಗಿ ಹಣದುಬ್ಬರ ಏರಿಕೆ ದೊಡ್ಡ ತಲೆನೋವಾಗಿದೆ. ಭಾರತದಲ್ಲೂ ನಿರೀಕ್ಷೆಮೀರಿ ಹೆಚ್ಚಿನ ಮಟ್ಟದಲ್ಲಿ ಹಣದುಬ್ಬರ ಸಮಸ್ಯೆ ಇದೆ. ಶೇ. 6ಕ್ಕಿಂತ ಒಳಗೆ ಹಣದುಬ್ಬರವನ್ನು ತರುವ ತನ್ನ ಗುರಿಯನ್ನು ಮುಟ್ಟಲು ಆರ್‌ಬಿಐ ವಿಫಲವಾಗಿದೆ.
ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಹಣದುಬ್ಬರ ಏ. 6ರ ಗಡಿ ದಾಟಿ ಹೊರಗೇ ಇದೆ. ಜನವರಿ 1ರಿಂದ ಸೆಪ್ಟೆಂಬರ್ 30ರವರೆಗೆ ಬರುವ ಮೂರು ಅವಧಿಯಲ್ಲೂ ಒಮ್ಮೆಯೂ ಹಣದುಬ್ಬರ ಶೇ. 6ರ ಒಳಗೆ ಬರಲಾಗಿಲ್ಲ. ಈ ಹಿನ್ನೆಲೆಯಲ್ಲಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ತಾನೇಕೆ ವಿಫಲನಾಗಿದ್ದೇನೆ ಎಂದು ವಿವರಿಸಿ ಆರ್‌ಬಿಐ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
2016ರಲ್ಲಿ ಕೇಂದ್ರ ಸರ್ಕಾರ ಹಣಕಾಸು ನೀತಿ ಚೌಕಟ್ಟನ್ನು (ಮಾನಿಟರಿ ಪಾಲಿಸಿ ಫ್ರೇಮ್‌ವರ್ಕ್) ಜಾರಿಗೆ ತಂದಿತ್ತು. ಅದರಲ್ಲಿ ನಿಗದಿ ಪಡಿಸಲಾದ ಗುರಿಯನ್ನು ಆರ್‌ಬಿಐ ಶತಾಯಗತಾಯ ಈಡೇರಿಸಬೇಕು. ಹಣದುಬ್ಬರವನ್ನು ಶೇ. 2ರಿಂದ ಶೇ. 4ರ ಒಳಗೆ ಇರುವಂತೆ ನೋಡಿಕೊಳ್ಳಬೇಕು ಎಂದು ಮಾನಿಟರಿ ಪಾಲಿಸಿ ಫ್ರೇಮ್‌ವರ್ಕ್‌ನಲ್ಲಿ ನಿಗದಿ ಮಾಡಲಾಗಿತ್ತು. ಒಂದು ವೇಳೆ ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ಇನ್‌ಫ್ಲೇಷನ್ ಟಾರ್ಗೆಟ್ ಅನ್ನು ಮುಟ್ಟದೇ ಹೋದಲ್ಲಿ ಆರ್‌ಬಿಐ ಕಾಯ್ದೆ 45ಝಡ್‌ಎನ್ ಸೆಕ್ಷನ್ ಅಡಿಯಲ್ಲಿ ವಿವರಣೆಯೊಂದಿಗೆ ಆರ್‌ಬಿಐ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
ಹಣದುಬ್ಬರ ಯಾಕೆ ನಿಯಂತ್ರಣಕ್ಕೆ ಬಂದಿಲ್ಲ ಎಂಬುದಕ್ಕೆ ಕಾರಣಗಳನ್ನು ನೀಡಬೇಕು. ಜೊತೆಗೆ ಹಣದುಬ್ಬರ ತಡೆಗೆ ಏನೇನು ಕ್ರಮ ಕೈಗೊಳ್ಳಬಹುದು ಎಂಬ ಸಲಹೆಗಳನ್ನು ಅಥವಾ ಕಾರ್ಯಸೂಚಿಯನ್ನು ಈ ವರದಿಯಲ್ಲಿ ತಿಳಿಸಬೇಕು.

ನವೆಂಬರ್ 3ರಂದು ಆರ್‌ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ವಿಶೇಷ ಸಭೆ ಇದಕ್ಕಾಗಿಯೇ ನಡೆಯುತ್ತಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಈ ಹಣಕಾಸು ನೀತಿ ಸಮಿತಿಯಲ್ಲಿ ಆರು ಸದಸ್ಯರಿದ್ದು, ಇನ್‌ಫ್ಲೇಷನ್ ಗುರಿಯನ್ನು ಮುಟ್ಟಲು ವಿಫಲವಾಗಿರುವುದಕ್ಕೆ ಕಾರಣಗಳನ್ನು ಅವಲೋಕಿಸಿ ವರದಿಯನ್ನು ಸಿದ್ಧಪಡಿಸಲಿದ್ದಾರೆ.
ಆರ್‌ಬಿಐ ಸಲ್ಲಿಸುವ ಈ ವರದಿಯಲ್ಲಿ ಏನು ಅಂಶಗಳಿರುತ್ತವೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಆದರೆ, ಸರ್ಕಾರ ಈ ವರದಿಯನ್ನು ಬಹಿರಂಗಪಡಿಸುವುದಿಲ್ಲ ಎಂಬ ವಿಶ್ವಾಸದಲ್ಲಿ ಗವರ್ನರ್ ಶಕ್ತಿಕಾಂತ ದಾಸ್ ಇದ್ಧಾರೆ. ಸರ್ಕಾರ ಕೂಡ ವರದಿ ಬಹಿರಂಗಪಡಿಸುವ ಇರಾದೆಯಲ್ಲಿ ಇಲ್ಲವಾದರೂ ಚರ್ಚೆ ಮತ್ತು ಸಲಹೆಗಳಿಗೆ ಅವಕಾಶವಾಗಲೆಂದು ವರದಿ ಸಾರ್ವತ್ರಿಕಗೊಳಿಸಿದರೂ ಅಚ್ಚರಿ ಇಲ್ಲ.

ಐದು ವರ್ಷಗಳಿಗೊಮ್ಮೆ ಟಾರ್ಗೆಟ್
ಆಗಲೇ ತಿಳಿಸಿದಂತೆ 2016ರಲ್ಲಿ ಮಾನಿಟರಿ ಪಾಲಿಸಿ ಫ್ರೇಮ್‌ವರ್ಕ್ ರಚಿಸಲಾಗಿತ್ತು. ಅದರಂತೆ ಪ್ರತೀ ಐದು ವರ್ಷಗಳಿಗೊಮ್ಮೆ ಹಣದುಬ್ಬರ ನಿಯಂತ್ರಣಕ್ಕೆ ಗುರಿ ನಿಗದಿ ಮಾಡಲಾಗುತ್ತದೆ. 2016ರಲ್ಲಿ ಮುಂದಿನ ಐದು ವರ್ಷಕ್ಕೆ ಶೇ. 4ರಲ್ಲಿ ಹಣದುಬ್ಬರ ಇರಬೇಕೆಂದು ತಿಳಿಸಲಾಗಿತ್ತು. ಶೇ. 4 ಹಾಗು ಆಸುಪಾಸು ಶೇ. 2ರ ಸಡಿಲಿಕೆಯೊಂದಿಗೆ ಗುರಿ ಕೊಡಲಾಗಿತ್ತು. ಅಂದರೆ, ಶೇ. 2ರಿಂದ ಶೇ. 6ರ ಒಳಗೆ ಇನ್‌ಫ್ಲೇಷನ್ ಇರಬೇಕೆಂದು ಟಾರ್ಗೆಟ್ ಫಿಕ್ಸ್ ಮಾಡಲಾಗಿತ್ತು. ಆ ಐದು ವರ್ಷದಲ್ಲಿ ಆರ್‌ಬಿಐ ತನ್ನ ಗುರಿಯನ್ನು ಬಹುತೇಕ ಮುಟ್ಟುವಲ್ಲಿ ಯಶಸ್ವಿಯಾಗಿತ್ತು.
ಇನ್ನು, 2021ರ ಏಪ್ರಿಲ್‌ನಿಂದ 2026 ಮಾರ್ಚ್ 31ರವರೆಗಿನ ಐದು ವರ್ಷಕ್ಕೆ ಹಿಂದಿನ ಹಣದುಬ್ಬರ ಟಾರ್ಗೆಟ್ ಅನ್ನೇ ನಿಗದಿ ಮಾಡಲಾಗಿದೆ. ಆದರೆ, ಈ ವರ್ಷದಿಂದ ಹಣದುಬ್ಬರ ಶೇ. 6ಕ್ಕಿಂತ ಹೊರಗೇ ಉಳಿದಿದೆ. ಇತ್ತೀಚಿನ ಹಣದುಬ್ಬರವು ಶೇ. 7.41 ರಷ್ಟು ಇದೆ. ಸತತ ಮೂರು ತ್ರೈಮಾಸಿಕ ಅವಧಿಗೆ ಹಣದುಬ್ಬರದ ಗುರಿ ತಪ್ಪಿಹೋಗಿದ್ದು ಕಳೆದ ಆರು ವರ್ಷದಲ್ಲಿ ಇದೇ ಮೊದಲು.
ಆರ್‌ಬಿಐ ಕೂಡ ಹಣದುಬ್ಬರ ನಿಯಂತ್ರಣಕ್ಕಾಗಿ ಬಹಳ ಕಸರತ್ತು ನಡೆಸುತ್ತಿದೆ. ಸತತವಾಗಿ ಬಡ್ಡಿ ದರಗಳನ್ನು ಏರಿಸುತ್ತಾ ಬಂದಿದೆ. ಆದರೆ, ರಷ್ಯಾ ಉಕ್ರೇನ್ ಯುದ್ಧ, ಕೋವಿಡ್‌ನಿಂದಾದ ಆರ್ಥಿಕ ಬಿಕ್ಕಟ್ಟು, ಜಾಗತಿಕ ಆರ್ಥಿಕ ಹಿಂಜರಿತ, ಅಮೆರಿಕದ ಆರ್ಥಿಕ ದುಸ್ಥಿತಿ, ಡಾಲರ್ ಕರೆನ್ಸಿ ಬಲವೃದ್ಧಿ ಇತ್ಯಾದಿ ವಿವಿಧ ಕಾರಣಗಳು ಭಾರತದ ಹಣದುಬ್ಬರ ಸ್ಥಿತಿ ಬಿಗಡಾಯಿಸುವಂತೆ ಮಾಡಿದೆ ಎಂಬುದು ತಜ್ಞರ ಅನಿಸಿಕೆ. ಆರ್‌ಬಿಐನ ಎಂಪಿಸಿ ಸದಸ್ಯರು ನವೆಂಬರ್ 3ರಂದು ಸಭೆ ನಡೆಸಿ ಯಾವ ಕಾರಣಗಳನ್ನು ಅವಲೋಕಿಸುತ್ತಾರೆಂಬುದು ಕುತೂಹಲ ಮೂಡಿಸಿದೆ.
More From GoodReturns

ಹಣದುಬ್ಬರ ದರ ಏರಿಕೆ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಮಾರ್ಚ್ ಸಿಪಿಐ ದತ್ತಾಂಶ: ನಿಮ್ಮ ಇಎಂಐ ಹೊರೆ ಕಡಿಮೆಯಾಗಲಿದೆಯೇ?

ಆರ್‌ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?



Click it and Unblock the Notifications